Sunday, April 10, 2016

ಪರಶುರಾಮ ಸೃಷ್ಠಿ ಕಥನಗಳ ನಿತ್ಯೋತ್ಸವ - ಸುರೇ೦೦೭ - ನಮ್ಮೂರ ದಕ್ಕಿಬಲಿಯಲ್ಲೊಂದು ದಿನ ನನ್ನ ಅನುಭವ ನಿಮ್ಮೊಂದಿಗೆ

Image courtesy: https://en.wikipedia.org/wiki/Nagaradhane#/media/File:Nagapatri.JPG

ಸುರೇ೦೦೭
ಪರಶುರಾಮ ಸೃಷ್ಠಿ ಕಥನಗಳ ನಿತ್ಯೋತ್ಸವಃ ನಮ್ಮೂರ ದಕ್ಕಿಬಲಿಯಲ್ಲೊಂದು ದಿನ ನನ್ನ ಅನುಭವ ನಿಮ್ಮೊಂದಿಗೆ

Original post:
https://www.facebook.com/permalink.php?story_fbid=1763440090544660&id=1705466946341975

Writer profile:
https://www.facebook.com/Bhavishya-by-Pasu-1705466946341975/?fref=nf
https://www.facebook.com/surendra.upadhya.7?fref=ts

ನಮ್ಮೂರ ದಕ್ಕಿಬಲಿಯಲ್ಲೊಂದು ದಿನ ನನ್ನ ಅನುಭವ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದಿರುವೆ. ಸಾಮಾನ್ಯವಾಗಿ ದಕ್ಕಿ ಬಲಿ ನಮ್ಮೂರ ಇಸ್ಟದೇವತೆಗೆ ಆಗುವಂತಹ ಕಾರ್ಯಕ್ರಮ. ಮಧ್ಯಾಹ್ನ ವಾಲ್ಗದವರ್ ನಮ್ಮನಿ ಮೇಲೆ ಇರ್ವ, ಗುಡ್ಡೀ ಮೇಲೆ ಬಂತೆಂದರೆ, ನಮ್ಮ ಅಪ್ಪೈಯ್ಯ ಹೇಳ್ತಿದ್ರು ಮಕ್ಳೇ ವಾದ್ಯದವ್ರು ಕಿಟ್ಟಪ್ಪನಾಯ್ಕನಿಗೆ ಬಲಿಹರಣ ಕೊಡ್ಲಿಕ್ಕೆ ಹೋದ್ರು. ನೀವೆಲ್ಲಾ ಈಗ ಇಸ್ಟದೇವ್ತೆಯ ದೇವಸ್ಥಾನಕ್ ಹೋಗ್ಬಹುದು. ಇನ್ನರ್ಧ ಗಂತಟೆಯಲ್ಲಿ ಮಂಗ್ಳಾರ್ತಿ ಆತ್ ಅಂದ್ರ್. ಆದ್ರೇ ನಾ ಇಲ್ಲಿ ಸತ್ಯ ಹೇಳೂದಾ. ಆ ಮಂಗ್ಳಾರ್ತಿ ಯಾರಿಗ್ ಬೇಕ್ ಮರಾಯ್ರೇ. ನಮ್ಗ್ ಬೇಕಾಗಿರೋದು ಗಮ್ಮತ್ತಿನ ಬಿಟ್ಟೀ ಕೂಳ್. ಅದ್ಕೇ ನಾನು, ಗೋಂಯ್ದಯ್ಯನ್ ಮನಿ ಜನ್ನಾ, ಗಿರ್ಜಕ್ಕನ್ ಮನಿ ಪದ್ನಾಭ, ಗಣ್ಪಣ್ಣನ್ ಮನಿ ವಿಶ್ವನಾಥ, ನಾರಾಯಣ್ ಚಿಕ್ಕಪ್ಪನ್ ಮನಿ ಪರ್ಮೇಷ್ವರ, ರುಕ್ಮುಣಕ್ಕನ್ ಮನಿ ವೆಂಟ್ರಣ್ಣ, ಆಚಿ ಮನಿ, ಅಂದ್ರೇ ಮುಂಡಾಯ್ಸ್ ರಾಯ್ರ್ ಮನೀ ಗಂಗಾಧರಾ, ರಾಮ್ದೊಡ್ಡಪ್ಪೈಯ್ಯನ ಮನಿ ಮಂನ್ಯಾತಾ, ವೆಂಟ್ರಣ್ಣಾ, ಮಾವ್ಲ್ ಮಾಸ್ಟ್ರ್ ಮನೀ ನಾಗ್ಭೂಷ್ಣಾ, ವಿಷ್ನುಮೂರ್ತಿ ಉಪಾಧ್ಯರ್ ಮನಿ ಹರಿಕ್ರಷ್ಣಾ ಹೀಗೆ ಎಲ್ಲಾ ಸೇರ್ತಿತ್ ಅಂತ ಮಾಡಿ. ಮಂಗ್ಳಾರ್ತೀ ಆದ್ದೇ ತಡ, ಕುಟ್ ಲಾಗಾಯ್ಸೀ ಊಟಕ್ ಬಡಿನ್ ಬದೀ ವಿಷ್ಣು ಮನೀಗ್ ಊಟಕ್ ಎಲೀ ಮಾಡ್ಲಿಕ್ ಓಡ್ತಿತ್ ಕಾಣಿ . ಹಾಂಗೆ ರಾತ್ರಿ ಕೂಡಾ ಇದೇ ರೀತಿ ವ್ಯವಸ್ಥಾ ಉಂಟ್. ಆದ್ರೆ ರಾತ್ರಿ ಮಾತ್ರ ಸುಮಾರ್ ೮-೮.೩೦ಗ್ ದೇವ್ರ್ ಮುಂದ್ ದರ್ಷನ್ ಒಂದ್ ಜಾಸ್ತಿ ಇತ್. ಅದೂ ಕಾಂಬೂಕ್ ಬಹ್ಳಾ ಅಂದ್ರೇ ಬಹ್ಳಾ ಚಂದ ಕಾಣಿ. ನಾವ್ ಕಾಂಬ್ ಹೊತ್ತಿಗ್ ಬಡೀನ್ ಕುಟುಂಬದ್ ರಾಮೈತಾಳ್ರ್ (ಇರ್ಕ್ ಸರೀ ಜ್ನಾಪಕ್ ಇಲ್ಲಾ, ಇರ್ಲಿ) ಕೋಟೇಷ್ವರದ್ ಬಾಯ್ರ್, ಕಾರ್ಕಡದ್ ಬೋಳಪ್ಪೈಯ್ಯ ಹೀಗೆ ಬೇರ್ಬೇರೆ ದರ್ಷನ್ ಪಾತ್ರಿಗಳ್ನ್ ಪಟೇಲ್ರ್ ಮನೀ ಮಾಬ್ಲ ಉಪಾಯ್ದ್ರ್ ಕರ್ಸ್ತಿದ್ರ್. ಈ ದರ್ಷನದಲ್ ಬೇರೆ ಬೇರೆ ಪಾತ್ರಿಗಳ್ ಹೇಂಗ್ ಆದ್ರ್ ಅಂದ್ರೇ, ಈ ಮಾಬ್ಲ್ ಉಪಾಯ್ದ್ರಿಗ್ ಯಾರ್ ತಾಗ್ ಬರ್ತಿದ್ರೋ ಅವ್ರನ್ ಬರೂ ವರ್ಷ್ ಚೇಂಜ್ ಮಾಡ್ತಿದ್ರ್.
ಒಂದ್ಸರಿ ಏನಾಯ್ತೆಂದ್ರೇ, ಪಟೇಲ್ರ್ ಕಾಲ್ದಲ್ಲಿ ಪಟೇಲ್ರ್ ಈ ಎಂಕ್ಟಯ್ನ್ ಮನಿ ದಕ್ಕಿ ಬಲಿ ದಿವ್ಸ ಅವ್ರಿಗ್ ಕೊಟ್ಟ್ ಮರ್ಯಾದೆ ಸಾಕಿಲ್ಲಾ ಅಂತ್ ಹೇಳಿ ಹಾಂಗೇ, ಅವ್ರ್ ಮನಿ ಚಾವ್ಡಿಯಲ್ ಕಾಲ್ ಮೇಲ್ ಕಾಲ್ ಹಾಕಂಡ್ ಹಾಂಗೆ ಮನೀ ಕಂಬಕೊರ್ಗಿ ಕುಳ್ತ್ಕೊಂಡ್ರ್ ಕಾಣಿ. ಗಂಟಿ ರಾತ್ರಿ ೯.೩೦ ಆಯ್ತು, ೧೦ ಆಗ್ಲಿಕ್ ಶುರು ಆಯ್ತೂ , ಆದ್ರೂ ಪಟೇಲ್ರ್ ಜಪ್ಪೈಯ್ಯಾ ಅಂತ ಇದ್ ಜಾಗ ಬಿಟ್ ಬರ್ಲಿಲ್ಲ ಕಾಣಿ.ಇನ್ ಯಾವಾಗ್ ಮರಾಯ್ರೇ ದೇವ್ರಿಗ್ ಮಂಗ್ಳಾರ್ತಿ ಆಗೋದ್?. ಸುಮಾರ್ ೧೫೦ರಿಂದ ೨೦೦ ಜನ ದರ್ಷನ ನೋಡ್ಲಿಕ್ ಸೇರಿದ್ರ್. ತೆಗಣೀ, ನಮ್ಮ ಎಂಕ್ಟಯನ ಮನಿ ಕಾಫಿಪುಡಿ ನಾರಾಯಣ್ ಉಪಾಧ್ಯ್ರಿಗ್ ಎಲ್ಲಿಲ್ಲದ ಕೋಪ್ ಬಂತ್ ಕಾಣೀ. ಸೀದಾ ಹೋಗಿ ಆ ಪಟೇಲ್ರನ್ ಹಾಂಗೆ ಎರ್ಡೂ ಕೈನಲ್ಲಿ ಬಾಚೀ ಎದೀಗ್ ಚಚ್ಕಂಡ್ ದೇವಸ್ತಾನದೊಳ್ಗ್ ಕರ್ದ್ಕೊಂಡ್ ಬಂದ್ ಕಂಬದ್ ಹತ್ರಾ ಕುಕ್ಕಿ ಕುಡ್ಸಿದ್ ಸ್ಟೈಲ್ ನೋಡಿದ್ರೇ ನಮ್ಗೆಲ್ಲಾ ದೊಡ್ಡ ಹಬ್ಬವೇ ಹಬ್ಬ!. ಬಹಳ ಗಮ್ಮತ್ ಇತ್ ನಂಗೆಲ್ಲಾ. ಪಟೇಲ್ರಿಗ್ ಎಲ್ಲಿಲ್ಲದ ಸಿಟ್ಟ್. ಆದ್ರೇ ಏನ್ಮಾಡ್ವಾ? ಕೇಂಬೂಕ್ ಯಾರಿಲ್ಲ!. ಹಾಂ ಮುಂದ್ವರ್ಸೀ ಅಂತ ಹೇಳಿದ್ದೇ ತಡ, ದರ್ಶನ ಮಾಡ್ಲಿಕ್ ಪಾತ್ರಿಗಳಿಗ್, ಉಪೇಂದ್ರ ಐತಾಳ್ರು (ಈಗಿಲ್ಲ ಅಂತ ಮಾಡಿ) ಹೂ ಕೊಟ್ಟದ್ದೇ ಕೊಟ್ಟದ್. ಹೋ ಹೋ ಹೋ! ಆವತ್ತಿನ್ ದರ್ಷನ ಹೇಂಗಿತ್ ಅಂತ ಕೇಳ್ತೀರಾ? ನಮ್ಮೂರ್ ಭಾಷೆಯಲ್ಲ್ ಹೇಳೂದ್ ಆದ್ರೆ, ಸಕತ್ ಇತ್. ಪಾತ್ರಿಗಳ್ ಹಾವಿನ್ ತರ ಮೈ ಭಾಗ್ಸಿದ್ದೇ ಭಾಗ್ಸಿದ್. ಅದೂ ಅವರ್ ಕುಣಿಯುವ ಮುಂದೆ ಕೆಲವ್ರ್ ಚಂದದ್ ಹೆಂಗ್ಸ್ರೂ, ಇಲ್ಲಾ ಹೆಣ್ಮಕ್ಳ್ ನಿಂತಿದ್ದ್ರೇ ಇನ್ನಸ್ಟ್ ಜಾಸ್ತಿ!. ಪಾತ್ರಿಗಳಿಗೂ ಒಂದ್ ಹುಮ್ಮಸ್ ಬರ್ತಿತ್ ಕಾಣಿ. ಅಲ್ಲಾ ನನ್ನನ್ ತಪ್ ತಿಳ್ಕೊಳ್ಬೇಡಿ. ಈ ಸುರೇಂದ್ರ ೬೪ ವರ್ಷದಲ್ಲಿ ಹೀಂಗ್ ಬರೀತ್ನಲ್ಲಾ, ಇವ್ನಿಗ್ ಮಂಡಿ ಗಿಂಡಿ ಸರೀ ಇತ್ತಾ ಇಲ್ಲ್ಯಾ? ಡಕ್ಟ್ರೀಗ್ ತೋರ್ಸ್ ಅಂತ್ ಹೇಳ್ಸೂದಾ ಅಂತ ಹೇಳ್ಬೇಡಿ. ಇದ್ ನನ್ನ ಅನುಭವ. ಅದ್ ಯಾವತ್ತೂ ಸುಳ್ ಹೇಳೂಕ್ ಆಪುದಲ್ಲ ಕಾಣಿ, ಹಾಗೂ ಸುಳ್ಳೂ ಅಲ್ಲ! ನೂರುಕ್ ನೂರೂ ಸತ್ಯ ಘಟನೆ ಇದು. ಕೊನೇಗ್ ನಮ್ಮ ದಕ್ಕಿ ವೈದ್ರದ್ ದಕ್ಕಿ ಬೇಕಂತೇ ಜಾಸ್ತಿ ಅವ್ರ್ ಕಿವಿ ಹತ್ರಾ ಹೋಗಿ ಬಡೀಲಿಕ್ ಶುರ್ ಮಾಡಡ್ತಿದ್ರ್. ಇದ್ ಏಕ್ ಅಂತ ಕೇಳ್ತೀರ್ಯಾ? ನಮ್ ದರ್ಷನ್ ಪಾತ್ರಿಗಳಿಗೊಂದ್ ಇದ್ ಗಂಟೀ ಇದ್ದ್ ಹಾಂಗೆ ಕಾಣಿ. ಎಲ್ಲಾದ್ರೂ ಅವ್ರ್ ಆಚೀ ಈಚೇ ಜಾಸ್ತಿ ಮಾಡಿದ್ರೆನ್ನಿ, ಈ ದಕ್ಕೀ ಗಂಟಿ ಅವ್ರ ಕಿವಿ ಹತ್ತ್ರ ಬಡೀತಿದ್ರ್. ಆಗ ಅವ್ರ್ ಅಲ್ಲಿಂದ್ ಏಳ್ಕೇ ಏಳ್ಕ್. ಇಲ್ಲಾಂದ್ರೇ ಅವ್ರ್ ಇನ್ನಸ್ಟ್ ಹೆಚ್ಚ್ ಹೊತ್ತ ಬಾರ್ಸ್ತಾನೇ ಇರ್ತ್ರ್ ಕಾಣಿ. ಕೊನೆಯಲ್ಲಿ ಸಿಂಗಾರ್ ಹೂವನ್ನ ಹೆಂಗ್ಸ್ರೀಗ್, ಗಂಡ್ಸ್ರೀಗ್ ಬಿಸಾಕಿ ಇನ್ನಸ್ಟ್ ಶ್ರಂಗಾರ್ ಹೋವ್ ಮತ್ತ್ ನೀರ್ ತೆಕಂಡ್ ಮುಖಕ್ ಉಜ್ಜಿ ಒಂದು ಸುತ್ ತಿರ್ಗಿ, ಪಟೇಲ್ರಿಗೂ ಪ್ರಸಾದ ಕೊಟ್, ಗೋಯಿಂದಯ್ಯನಿಗೂ ಕೊಟ್ ( ಈ ಸನ್ನಿವೇಷ ನಡೀ ಕಾಲ್ದಲ್ಲಿ ಗೋಯಿಂದಯ್ಯ ಉಪಾಧ್ಯರು ಪಟೇಲ್ರ್ ಪರ್ವಾಗಿ ಕೆಲ್ಸ ಮಾಡ್ತಿದ್ರ್ ಕಾಣಿ) ದೇವ್ರ್ ಮುಂದ್ ಧೊಪ್ಪನೆ ಹಾರಿ ಒಂದೇ ಸಮ್ನೆ ಕವುಂಚ್ ಉದ್ದಕ್ಕ್ ಬಿದ್ ಹೊಡ್ತಕ್ ಬೇರವ್ರ್ ಆಗಿದ್ರೇ ಸತ್ತೇ ಹೋಗ್ತಿದ್ರೋ ಏನೋ ಕಾಣೆ. ಇದನ್ನೇ ಜನ್ರೆಲ್ಲಾ ದೇವ್ರ್ ಸತ್ಯಾ ಅಂತ ತಿಳೀತಿದ್ರ್ ಅಂತ ಮಾಡಿ. ಆದ್ರೇ ನಮ್ಗ್ ಒಂದ್ ಆಟ ನೋಡಿದ್ ಹಾಂಗನ್ಸ್ತಿತ್!. ನಮ್ಗೆಲ್ಲಾ ಎಸ್ಠೊತ್ತಿಗ್ ಊಟ ಹಾಕ್ತ್ರಪ್ಪಾ ಅನ್ಸ್ತಿತ್ತೇ ವಿನಹ, ಇದ್ರ್ ಮೇಲ್ ಖಂಡಿತಾ ಅಸ್ಟೊಂದ್ ನಂಬ್ಕೇನು ಇಲ್ಲ, ಭಕ್ತಿಯಂತೂ ಕೇಳ್ಳೇಬೇಡಿ!. ಒಟ್ಟಾರೇ ರಾತ್ರಿ ೧೧ ಕ್ಕೆ ಮುಗೀತ್ ಕಾಣಿ. ನಾವ್ ಓಡಿ ಹೋಗಿ ಎಲೀ ಮಾಡಿ ಊಟಕ್ ಕುಳಿತದ್ದೇ ಕುಳಿತದ್. ಆವತ್ತೆಲ್ಲಾ ಕಾಫಿಪುಡಿ ನಾರಾಯಣಣ್ಣಂದೇ ಮಾತ್. ಅವ್ರ್ ಮಾಡಿದ್ ಸಮಾ ಆಯ್ತ್. ಅದೇ ಪಾಟೇಲ್ರ್ ಎಂಟ್ರಿ ಅಂತ್ಯ ಆಯ್ತಾ ಅಂತ ಕಾಣ್ಸಿತ್. ಆಮೇಲ್ ಬಂದ್ರೂ ಅವ್ರ್ ತಮ್ಮ ಗೋಯಿಂದ್ ಉಪಾದ್ರ ದರ್ಬಾರ!. ಅದಂತುದೋ ಗೊತ್ತಿಲ್ಲ. ಯಾರ್ ಆ ಪಟ್ಟಕ್ ಬರ್ತಾರೋ ಅವ್ರಿಗ್ ಸ್ವಲ್ಪ ದಿವ್ಸಾ ದೇಶ ಕಾಣ್ಸೂದ್ ಇಲ್ಲ ಮಾರಾಯ್ರೇ.ಅದೆಂತುದೋ ಗೊತ್ತಿಲ್ಲೆ. ಅದೂ ಕೂಡ ನಮ್ ಇಸ್ಟ ದೇವ್ತೇ ಮಹಿಮೆಯೋ ಏನೋ?! ನಮ್ಗ್ಯಾಕೆ ಹೇಳಿ. ಮಾಡಿದವ್ರ ಪಾಪ ಹೇಳಿದವ್ರ್ ಬಾಯಲ್ ಅಂತ ಒಂದ್ ಗಾದಿ ಮಾತೇ ಇತ್ ಕಾಣಿ.
ಆದ್ರೆ ಇಲ್ ನಾನ್ ಹೇಳ್ಬೇಕಾದ್ ವಿಷ್ಯ್ ಮರ್ತೇ ಹೋಯ್ತ್ ಕಾಣಿ. ಇದ್ಕೇ ಹೇಳೋದ್ ಅರ್ವತ್ರ್ ಅರ್ಳೂ ಮರ್ಳೂ ಅಂತ. ಒಂದ್ಸಾರಿ ಏನಾಯ್ತೆಂದ್ರೇ ದಕ್ಕೀ ಬಲಿ ಬಡಿನ್ ಕುಟುಂಬದ್ ವಿಷ್ಣುಮೂರ್ತಿ ಉಪಾಯ್ದ್ರು ಮನೀದ್. ರಾತ್ರಿ ಮಂಗ್ಳಾರ್ತೀ ಆದದ್ದೇ ತಡ, ನಾವ್ ಗುಡ್ಡೀ ಮೇಲ್ ಕುಟ್ಲಾಯ್ಸ್ ಅವ್ರ್ ಮನೀಗ್ ಕೀಸೂದಕ್ ಶುರು ಮಾಡ್ತ್ ಕಾಣಿ!. ಆದ್ರೇ ಆ ಮಧ್ಯ ರಾತ್ರೀಲ್, ಕಾಡಿನ್ ಹಾಂಗ್ ಬೆಳ್ಕೊಂಡಂತಹ ಆ ಗಾಳೀ ಮರ್ದ್ ಸಂದಿಯೊಳ್ಗ್ ನಂಗೂ , ಜನ್ನನಿಗೂ ಒಂದ್ ಹೆಂಗ್ಸ್ ಕಂಕ್ಳಲ್ ಹೆಡ್ಗಿ ತೆಕ್ಕೊಂಡ್ , ಅಲ್ಲಾ ಚಚ್ಕಂದ್ ಹೋಗ್ತಿದ್ಲೂ ಅಂತ ಅನ್ಸಿತ್ ಕಾಣ್ಸಿತ್. ಕತ್ಲೆಂದ್ರೇ ಕಣ್ಣೂ ಕಾಣ್ಸೋದಿಲ್ಲ! ಬರೇ ನಕ್ಷತ್ರದ್ ಬೆಳ್ಕಲ್ಲೇ ಹೋಗ್ಬೇಕ್. ಸೂಡಿ ಬೆಳ್ಕ್ ಇಲ್ಲಾ ಪೆಟ್ರೋಮೇಕ್ಸ್ ಬೆಳ್ಕಿಗ್ ಕಾಯುವಸ್ಟ್ ಪಾಳ್ಮೆ ನಮ್ಗ್ಯಾರಿಗೂ ಇಲ್ಲೆ. ಕೂಡ್ಲೇ ಜನ್ನಾ ಹ್ವಾ ಸುರೇಂದ್ರಾ ಅದ್ಯಾರಾ ? ಅಂತ ಕಿರ್ಚಿದ. ನಾನ್ ಜೋರಾಗಿ ಯ್ಯಾರಾ? ನಿನ್ ಹೆಸ್ರೇನಾ? ನೀನ್ ಯ್ಯಾರ ಮನೀಯವ್ಳಾ? ಅಂತ ಕೂಗಿ ಅವ್ಳನ್ನ ಕೇಳ್ದೆ ಕಾಣಿ. ಉತ್ರವೇ ಇಲ್ಲಾ! ನಮ್ಗಂತೂ ಹೋ ಇದ್ ಖಂಡಿತ್ ಭೂತ. ಬೇರೆಂತುದ್ ಅಲ್ಲಾ ಅಂತ ಸಂಗ್ಡ ಇದ್ ಮಂನ್ಯಾತ, ವೆಂಕಟ್ರ್ಮಣಾ, ನಾಗ್ಭೂಷಣಾ, ಪದ್ಮ್ನಾಭಾ, ವಿಶ್ವನಾಥಾ ಎಲ್ರೀಗ್ ಏ ಭೂತ ಏ ಭೂತ ಬೇಗ್ ಓಡ್ರಪ್ಪೋ ಓಡೀ ಅಂತ ಕೂಗಿ ಹೇಳಿದ್ದೇ ಗೊತ್ ಅಸ್ಟೇ. ಕುಟ್ಲಾಯ್ಸಿ ಎಲ್ರೂ ಅವ್ರ್ ಮನೀಗ್ ಕೀಸಿದ್ದೇ ಕೀಸಿದ್ ಮಹ್ರಾಯ್ರೇ. ಎಂತಾ ಸ್ಪೀಡ್ನಲ್ ಓಡಿದ್ ಅಂದ್ರೇ, ಆ ಕರಾಳ ರಾತ್ರಿನಲ್ಲೂ ನಮ್ಗ್ ದಾರಿ ಕಾಣ್ಸ್ತಿತ್!. ಮನೀ ಅಂಗ್ಳಕ್ ಬಂದ್ ಅಯ್ಯಬ್ಬ ಅಂತ ನಿಟ್ಟುಸಿರನ್ನ ಬಿಟ್ಟದ್ದೇ ಬಿಟ್ಟದ್. ಆದ್ರೆ, ಆವತ್ ರಾತ್ರಿ ಮಾತ್ರ ಸಾರ್ ಹ್ಯಾಂಗ್ ಹೋಟ್ಟೀಗ್ ಹೋಯ್ತ್ ಅಂತ ಕಾಣೀ, ನಮ್ಗೇ ಗೊತ್ತಿಲ್ಲ ಅಸ್ಟೊಂದ್ ಊಟ ಮಾಡ್ತೂ. ವಿಷ್ಣು ಮನೀಯವ್ರ್ ಎರ್ಡ್ನೇ ಪಂಕ್ತೀಗ್ ಇನ್ನೊಂದ್ ಚರ್ಗಿ ಅನ್ನ ಇಡ್ಬೇಕಾಯ್ತ್ ಕಾಣಿ! ಇದ್ ಏಕ್ ನಿಮ್ಗೆ ಹೇಳ್ತಿದ್ದೀ ಅಂದ್ರೇ, ಆ ಮಕ್ಳಾಟ್ಕೆ ಇತ್ತಲ್ಲಾ ಅದ್ರಸ್ಟ್ ಚಂದ ಬೇರೆ ಇಲ್ಲಾ . ಅದೇ ದೊಡ್ಡವ್ರ್ ಆದ್ ಮೇಲೆ ಒಬ್ರಿಗೊಬ್ರ್ ಆತ್ತಿಲ್ಲೆ. ಎಲ್ಲಾ ದೊಡ್ ಮನುಷ್ರು ತರ ಆದ್ಲಿಕ್ ಶುರೂ ಮಾಡಿದ್ರ್. ಒಂದೂ ಊಟಕ್ ಬರ್ತಿರ್ಲಿಲ್ಲೇ. ಮಗನ್ ಮದೀ ನಿಸ್ಚಿತಾರ್ಥಕ್ಕೂ ನಂಗ್ ಹೇಳ್ಕೆ ಇಲ್ಲಾ ಅಂದ್ರೇ ನೀವೆಲ್ಲಾ ನಮ್ಬ್ತಿದ್ರ್ಯಾ? ಅದ್ ಹೋಗ್ಲಿ, ನಮ್ಮನ್ ಎದ್ರ್ ನೋಡಿದ್ರೂ ಮಗಳ್ ನಂಬ್ಗಿಗ್ ಹೇಳ್ಳಿಲ್ಲೆ ಅಂದ್ರೇ ನಾವಿಲ್ಲಿಂದ ಎಲ್ಲಿಗ್ ಹೋಗ್ತಿದ್ವಿಯೋ ಅನ್ಸ್ತಿದೆ ಕೆಲವೊಮ್ಮೆ! ಇದೆಲ್ಲಾ ನಂಗ್ ಹೇಳೋಕೇ ನಾಚ್ಕೆ ಆಗುತ್ತೆ ಕಾಣಿ. ಅದೇ ನಮ್ಮನೀ ಶ್ರಾಧ್ಧದ್ ಊಟಕ್ಕೂ ನಾವ್ ಇಲ್ಲಾ ನಮ್ಮಣ್ಣ ತಪ್ಪದೆಯೇ ಹೇಳ್ತಿದ್ರ್, ಅವ್ರ್ ಕೂಡಾ ನಾಚ್ಕೆ ಇಲ್ದೇನೇ ಬರ್ತಿದ್ರ್! ಅದ್ ಹೇಗ್ ಮುಖ ಎತ್ತಿ ನಮ್ ಮನೀಗ್ ಬರ್ತ್ರೋ ದೇವ್ರೊಬ್ಬನಿಗ್ ಗೊತ್.
ಆದ್ರೇ ಇದೇ ಪರ್ಪಂಚ!. ಕುಡುಕರ ಪರ್ಪಂಚ! ಹಿಂದ್ ಆದ್ ಮರ್ತ್ ಬಿಟ್ಟ್ ಮುಂದ್ ಆಗೂದಕ್ ತಲೀ ಕೊಡ್ ಮಹಾರಾಯ! ನೀನ್ ಯಾವೂರ್ ಸೋಂಪ್ರನಾ? ಅಂತ ನಮ್ಮನ್ ಬೇರವ್ರ್ ಕೇಂಬ್ ಹಾಂಗ್ ಆಯ್ತ್ ಕಾಣಿ!
ಬರೆದವರು ಪಾರಂಪಳ್ಳಿ ಸುರೇಂದ್ರ ಉಪಾಧ್ಯ
ಹವ್ಯಾಸಿ ಜ್ಯೋತಿಷ್ಯಗಾರ, ರೇಕೀ ಮಾಸ್ಟರ್
ಮತ್ತು ಏಕ್ಯೂ ಪ್ರೆಸರ್ ಥೆರಾಪಿಸ್ಟ್.
೧೧/೦೪/೨೦೧೬

2 comments:

  1. ನಟರಾಜ ಉಪಾಧ್ಯರಿಗೆ ಧನ್ಯವಾದಗಳನ್ನ ಏತಕ್ಕೆ ಇಲ್ಲಿ ಅರ್ಪಿಸುತ್ತೇನೆಂದರೆ, ನೀವು ದರ್ಶನದ ಫೋಟೋವನ್ನ ನನ್ನ ಕಥೆಯಲ್ಲಿ ಹಾಕಿದ್ದು, ನನ್ನ ಬರಹಕ್ಕೆ ಇನ್ನಸ್ಟು ಒತ್ತನ್ನ ಕೊಟ್ಟಿತು. ಹೀಗೇ ನಿಮ್ಮ ಸಹಕಾರ ಕಥೆಯನ್ನ ಬರೆಯುವವರಿಗೆ ಬಹಳಸ್ಟು ಪ್ರೋತ್ಸಾಹ ಕೊಡುವಲ್ಲಿ ಸಂದೇಹವೇ ಇಲ್ಲ.

    ReplyDelete
  2. ನಟರಾಜ ಉಪಾಧ್ಯರಿಗೆ ಧನ್ಯವಾದಗಳನ್ನ ಏತಕ್ಕೆ ಇಲ್ಲಿ ಅರ್ಪಿಸುತ್ತೇನೆಂದರೆ, ನೀವು ದರ್ಶನದ ಫೋಟೋವನ್ನ ನನ್ನ ಕಥೆಯಲ್ಲಿ ಹಾಕಿದ್ದು, ನನ್ನ ಬರಹಕ್ಕೆ ಇನ್ನಸ್ಟು ಒತ್ತನ್ನ ಕೊಟ್ಟಿತು. ಹೀಗೇ ನಿಮ್ಮ ಸಹಕಾರ ಕಥೆಯನ್ನ ಬರೆಯುವವರಿಗೆ ಬಹಳಸ್ಟು ಪ್ರೋತ್ಸಾಹ ಕೊಡುವಲ್ಲಿ ಸಂದೇಹವೇ ಇಲ್ಲ.

    ReplyDelete