Wednesday, May 25, 2016

ಹೂವಿನ ಕೋಲು - ಹರಿಕೃಷ್ಣ ಹೊಳ್ಳ ಜಿ.

ಹೂವಿನ ಕೋಲು

ಕರ್ನಾಟಕದ ಕರಾವಳಿಯು ಯಕ್ಷಗಾನದ ತವರೂರು. ಆದರೂ ಕೂಡ ಇಲ್ಲಿ ವರ್ಷವಿಡೀ ಯಕ್ಷಗಾನದ ಬಯಲಾಟಗಳು ಇರುವುದಿಲ್ಲ. ಇದಕ್ಕೆ ಕಾರಣ ಇಲ್ಲಿನ ಅಧಿಕ ಮಳೆ. ಮೇ ತಿಂಗಳಿನಲ್ಲಿ ಬಯಲಾಟದ ಮೇಳಗಳೆಲ್ಲ ತಮ್ಮ ಪ್ರದರ್ಶನಗಳನ್ನು ಸ್ಥಗಿತಗೊಳಿಸಿ ಮತ್ತೆ ನವೆಂಬರಿನಲ್ಲಿ ಪುನಹ ತಿರುಗಾಟಕ್ಕೆ ಹೊರಡುತ್ತವೆ. ಮಳೆಗಾಲದ ಈ 6 ತಿಂಗಳ ಅವಧಿಯಲ್ಲಿ ಕಲಾವಿದರಿಗೆ ಇತ್ತ ಯಕ್ಷಗಾನವೂ ಇಲ್ಲದೇ ಅತ್ತ ಕುಲಕಸುಬನ್ನೂ ನಡೆಸಲಾಗದೇ, ಜೀವನ ನಿರ್ವಹಣೆ ಕಷ್ಟವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಕಲಾವಿದರು ತಮ್ಮ ಜೀವನೋಪಾಯಕ್ಕಾಗಿ ತಾಳಮದ್ದಲೆ, ಹೂವಿನಕೋಲು ಮತ್ತು ಚಿಕ್ಕಮೇಳಗಳನ್ನು ಆರಂಭಿಸಿರಬಹುದೆಂದು ಅನ್ನಿಸುತ್ತದೆ.
ಹೂವಿನಕೋಲು ಕಲಾಪ್ರಕಾರವು ಮೇಲ್ನೋಟಕ್ಕೆ ತಾಳಮದ್ದಲೆಯನ್ನೇ ಹೋಲುತ್ತದಾದರೂ, ಅವುಗಳ ನಡುವೆ ತುಂಬಾ ವ್ಯತ್ಯಾಸಗಳಿವೆ. ಹೂವಿನಕೋಲು ಪ್ರದರ್ಶನವು ತಾಳಮದ್ದಲೆಯಂತೆ ತಾಸುಗಟ್ಟಲೆ ನಡೆಯುವುದಿಲ್ಲ, ಕೇವಲ 10-15 ನಿಮಿಷಗಳಲ್ಲಿ ಮುಗಿಯುತ್ತದೆ. ಹೂವಿನಕೋಲು ಪ್ರದರ್ಶನವು ನವರಾತ್ರಿ ದಿನಗಳಿಗೆ ಮಾತ್ರ ಸೀಮಿತವಾಗಿದ್ದರೆ, ತಾಳಮದ್ದಲೆ ಹಗಲುರಾತ್ರಿ ಎನ್ನದೇ ಮಳೆಗಾಲವಿಡೀ ಪ್ರದರ್ಶಿತಗೊಳ್ಳುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಹೂವಿನಕೋಲಿನಲ್ಲಿ ಭಾಗವಹಿಸುವವರು ಚಿಕ್ಕ ಮಕ್ಕಳು. ಸಾಮಾನ್ಯವಾಗಿ ಇಬ್ಬರು ಹುಡುಗರು ಸಮವಸ್ತ್ರದೊಂದಿಗೆ ತಲೆಯಮೇಲೆ ಬಿಳಿಯ ಟೋಪಿ ಧರಿಸಿಕೊಂಡು ಅರ್ಥಧಾರಿಗಳ ಪಾತ್ರ ನಿರ್ವಹಿಸುತ್ತಾರೆ. ಆದರೆ, ಇತ್ತೀಚೆಗೆ ಹುಡುಗಿಯರೂ ಕೂಡಾ ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಾತ್ರವಲ್ಲದೇ 4-5 ಮಕ್ಕಳು ಸೇರಿ ಸುಮಾರು ಅರ್ಧಗಂಟೆ ಪ್ರದರ್ಶನ ನೀಡಿದ್ದೂ ಇದೆ.
ಒಂದು ಹೂವಿನಕೋಲು ತಂಡದಲ್ಲಿ ಭಾಗವತರು, ಮದ್ದಳೆಗಾರರು, ಶ್ರುತಿವಾದಕರು ಮತ್ತು ಇಬ್ಬರು ಮಕ್ಕಳು ಸೇರಿ ಸುಮಾರು 5 ಜನ ಇರುತ್ತಾರೆ. ಚೆಂಡೆವಾದಕರು ಇರುವುದಿಲ್ಲ. ಸಾಮಾನ್ಯವಾಗಿ ಯಕ್ಷಗಾನ ಕಲಾವಿದರು ತಮ್ಮ ಮನೆಯ ಮಕ್ಕಳಿಗೇ ಸ್ವಲ್ಪ ತರಬೇತಿ ಕೊಟ್ಟು , ನವರಾತ್ರಿ ದಿನಗಳಲ್ಲಿ ತಿರುಗಾಟಕ್ಕೆ ಹೊರಡುತ್ತಾರೆ. ಇದರಿಂದ ಅಲ್ಪ ಸ್ವಲ್ಪ ಸಂಪಾದನೆಯೂ ಆಗುತ್ತದೆ, ಜತೆಯಲ್ಲಿ ಮಕ್ಕಳಿಗೆ ಚಿಕ್ಕಂದಿನಿಂದಲೇ, ಯಕ್ಷಗಾನದ ಶ್ರುತಿ, ಲಯಗಳಿಗೆ ಸರಿಯಾಗಿ ಅರ್ಥ ಹೇಳುವ ತರಬೇತಿಯೂ ದೊರೆತಂತಾಗುತ್ತದೆ.
ಹೂವಿನ ಕೋಲು ಎಂದೇ ಕರೆಯಲ್ಪಡುವ, ಮೇಲ್ನೋಟಕ್ಕೆ ಟೇಬಲ್ ಫ್ಲವರನ್ನು ಹೋಲುವ ಅಲಂಕಾರಿಕ ವಸ್ತುವನ್ನು ಮಕ್ಕಳು ತಮ್ಮ ಮುಂದಿಟ್ಟುಕೊಂಡು, ಪರಸ್ಪರ ಅಭಿಮುಖವಾಗಿ ಕುಳಿತುಕೊಳ್ಳುತ್ತಾರೆ. ಪ್ರದರ್ಶನದ ಪ್ರಾರಂಭದಲ್ಲಿ ಮಕ್ಕಳೇ "ನಾರಾಯಣಾಯ ನಮೊ ನಾರಾಯಣಾಯ . . . . " ಎಂಬ ಮಹಾನವಮಿಯ ಚೌಪದಿಯ 4-5 ಸೊಲ್ಲುಗಳನ್ನು ಹಾಡುತ್ತಾರೆ. ಅನಂತರ ಭಾಗವತರು ನೇರವಾಗಿ ಪ್ರಸಂಗದ ಪದ್ಯಗಳನ್ನು ಹೇಳುತ್ತಾರೆ. ಮಕ್ಕಳು ಆ ಪದ್ಯಗಳಿಗೆ ಅರ್ಥ ಹೇಳುತ್ತಾರೆ. ಮೊದಲಿಗೆ ಗಣಪತಿ ಪೂಜೆಯ ಪದ್ಯವಾಗಲೀ, ಕೊನೆಯಲ್ಲಿ ಮಂಗಳ ಪದ್ಯವಾಗಲೀ ಹಾಡುವ ಕ್ರಮ ಇಲ್ಲ. ಆದರೆ, ಇತ್ತೀಚೆಗೆ ಕೆಲವರು ಅವುಗಳನ್ನೂ ಹಾಡುತ್ತಿದ್ದಾರೆ. ಅದು ಅಪರಾಧವಲ್ಲ ಬಿಡಿ. ಅಷ್ಟೇ ಅಲ್ಲದೇ, ಪ್ರದರ್ಶನದ ಆಕರ್ಷಣೆಯನ್ನು ಹೆಚ್ಚಿಸಲು ಭಾಗವತರು ಮತ್ತು ಮಕ್ಕಳು ಸೇರಿ ಕೋಲಾಟದ ಪದ್ಯಗಳನ್ನು ಹಾಡುವುದೂ ಉಂಟು. ಮಕ್ಕಳು ಕುಳಿತಲ್ಲಿಯೇ  ತಾಳಕ್ಕೆ ಸರಿಯಾಗಿ ಕೋಲು ಹೊಡೆಯುತ್ತಾರೆ.
ಹೀಗೆ ಯಕ್ಷಗಾನ ಆಧಾರಿತ ಈ ಹೂವಿನಕೋಲು ಕಲೆ ಇತ್ತೀಚೆಗೆ ನಶಿಸುತ್ತಿರುವುದನ್ನು ಕಂಡು, ಅದನ್ನು ಪ್ರೋತ್ಸಾಹಿಸುವ ಸಲುವಾಗಿ ಅಲ್ಲಲ್ಲಿ ಹೂವಿನಕೋಲು ಸ್ಪರ್ಧೆಗಳನ್ನು ನಡೆಸುತ್ತಿರುವುದು ಸ್ವಾಗತಾರ್ಹ. ಅಲ್ಲದೇ ಶಾಲಾಮಕ್ಕಳೂ ಕೂಡಾ ಇದರಲ್ಲಿ ಭಾಗವಹಿಸುತ್ತಿರುವುದು ಸಂತಸದ ಸಂಗತಿ. ಯಕ್ಷಗಾನ ಬಯಲಾಟ ಆಕಾಡೆಮಿಯು, ಯಕ್ಷಗಾನದ ಒಂದು ಉಪಕಲೆಯಾಗಿರುವ ಈ ಹೂವಿನಕೋಲಿನ ಪುನಶ್ಚೇತನಕ್ಕೆ ಮುಂದಾದರೆ ಇನ್ನೂ ಒಳ್ಳೆಯದು.


( ಚಿತ್ರದಲ್ಲಿ ತಂಡವೊಂದು ಪ್ರದರ್ಶನ ನೀಡುತ್ತಿರುವುದನ್ನು ಕಾಣಬಹುದು )

ಲೇಖನ : ಹರಿಕೃಷ್ಣ ಹೊಳ್ಳ ಜಿ.
‘ಹಂಸ’- ಪಾಂಡುರಂಗನಗರ,
ಬ್ರಹ್ಮಾವರ.

ಜುಲಾಯಿಯಲ್ಲಿ ಸಾಮಗರ 'ಸಂಯಮಂ' ತಾಳಮದ್ದಲೆ ತಿರುಗಾಟದ ತಯಾರಿ - ಹರಿಕೃಷ್ಣ ಹೊಳ್ಳ ಜಿ.


(ಶ್ರೀ ಹರಿಕೃಷ್ಣ ಹೊಳ್ಳರು ಬ್ರಹ್ಮಾವರ ಶ್ರೀನಿಕೇತನ ಹೈಸ್ಕೂಲಿನಲ್ಲಿ ಅಧ್ಯಾಪಕರು, ಪ್ರವೃತ್ತಿಯಲ್ಲಿ ಯಕ್ಷಗಾನ ಬಡಗುತಿಟ್ಟಿನ ಭಾಗವತರು, ಯಕ್ಷಗಾನಕ್ಕಾಗಿ ಸೇವಾ ಮನೋಭಾವದಲ್ಲಿ ಸದಾ ತಲ್ಲೀನರು, ಯಕ್ಷಗಾನ ಪ್ರಸಂಗಸಂಚಯದಲ್ಲಿ ಮುಡಿಪಾದವರು, ಮುಂದಿನ ದಿನಗಳಲ್ಲಿ ಅವರಿಂದ ಇನ್ನೂ ಹೆಚ್ಚಿನ ಗಹನವಾದ ಬರವಣೆಗೆಯನ್ನು ನಾವು ನಿರೀಕ್ಷಿಸಬಹುದು! ಮುಖಪುಸ್ತಿಕೆಯಲ್ಲಿನ ಅವರ ಈ ಬರಹವನ್ನು ಅವರ ಅನುಮತಿ ಮೇರೆ ಪರಶುರಾಮ ಕ್ಷೇತ್ರದ ನಿತ್ಯೋತ್ಸವದ ಇನ್ನೊಂದು ಆರತಿಯಾಗಿ ಮತ್ತೆ ಇಲ್ಲಿ ಕಾಣಿಸಲಾಗಿದೆ.)

------------------------------------------------------------------------------------------------------------------

ಯಕ್ಷಗಾನ ಬಯಲಾಟಗಳಿಗೆ ಮೇಳಗಳು ಇರುವಂತೆ, "ಸಂಚಾರಿ ಯಕ್ಷಗಾನ ಮಂಡಳಿ" (ಸಂಯಮಂ) ಎಂಬುದು ತಾಳಮದ್ದಲೆಯ ಒಂದು ಮೇಳ. ಇದು 1990ರಲ್ಲಿ ಶ್ರೀ ವಾಸುದೇವ ಸಾಮಗರಿಂದ ಸ್ಥಾಪಿತವಾದ ಒಂದು ಸಂಸ್ಥೆ. ಬಹುಶಃ ಈ ರೀತಿಯಲ್ಲಿ ತಾಳಮದ್ದಲೆಗಾಗಿ ಮೇಳ ಕಟ್ಟಿಕೊಂಡವರು ಇವರೇ ಪ್ರಥಮ ಇರಬೇಕು.ಆರಂಭದಲ್ಲಿ ಇದರಲ್ಲಿ ಪದ್ಯಾಣಗಣಪತಿ ಭಟ್, ತೆಕ್ಕಟ್ಟೆ ಆನಂದ ಮಾಸ್ಟರ್, ರಾಮದಾಸ ಸಾಮಗರು , ಅಳಿಕೆ ರಾಮಯ್ಯ ರೈ ಮೊದಲಾದ ಘಟಾನುಘಟಿ ಕಲಾವಿದರು ಇದ್ದಿದ್ದರು. ನಡುವೆ ಕೆಲವು ವರ್ಷ ಸ್ಥಗಿತಗೊಂಡು ಈಗ ಹೊಸ ರೂಪದೊಂದಿಗೆ, ಸ್ವಂತ ಪರಿಕರಗಳೊಂದಿಗೆ, 'ಸಂಯಮಂ(ರಿ)' ಆಗಿ ಪುನಹ ತಿರುಗಾಟ ಮಾಡುತ್ತಿದೆ.
(Photo courtesy: http://www.daijiworld.com/images1/savi_070511_samaga8.jpg)
ವಾಸುದೇವ ಸಾಮಗರ ಬಗ್ಗೆ ಹೇಳಲು ನಾನಲ್ಲ , ಬೇರೆ ಯಾರೂ ಶಕ್ತರಲ್ಲ. ಅವರ ಬಗ್ಗೆ ಹೇಳಿದರೆ ಅದು ನಾಲ್ಕಾರು ಜನ ಕುರುಡರು ಆನೆಯೊಂದನ್ನು ಮುಟ್ಟಿನೋಡಿಕೊಂಡು ವರ್ಣಿಸಿದಂತೆ ಆದೀತು ಅಷ್ಟೆ. ಅವರು ತೆಂಕು ಹಾಗೂ ಬಡಗು ಎರಡೂ ತಿಟ್ಟುಗಳಲ್ಲಿ , ಎಲ್ಲಾ ರೀತಿಯ ವೇಷಗಳನ್ನೂ ಮಾಡಿದವರು , ಹರಿಕತೆ ದಾಸರೂ ಆಗಿರುವುದರಿಂದ ರಾಗ ಜ್ಞಾನವನ್ನೂ ಉಳ್ಳವರು , ತಾಳಮದ್ದಲೆಯಲ್ಲಿಯೂ ಕೂಡಾ ಎಲ್ಲಾರೀತಿಯ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲವರು. ಅಂತಹ ಬಹುಮುಖ ಪ್ರತಿಭೆಯ ವಾಸುದೇವ ಸಾಮಗರ ಕನಸಿನ ಕೂಸು ಈ 'ಸಂಯಮಂ'.
ಕರಾವಳಿ ಮಾತ್ರವಲ್ಲದೇ ಮಲೆನಾಡಿನಲ್ಲಿಯೂ ಕೂಡಾ, ಮಳೆಗಾಲದಲ್ಲಿ ಅಲ್ಲಲ್ಲಿ ತಾಳಮದ್ದಲೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಈ ಸಂಸ್ಥೆಗೆ ಕೆಲವು ಕಟ್ಟುಪಾಡುಗಳಿವೆ. ಅವುಗಳಲ್ಲಿ ಕಾಲಮಿತಿ ಪ್ರಮುಖವಾದುದು - ಸುಮಾರು ಮೂರರಿಂದ ಮೂರುವರೆ ಗಂಟೆಗಳ ತಾಳಮದ್ದಲೆ. ಎರಡನೇದಾಗಿ ಪಾತ್ರಮಿತಿ - ಕೇವಲ ನಾಲ್ಕೇ ಜನ ಅರ್ಥಧಾರಿಗಳು. ಹೆಚ್ಚು ಪಾತ್ರಗಳಿರುವ ಪ್ರಸಂಗವಾದರೂ ಅವರೇ ನಾಲ್ಕು ಜನ ನಿಭಾಯಿಸುವರು. ಅತಿಥಿ ಕಲಾವಿದರಿಗೆ ಇಲ್ಲಿ ಆಸ್ಪದ ಇಲ್ಲವಾದರೂ ಕೆಲವೊಮ್ಮೆ ಸಂಘಟಕರ ಸ್ನೇಹಕ್ಕೆ ಕಟ್ಟುಬಿದ್ದು ಒಬ್ಬಿಬ್ಬರನ್ನು ಸೇರಿಸಿಕೊಂಡದ್ದೂ ಇದೆ, ಹೆಚ್ಚು ಸಮಯದ ತಾಳಮದ್ದಲೆ ಮಾಡಿದ್ದೂ ಇದೆ. ಮತ್ತೆ ಆಪತ್ಕಾಲಕ್ಕೆ ಬೇರೆಯವರನ್ನು ಸೇರಿಸಿಕೊಂಡದ್ದೂ ಇದೆ. ಹೀಗೆ ಕೆಲವು ಬಾರಿ ಭಾಗವತರಿಗೆ ಅನಾನುಕೂಲವಾದಾಗ, ನಾನೂ ಕೂಡಾ ಹೋಗಿದ್ದೆ. ಇನ್ನು ಅವರದ್ದೇ ಆದ ಸಮವಸ್ತ್ರ , ಅವರದೇ ಸ್ಟೇಜ್ , ಅವರದೇ ಮೈಕ್ , ಅವರದೇ ಹ್ಯಾಲೋಜಿನ್ ಲೈಟ್ , ಅವರದೇ ಜನರೇಟರ್ , ಅವರದೇ ವಾಹನ ... ಹೀಗೇ ಎಲ್ಲವೂ ಅವರದ್ದೇ ವ್ಯವಸ್ಥೆ. ಯಾವುದಕ್ಕೂ ಸಂಘಟಕರನ್ನು ಕೇಳಲಿಕ್ಕಿಲ್ಲ. ಸಂಘಟಕರಿಗೆ ಕಿರುಕುಳ ಉಂಟಾಗಬಾರದು ಎಂಬುದೇ ಅವರ ಉದ್ದೇಶ. ದೂರದ ಊರಾದರೆ ಸರಳವಾದ ವಸತಿ ವ್ಯವಸ್ಥೆಯೊಂದನ್ನು ಕೇಳಿಯಾರು ಮತ್ತು ಹೋಟೆಲ್ ಇಲ್ಲದ ಊರಾದರೆ ಆಹಾರವನ್ನು ಬಯಸಿಯಾರು ಅಷ್ಟೆ.
ಇದು ಸಾಮಗರ ನಿರ್ದೇಶನಕ್ಕೆ ಒಳಪಟ್ಟ ಸಂಸ್ಥೆ. ಇಲ್ಲಿ ಸಮಯಮಿತಿ ಇರುವ ಕಾರಣ ಅರ್ಥಗಾರಿಕೆಗೂ ಸಾಮಗರ ನಿರ್ದೇಶನ ಇದೆ. ತಾಳಮದ್ದಲೆಗೆ ಮೊದಲು ಮತ್ತು ನಂತರ ಕಲಾವಿದರೊಳಗೆ ಅವಲೋಕನದ ಕ್ರಮ ಇದೆ, ಒಳಿತು ಕೆಡುಕುಗಳ ಚರ್ಚೆ ಇದೆ. ಕೆಲವೊಮ್ಮೆ ಭಾಗವತಿಕೆಗೂ ನಿರ್ದೇಶನವಿದೆ. ಅದಕ್ಕೆ ಬೇಕಾಗಿ ಪ್ರಸಂಗಗಳನ್ನು ಎಡಿಟ್ ಮಾಡಿಕೊಂಡು ಎಪ್ಪತ್ತು ಪ್ರಸಂಗಗಳ ಒಂದು ಪುಸ್ತಕವನ್ನೂ ಕೂಡಾ ಅವರು ಮಾಡಿಟ್ಟುಕೊಂಡಿದ್ದಾರೆ. ಇಂದು ಬಹುತೇಕ ಎಲ್ಲಾ ಕಡೆಗಳಲ್ಲಿಯೂ ಅವರ ಆ ಪುಸ್ತಕವನ್ನೇ ಬಳಸುತ್ತಿದ್ದಾರೆ. ಯಕ್ಷಗಾನದಲ್ಲಿ ಬಹು ಬೇಡಿಕೆ ಇರುವ ಪುಸ್ತಕ ಅದು. ಈ ವರ್ಷ ಇನ್ನೂ ಹತ್ತಾರು ಪ್ರಸಂಗಗಳನ್ನು ಸೇರಿಸಿ , ಅ ಪುಸ್ತಕವನ್ನು ಮರು ಮುದ್ರಣ ಮಾಡಲು ಹೊರಟಿದ್ದಾರೆ. ಅ ಪುಸ್ತಕದಲ್ಲಿರುವ ಪ್ರಸಂಗಗಳಲ್ಲದೇ ಬೇರೆ ಪ್ರಸಂಗಗಳನ್ನೂ ಕೂಡಾ ಅವರು ಆಡುತ್ತಾರೆ.
ಎಲ್ಲಕ್ಕಿಂತಲೂ ಮಿಗಿಲಾಗಿ ಖರ್ಚಿನ ಮಿತಿ ಇರುವುದು. ಸಂಘಟಕರಿಗೆ ಹೊರೆಯಾಗಬಾರದೆಂಬ ಕಾರಣಕ್ಕಾಗಿ ಕಡಿಮೆ ಖರ್ಚಿನಲ್ಲಿ ತಾಳಮದ್ದಲೆ ಮಾಡುತ್ತಿದ್ದಾರೆ. ಬಹುಶಃ ಈ ಮುಂದಿನ ಮಳೆಗಾಲದಲ್ಲಿ ಅವರ ವೀಳ್ಯ ಎಂಟು ಸಾವಿರಕ್ಕೆ ಏರಬಹುದೋ ಏನೋ ಅಷ್ಟೆ , ಅದಕ್ಕಿಂತ ಖಂಡಿತಾ ಹೆಚ್ಚಾಗಲಿಕ್ಕಿಲ್ಲ. ನಮ್ಮಲ್ಲಿ ತಾಳಮದ್ದಲೆ ಮಾಡಿಸಿದಾಗ ಒಮ್ಮೆ ಸ್ವಲ್ಪ ಹೆಚ್ಚಿಗೆ ಹಣ ಕೊಟ್ಟಾಗ ಅವರು ಆ ಹೆಚ್ಚಿಗೆ ಹಣವನ್ನು ವಿನಯ ಪೂರ್ವಕವಾಗಿ ಹಿಂತಿರುಗಿಸಿ ಕೊಟ್ಟು ಹೋಗಿದ್ದರು. ಇತ್ತೀಚಿನ ದಿನಗಳಲ್ಲಿ ನಡೆಯುವ ಬೇರೆ ತಾಳಮದ್ದಲೆಗಳಲ್ಲಿ ಕೇವಲ ಒಬ್ಬ ಕಲಾವಿದನಿಗೆ ಕೊಡುವ ಸಂಭಾವನೆ ಹಣದಲ್ಲಿ ಸಾಮಗರ ಇಡಿ ತಾಳಮದ್ದಲೆ ನಡೆಯುತ್ತದೆ.
ಸೂರಾಲು ರವಿಕುಮಾರ್, ಹೆಬ್ರಿ ಗಣೇಶ್ ಕುಮಾರ್ , ಗಜಾನನ ಹೆಗಡೆ ಇವರೆಲ್ಲ 'ಸಂಯಮಂ'ನಿಂದಲೇ ಬೆಳಕಿಗೆ ಬಂದ ಭಾಗವತರು. ಅದೇರೀತಿ, ಅನೇಕ ಅರ್ಥಧಾರಿಗಳನ್ನು ಕೂಡಾ ಸಾಮಗರು ಬೆಳೆಸಿದ್ದಾರೆ. ಅವರನ್ನೆಲ್ಲಾ ಪಟ್ಟಿ ಮಾಡಲು ಸಾಧ್ಯವಿಲ್ಲ , ಏಕೆಂದರೆ ಸಂಖ್ಯೆ ಅಷ್ಟು ಹೆಚ್ಚಿಗೆ ಇದೆ. ಕಳೆದ ವರ್ಷ ಪೂಕಳ ಲಕ್ಷ್ಮೀನಾರಾಯಣ ಭಟ್ಟರು ಮತ್ತು ನಿಟ್ಟೂರು ಅನಂತ ಹೆಗಡೆಯವರು (ಇನ್ನೋರ್ವರ ಹೆಸರು ನೆನಪಿಲ್ಲ) 'ಸಂಯಮಂ'ನ ಖಾಯಂ ಕಲಾವಿದರಾಗಿದ್ದರು. ಪ್ರೊ. ಎಂ.ಎ.ಹೆಗಡೆ , ಡಾ.ವೈಕುಂಠ ಹೇರಳೆ ಮೊದಲಾದವರು ಆಪತ್ಕಾಲದ ಅರ್ಥಧಾರಿಗಳಾಗಿದ್ದರು. ಈ ವರ್ಷವೂ ಜುಲಾಯಿಯಲ್ಲಿ ಸಾಮಗರ 'ಸಂಯಮಂ' ರಥ ತಿರುಗಾಟವನ್ನು ನಡೆಸಲು ತಯಾರಿ ನಡೆಸುತ್ತಿದೆ.



 'ಸಂಯಮಂ' ತಂಡದ ತಾಳಮದ್ದಲೆಯನ್ನು ಯೋಜಿಸಲಾಸಕ್ತರು ಶ್ರೀಯುತ ವಾಸುದೇವ ಸಾಮಗರನ್ನು ಚರವಾಣಿ  9448624370ಯಲ್ಲಿ ಸಂಪರ್ಕಿಸಬಹುದು!

ಸವಿ ನೆನಪಿನ ದೃಶ್ಯ ದಾಖಲೆ - ಯಕ್ಷಗಾನ ಕಾಳಗ ಉತ್ಸವ - ಶಿವಮೊಗ್ಗ - ಅಕ್ಟೋಬರ್ ೬ ಮತ್ತು ೭, ೨೦೦೭


ಯಕ್ಷಗಾನ ಕಾಳಗ ಉತ್ಸವ - ಶಿವಮೊಗ್ಗ - ಅಕ್ಟೋಬರ್ ೬ ಮತ್ತು ೭, ೨೦೦೭
ಅಭ್ಯುದಯ (ರಿ) ಮತ್ತು ಕನ್ನಡ ಮತ್ತು ಸ೦ಸ್ಕೃತಿ ಇಲಾಖೆ ಅರ್ಪಿಸಿದ ಎರಡನೇ ಬಾರಿಗೆ ೨೪ ತಾಸುಗಳ ಆಹೋರಾತ್ರಿ ಅವಿರತ ಪ್ರದರ್ಶನ

ದಾಖಲೆ - ಡಾ. ರತ್ನಾಕರ್

೬.೧೦.೨೦೦೭
ಉದ್ಘಾಟನಾ ಸಮಾರ೦ಭ

೧. ಸುಧನ್ವಾರ್ಜುನ ಕಾಳಗ - ಯಾಜಿ ಯಕ್ಷ ಮಿತ್ರ ಮ೦ಡಳಿ, ವಾಲ್ಗಳ್ಳಿ - ಸ೦ಜೆ ೬ ರಿ೦ದ
೨. ಬಬ್ರುವಾಹನ ಕಾಳಗ - ಮಕ್ಕಳ ಮೇಳ, ಸಾಲಿಗ್ರಾಮ - ರಾತ್ರಿ ೯ ರಿ೦ದ

೩. ತಾಮ್ರಧ್ವಜ ಕಾಳಗ - ಕೋಟ ಹೆಚ್. ಶ್ರೀಧರ ಹ೦ದೆ ಆಯ್ದ ತ೦ಡ - ರಾತ್ರಿ ೧೧ ರಿ೦ದ

೭.೧೦.೨೦೦೭
೪. ಯಕ್ಷೋತ್ತಮ ಕಾಳಗ - ಯಕ್ಷಗಾನ ಕೇ೦ದ್ರ, ಉಡುಪಿ - ಬೆಳಿಗ್ಗೆ ೨ ರಿ೦ದ
೫. ಚಿತ್ರಸೇನ ಕಾಳಗ - ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮ೦ಡಳಿ, ಅ೦ಬಲಪಾಡಿ - ಬೆಳಿಗ್ಗೆ ೪ ರಿ೦ದ

೬. ಲವ-ಕುಶ ಕಾಳಗ - ಪೂರ್ಣಚ೦ದ್ರ ಯಕ್ಷಕಲಾ ಪ್ರತಿಷ್ಟಾನ, ಕೊ೦ಡದಕುಳಿ - ಬೆಳಿಗ್ಗೆ ೬ ರಿ೦ದ

೭. ಮೈರಾವಣ ಕಾಳಗ - ಸುಣ್ಣ೦ಬಳ ವಿಶ್ವೇಶ್ವರ ಭಟ್ ನೇತೃತ್ವದ ತ೦ಡ - ಬೆಳಿಗ್ಗೆ ೯ ರಿ೦ದ

೮. ಇ೦ದ್ರಜಿತು ಕಾಳಗ & ರಾವಣ ವಧೆ - ಇಡಗು೦ಜಿ ಮೇಳ - ಮಧ್ಯಾಹ್ನ ೧೨ರಿ೦ದ

೯. ಕೃಷ್ಣಾರ್ಜುನ ಕಾಳಗ - ಶ್ರೀ ವೀರಾ೦ಜನೇಯ ಯಕ್ಷ ಮಿತ್ರ ಮ೦ಡಳಿ, ಬ೦ಗಾರಮಕ್ಕಿ - ಮಧ್ಯಾಹ್ನ ೩ ರಿ೦ದ

ಸಮಾರೋಪ ಸಮಾರ೦ಭ
https://www.youtube.com/playlist?list=PLfMnpdlFWcxdMFTlf3DGQIdQtbJK1WJ4e

ಪರಶುರಾಮ ಸೃಷ್ಟಿ ಕಥನಗಳ ನಿತ್ಯೋತ್ಸವ-ಪಾನಉ೦೧೪-Maiyas 'ಸು'ದರ್ಶನ ಯಕ್ಷಗಾನ ಮೇ ೨೦೧೬-ಸಮಗ್ರ ದೃಶ್ಯ + ಚಿತ್ರಾವಲೋಕನ


1. ದಕ್ಷ ಯಜ್ನ

ದೃಶ್ಯ
1.1 https://youtu.be/VwekoGCFR3A

ಚಿತ್ರ
1.2.1 https://www.facebook.com/media/set/?set=a.10154222662068436.1073742174.628853435&type=3

1.2.2 https://www.facebook.com/media/set/?set=a.10154222746193436.1073742175.628853435&type=3

1.2.3 https://www.facebook.com/media/set/?set=a.10154223437668436.1073742176.628853435&type=3

1.2.4 https://www.facebook.com/media/set/?set=a.10154223468803436.1073742177.628853435&type=3

1.2.5 https://www.facebook.com/media/set/?set=a.10154223483273436.1073742178.628853435&type=3


2. ಕರ್ಣಾರ್ಜುನ

ದೃಶ್ಯ
2.1 https://www.youtube.com/playlist?list=PLfMnpdlFWcxfuDt2AVIv9iKQFgPNK0gHl

ಚಿತ್ರ
2.2.1 https://www.facebook.com/media/set/?set=a.10154224882048436.1073742179.628853435&type=3

2.2.2 https://www.facebook.com/media/set/?set=a.10154225335153436.1073742180.628853435&type=3

2.2.3https://www.facebook.com/media/set/?set=a.10154225510108436.1073742181.628853435&type=3

2.2.4https://www.facebook.com/media/set/?set=a.10154225531658436.1073742182.628853435&type=3

2.2.5 https://www.facebook.com/media/set/?set=a.10154225552488436.1073742183.628853435&type=3

3. ಆದರ್ಶ ದಂಪತಿ

ದೃಶ್ಯ
3.1 https://www.youtube.com/playlist?list=PLfMnpdlFWcxd0HyU4Ig9QwmHyuRgcNai9

ಚಿತ್ರ
3.2.1 https://www.facebook.com/media/set/?set=a.10154227827118436.1073742184.628853435&type=3

3.2.2 https://www.facebook.com/media/set/?set=a.10154227859823436.1073742185.628853435&type=3


4. ಸುಧನ್ವಾರ್ಜುನ

ದೃಶ್ಯ
4.1 https://www.youtube.com/playlist?list=PLfMnpdlFWcxeQqSE3nr7h-CKjxlV_1AXB

ಚಿತ್ರ
4.2.1 https://www.facebook.com/media/set/?set=a.10154230596443436.1073742186.628853435&type=3

4.2.2 https://www.facebook.com/media/set/?set=a.10154230610228436.1073742187.628853435&type=3

4.2.3 https://www.facebook.com/media/set/?set=a.10154230628248436.1073742188.628853435&type=3

4.2.4 https://www.facebook.com/media/set/?set=a.10154230631738436.1073742189.628853435&type=3


5. ಸಭಾಕಲಾಪ

ದೃಶ್ಯ
5.1 https://www.youtube.com/playlist?list=PLfMnpdlFWcxfM2sOofp4qqp-wYjFMj1az

ಚಿತ್ರ
5.2 https://www.facebook.com/media/set/?set=a.10154231909698436.1073742192.628853435&type=3


6. ಕಂಸವಧೆ

ದೃಶ್ಯ
6.1 https://www.youtube.com/playlist?list=PLfMnpdlFWcxd4W5CPAmiCKflrInlJYSjF

ಚಿತ್ರ
6.2.1 https://www.facebook.com/media/set/?set=a.10154231624718436.1073742190.628853435&type=3

6.2.2 https://www.facebook.com/media/set/?set=a.10154231660138436.1073742191.628853435&type=3

Tuesday, May 24, 2016

ಪರಶುರಾಮ ಸೃಷ್ಟಿ ಕಥನಗಳ ನಿತ್ಯೋತ್ಸವ-ಪಾನಉ೦೧೩-ಮಂಟಪಾಭಿನಂದನ:ದೃಶ್ಯ+ಚಿತ್ರಾವಲೋಕನ

ಇಡೀ ದಿನ ಹೊಮ್ಮಿಕೊಂಡ ಕಾರ್ಯಕ್ರಮಗಳ ದೃಶ್ಯ +ಚಿತ್ರಾವಳಿಗಳಿಗಳ ಕೊಂಡಿಗಳು!

1. ಉದ್ಘಾಟನ ಮಂಟಪ:
ದೃಶ್ಯ:
https://www.youtube.com/playlist?list=PLfMnpdlFWcxctE4zzm5ovoFDt-TWRorGK
ಚಿತ್ರ:
https://www.facebook.com/media/set/?set=a.10154239831638436.1073742193.628853435&type=3

2. ವಿಚಾರ ಮಂಟಪ:
ದೃಶ್ಯ:
https://www.youtube.com/playlist?list=PLfMnpdlFWcxd3nsFtcfU3BKoYqmbm_hek
ಚಿತ್ರ:
https://www.facebook.com/media/set/?set=a.10154239942398436.1073742194.628853435&type=3

3. ಬಹುಮುಖಿ ಮಂಟಪ:
ದೃಶ್ಯ:
https://www.youtube.com/playlist?list=PLfMnpdlFWcxe8MPe2yx1MB7uy8gcAcyq8
ಚಿತ್ರ:
https://www.facebook.com/media/set/?set=a.10154240801703436.1073742195.628853435&type=3


4. ಸಂವಾದ ಮಂಟಪ:
ದೃಶ್ಯ:
https://www.youtube.com/playlist?list=PLfMnpdlFWcxejcol9ZGEiqPB-Sk2HPmcp
ಚಿತ್ರ:
https://www.facebook.com/media/set/?set=a.10154241030293436.1073742196.628853435&type=3

5. ಸಮ್ಮಾನ ಮಂಟಪ:
ದೃಶ್ಯ:
https://www.youtube.com/playlist?list=PLfMnpdlFWcxfl6B1kMbCwrIQeLHIyNK9V
ಚಿತ್ರ:
https://www.facebook.com/media/set/?set=a.10154241127598436.1073742197.628853435&type=3

6. ಪ್ರದರ್ಶನ ಮಂಟಪ:
ದೃಶ್ಯ:
https://www.youtube.com/playlist?list=PLfMnpdlFWcxcC35F1mvJ6f4wygjzviHda
ಚಿತ್ರ:
https://www.facebook.com/media/set/?set=a.10154241268458436.1073742198.628853435&type=3

ಮುಖಪುಸ್ತಿಕೆಯಲ್ಲಿನ ಚಿತ್ರಾವಳಿಯ ಕೊಂಡಿಗಳು ಆಯಾ ದೃಶ್ಯಾವಳಿಯ ಕೊಂಡಿಗಳ ತಲೆಬರಹದಲ್ಲೂ ಲಭ್ಯ!

ಮೇ ೨೦ರ ಉದಯವಾಣಿಯಲ್ಲಿ ಡಾ. ಶತಾವಧಾನಿ ಗಣೇಶರ ಸಾಂದರ್ಭಿಕ ಲೇಖನ


ಮುಖಪುಸ್ತಿಕೆಯಲ್ಲಿಅಶೋಕವರ್ಧನರ ವರದಿ
https://www.facebook.com/athreebook/posts/10209397929367192

ಪತ್ರಿಕಾ ವರದಿ:
https://www.facebook.com/photo.php?fbid=1594023290909746&set=a.1441028246209252.1073741828.100009062725801&type=3&theater

Monday, May 9, 2016

ಪರಶುರಾಮಸೃಷ್ಟಿಯ ನಿತ್ಯಕಥನ - ಎಸ್ಸೆಮ್ ಹೆಗ್ಡೆ - ೦೦೧ - ಯಕ್ಷಗಾನ ನಡೆದುಬಂದ ದಾರಿ - ನಾನು ಕಂಡಂತೆ

ಪರಶುರಾಮಸೃಷ್ಟಿಯ ನಿತ್ಯಕಥನ - ಎಸ್ಸೆಮ್ ಹೆಗ್ಡೆ - ೦೦೧ - ಯಕ್ಷಗಾನ ನಡೆದುಬಂದ ದಾರಿ - ನಾನು ಕಂಡಂತೆ

(ಶೇಷಗಿರಿ ಹೆಗ್ಡೆ, ಸಿದ್ಧಾಪುರ ಇವರು ಗುರು ಶಿಷ್ಯರು ವಾಟ್ಸ್ಯಾಪ್ ಸಮೂಹದಲ್ಲಿ ಬರೆದು ಬರುತ್ತಿರುವುದು - ಲೇಖಕರ ಅನುಮತಿ ಮೇರೆಗೆ ಮತ್ತೆ ಈ ವೇದಿಕೆಯಲ್ಲಿ ಪ್ರಸಾರ!)


ಯಕ್ಷಗಾನದ ಬಗೆಗೆ ನನ್ನ ಒಂದು ವೈಯ್ಯಕ್ತಿಕ ಅನಿಸಿಕೆ .
ಹಿಂದಿನ ಕಾಲದಲ್ಲಿ ಆಟ ಅದ್ಭುತವಾಗಿಯೂ ,ಆರ್ಭಟವಾಗಿಯೂ
ನಡೆಯುತ್ತಿತ್ತು ಎಂದು ನಾವು ಕೇಳಿದ್ದೇವೆ ಅಗಿನ ಪರಿಸ್ತಿತಿ ಹಾಗಿತ್ತು .
ಮೈಕ್ ವ್ಯವಸ್ಥೆ ಇಲ್ಲದ ಕಾರಣ ಭಾಗವತರು ಹಾಗೂ ಕಲಾವಿದರು
ಸಭೆಗೆ ಕೇಳುವಷ್ಟು ಕಂಠತ್ರಾಣದಿಂದ ಹಾಡ್ಬೇಕಿತ್ತು -ಮಾತಾಡಬೇಕಿತ್ತು .
ಆಗ ಅವರ ತ್ರಾಣ ನಾಭಿಯಿಂದ ಬರುತ್ತಿತ್ತು. ಪಂಜಿನ ಹಾಗೂ ಗ್ಯಾಸ್ ಲೈಟ್
ಬೆಳಕಿನ ವ್ಯವಸ್ಥೆ . ಇಲ್ಲಿ ಪಾತ್ರಗಳು ಪಾತ್ರಗಳಾಗಿಯೇ ಪ್ರೇಕ್ಷಕರಿಗೆ ಕಾಣುತ್ತಿತ್ತು .
ಮೊದಲನೇ ಕಲಾವಿದ ಭಾಗವತನಗಿದ್ದು ,ಆತನ ನಿರ್ದೇಶನದಲ್ಲಿ ಆಟ ನಡೆಯುತ್ತಿತ್ತು.ಆಗ ಪ್ರೇಕ್ಷಕರೂ ಸಹ ಕಲಾವಿದರೊಂದಿಗೆ ಕಲಾವಿದರಾಗಿ, ಭಾಗವತ ನಡೆಸುವ ದೋಣಿಯಲ್ಲಿ ತಾವೂ ಪ್ರಯಾಣಿಕರಾಗಿ ಸಹಕರಿಸುತ್ತಿದ್ದರು.(ಕಲಾವಿದರ ಜೊತೆ ಪ್ರೇಕ್ಷಕರೂ ಕೆಲವೊಂದು ಸಂಧರ್ಭಕ್ಕೆ ಸ್ಪಂದಿಸುತ್ತಿದ್ದರು ಎಂದು  ಅಜ್ಜ ದಿ.
ಬೆಳಸಲಿಗೆ ಗಣಪತಿ ಹೆಗಡೆಯವರು ಹಿಂದಿನ ಕಾಲದ ಯಕ್ಷಗಾನದ ಮಾತು ಬಂದಾಗಹೀಗೆ ಹೇಳುತ್ತಿದ್ದರು. ಉದಾಹರಣೆಗೆ - ಬನ್ನಿರೈ ಸಂಸಾರ ಸಾಗರವ ದಾಂಟುವರು।ಬನ್ನಿರೈ ಮೋಕ್ಷಕಾಂಕ್ಷಿಗಳು। ಎಂದು ಅತಿಕಾಯ ಹೇಳುವಾಗ, ನೀವು ಮುಂದಾಗಿ ನಾವು ಹಿಂದಿನಿಂದ ಬರುತ್ತೇವೆ ಎಂದು ಪ್ರೇಕ್ಷಕರು ಕೂಗಿಹೇಳುತ್ತಿದ್ದರಂತೆ(ಇದನ್ನು ನಾನು   ಸಣ್ಣವನಿದ್ದಾಗ ತಾಳಮದ್ದಳೆಯಲ್ಲಿ ಕೇಳಿದ್ದೆನೆ) ಮತ್ತೆ ಆಗ ಹಣ ಮಾಡುವ ಗಳಿಸುವ ಉದ್ದೇಶಕ್ಕೆ ಯಕ್ಷಗಾನ ಬಳಕೆಯಾಗುತ್ತಿರಲಿಲ್ಲ. ಒಂದು ಮಾತು ಽಅಗ ಜನ ಸಂಖ್ಯೆಯೂ ಬಹಳ ಕಡಿಮೆ ಇತ್ತು. ಕಸ್ಟವೂ ಇತ್ತು ಎಂದು ಕೇಳಿದ್ದೇನೆ . ಮಾತು ನಾಳೆ ಮುನ್ದುವರಿಯುವುದು........

ಒಂದನೆ ಹಂತದಲ್ಲಿ ಮೊದಲ ವೇಷಧಾರಿ ಭಾಗವತನಾಗಿದ್ದು, ಅದು ಎರಡನೇ ಹಂತಕ್ಕೆ ಮೇಳದ ಯಜಮಾನನ ಕೈಗೆ ಬಂತು. ವರ್ತಮಾನದಲ್ಲಿ ಯಕ್ಷಗಾನದಲ್ಲಿ ತುಂಬಾ ಬದಲಾವಣೆಗಳಾದವು. ಸುಲಭದಲ್ಲಿ ಕಟ್ಟಬಹುದಾದ ರೆಡಿಮೇಡ್ ವೇಷ ಬೂಷಣಗಳು ಬಂದವು.ಟ್ಯೂಬ್ ಲೈಟ್ ಬದಲಿಗೆ ಹೆಚ್ಚು ಪ್ರಕಾಶದ ಹೆಲೂಜಿನ್ ಬಲ್ಬುಗಳು ಬಂದವು. ಹಿಮ್ಮೆಳ ಹಾಗೂ ಮುಮ್ಮೇಳದ ಪ್ರತೀ ಕಲಾವಿದರಿಗೂ ಬೇರೆ  ಬೇರೆ ಟ್ಯೂನ್  - ವಿಶೇಷ ಎಫೆಕ್ಟ್ಸ್ ಕೊಡುವುದಕ್ಕೆ ಚಾನೆಲ್ ಮಿಕ್ಸರ್ ಗಳು  ಬಂದವು. ಅಂದರೆ ಕಲಾವಿದರ ಧ್ವನಿಯ ತ್ರಾಣ ನಾಭಿಯಿಂದ ಕಂಠಕ್ಕೆ ಬಂತು.ಇವು ಬಂದದ್ದೇ ಬಂದದ್ದು ಯಕ್ಷಗಾನದ ಒಂದು ಹಂತದ ಧಮ್ಮು ಕಡಿಮೆಯಾಯಿತು.ಈ ಹಂತದ ಮೊದಲ ದಶಕಕ್ಕೆ ಬದಲಾವಣೆಯ ಗಾಳಿ ಬಿರುಗಾಳಿಯಾಗಿ ಬೀಸಲಾರಂಭಿಸಿತು. ಇದರ ಹೊಡೆತಕ್ಕೆ ಹಳೆಯ ಪ್ರಸಂಗಗಳು,ರಾಗ -ತಾಳ-ಲಯಗಳು ತೂರಿ ಹೋಗಿ ಆ ಜಾಗಕ್ಕೆ ಹೊಸ ಪ್ರಸಂಗಗಳು ಬಂದವು. ಇದರೊಟ್ಟಿಗೇ ಕೊಂಟ್ರೆಕ್ಟುದಾರರು ಬಂದರು.  ಇಂತಿಷ್ಟು ತಾಸಿನ ಆಟಕ್ಕೆ ಇಷ್ಟು ಎಂದು ಎಂದು ನಿರ್ಧಾರವಾಗಿ, ಯಕ್ಷಗಾನ ಹಣ ಗಳಿಸುವ ಬಿಜಿನೆಸ್ಸ್ ಆಗಿ  ಮಾರ್ಪಾಡಾಯಿತು. ಯಕ್ಷಗಾನದ ಹಿಡಿತ ಮೇಳದ ಯಜಮಾನನ ಕೈಯಿಂದ ಜಾರಿ ಕೊಂಟ್ರೆಕ್ಟುದಾರರ ಕೈಗೆ ಬಂತು.ಆಟ ಹೇಗೇ ಆಗಲಿ ಯಜಮಾನರಿಗೆ ಹಣದ ಸಮಸ್ಯೆ ಇಲ್ಲದಂತಾಯಿತು. ಆಟಕ್ಕೆ ಹೋಗಲಿ ಬಿಡಲಿ ಟಿಕೆಟ್ಟು ಕೊಳ್ಳುವ ಪರಂಪರೆ ಇಲ್ಲಿಂದ ಶುರುವಾಯಿತು.
ಮುಂದುವರಿಯುವುದು ........

ಯಾವಾಗ ವೃತ್ತಿ ಮೇಳಗಳ ಒಪ್ಪಂದದ ಆಟ ಶುರು ಆಯಿತೋ  ಯಕ್ಷಗಾನದ ಗುಣಮಟ್ಟ ಕಡಿಮೆಯಾಗತೊಡಗಿತು. ಆಟ ಹೇಗಾದ್ರು ತಮ್ಮ ಗಳಿಕೆಗೆ ತೊಂದ್ರೆ ಇಲ್ಲ ಎನ್ನುವ ತೀರ್ಮಾನಕ್ಕೆ ಬಂದರು. ಇದರಿಂದ  ಯಕ್ಷಪ್ರಿಯರು ಅತಂತ್ರರಾದರು. ಇದೇ ಕಾಲಕ್ಕೆ ಮೇಳದ  ಕಲಾವಿದರಲ್ಲಿ ಭಿನ್ನಾಭಿಪ್ರಾಯ ಬಂದದ್ದರಿಂದ ಯಾರು ಮೊದಲನೇ ಕಲಾವಿದ ಯಾರು ಎರಡನೇ ಕಲಾವಿದ ಎಂದು ತೀರ್ಮಾನಿಸುವಲ್ಲಿ ಯಜಮಾನರು ಸೋತರು. ಇಲ್ಲಿಂದ  ಬಹುತೇಕ   ಹಿರಿಯ ಪ್ರಸಿದ್ಧ  ಕಲಾವಿದರದ್ದೇ ಒಂದೊಂದು ಮೇಳ ತಲೆ ಎತ್ತಿತು. ವೃತ್ತಿ  ಮೇಳಗಳಿಗೆ ಇದರಿಂದಾಗಿ ಪೌರಾಣಿಕ ಪ್ರಸಂಗಗಳನ್ನು  ರೈಸುವುದು ದುಸ್ತರವಾಯಿತು. ಸಾಮಾಜಿಕ ಕಥೆಗಳನ್ನು ರಂಗಕ್ಕೆ ತರುವ ಸಾಹಸ ಮಾಡಬೇಕಾಯಿತು.ಅಲ್ಲಿಂದ ಹೊಸಕಥೆಗಳ ಮಹಾಪೂರವೇ ಹರಿದು ಕೆಲಕಾಲ ಮಿಂಚಿದವು. ಇಂತಹ ಪ್ರಸಂಗದ ಪದ್ಯಗಳಲ್ಲಿ ಸತ್ವ ಇಲ್ಲದ ಕಾರಣ ಚಲನಚಿತ್ರ ಸಂಗೀತದ ಎಲ್ಲಾ ಎಫೆಕ್ಟ್ ಗಳನ್ನು ಇಲ್ಲಿ ಪ್ರಯೋಗ ಮಾಡಿದರು. ಪ್ರಮುಖವಾದದ್ದು ಎಕೋ ಎನ್ನುವ ಎಫೆಕ್ಟ್ .ಇದು ಆ ಕಾಲಕ್ಕೆ ಪ್ರಸಿದ್ದಿಗೆ ಬಂದ ಹಿಮ್ಮೇಳ ವೈಭವ
ಎಂಬ ಹೆಸರಲ್ಲಿ ನಡೆಯುವ ಕೇವಲ ಹಾಡುಗಾರಿಕೆಯೇ ಪ್ರಧಾನವಾದ ಕಾರ್ಯಕ್ರಮದಲ್ಲಿ, ಇಲ್ಲಿ ಮಾತಾಡುವ ಯಾ ಅರ್ಥ ಹೇಳುವ ಪ್ರಕ್ರಿಯೆ ಇಲ್ಲದೆ ಇರುವುದರಿಂದ ಇರುವುದರಿಂದ ಯಶಸ್ಸನ್ನೂ ಕಂಡಿತು. ಆದರೆ ರಂಗದಲ್ಲಿ ಇದು ಒಂದು ರೀತಿಯ ಭ್ರಮಾಲೋಕವನ್ನು ಸೃಷ್ಠಿಸಿರೂ . ಇದರ ಪ್ರಭಾವಕ್ಕೆ ಇದರ ಜೊತೆ ಶ್ರುತಿ ಸೇರಿಸಲಾರದೇ ಮುಮ್ಮೇಳದವರು ಮುಗ್ಗರಿಸಿ ಬಿದ್ದರು. ಹಾಡುವಾಗಿನ ಆರ್ಭಟ ಮತಾಡುವಲ್ಲಿ ಇಲ್ಲದೆ ಹೋದಾಗ ಪ್ರೇಕ್ಶಕರಿಂದ ಧ್ವನಿ ವರ್ಧಕದವರ ಬಗ್ಗೆ ಅಸಮಾದಾನ ಉಂಟಾಯಿತು. ಈರ್ವರಲ್ಲಿ ಗಲಾಟೆ ಆದದ್ದೂ ಇಲ್ಲದಿಲ್ಲ. ಆದರ್ಶ ನೀತಿಪಾಠಗಳಿಲ್ಲದ  ಕಾಲ್ಪನಿಕ ಕಥೆಗಳು ನಿಜ ಯಕ್ಷಗಾನದ  ಸೊಗಡು - ಅಬ್ಬರವನ್ನು ನಿರೀಕ್ಷಿಸಿ ಬರುವ ಯಕ್ಷಪ್ರಿಯರ ಹಸಿವನ್ನು ತಣಿಸಲಾಗದೇ ಸೋತವು.
ಮುಂದುವರಿಯುವುದು.....

ಸತತ ಅಭ್ಯಾಸದ ಕೊರತೆಯಿಂದ  ಮಾತಾಡುವಲ್ಲಿ ರಂಜಿಸಲಾಗದ( ಕಥೆಗೆ ಎಷ್ಟು ಬೇಕೂ ಅಷ್ಟನ್ನೇ ಮಾತಾಡಿದ್ರು ಯಕ್ಷಗಾನಕ್ಕೆ ಸಾಕಿತ್ತು) ಅನೇಕರು ಏನಾದ್ರು ಮಾಡಿ ತಮ್ಮತನ ಉಳಿಸಿಕೊಳ್ಳಲು ಹಾಡಿದ್ದನ್ನೇ ಪದೆ ಪದೇ  ಹಾಡಿಸಿ (ಮೂರು ನಾಲ್ಕು ಬಾರಿ ರಿಪೀಟ್ ಆದರೆ ಸರಿ. ಇಷ್ಟು ಬೇಕೇ ಬೇಕು) ಹೆಚ್ಹು ಕುಣಿಯುವುದು ಕುಣಿತದಲ್ಲಿ ಹೊಸತನ್ನು ತರುವ ಸಾಹಸ ಮಾಡಿದರು. ಇದರಿಂದ ಯಕ್ಷಗಾನೇತರರೂ ಸಹ ಯಕ್ಷಗಾನದತ್ತ ಆಕರ್ಶಿತರಾದದ್ದು  ಮಾತ್ರ ಸತ್ಯ. ಗಳಿಕೆಯ ದೃಷ್ಟಿಯಲ್ಲಿ ಮೇಳಗಳಿಗೆ ಅನುಕೂಲಾವಾದದ್ದೂ ಅಷ್ಟೇ ಸತ್ಯ. ಶ್ರುತಿ ತಪ್ಪಿದರೂ  ಚಪ್ಪಾಳೆಗೇನೂ ಕೊರತೆಯಾಗಲಿಲ್ಲ.( ಯಕ್ಷಗಾನ ಸರ್ವಾಂಗ ಸುಂದರ ಕಲೆ ಆದ್ದರಿಂದ  ಪರಂಪರೆಯಿಂದ ಬಂದ ಕುಣಿತವೇ ಸಾಕು ಹೊಸತೇನೂ ಬೇಕಿಲ್ಲ.) ಇದು ಎಲ್ಲಿಯವರೆಗೆ ಬಂತು ಅಂದರೆ ಯಕ್ಷಗಾನ - ದೊಂಬರಾಟ - ಸರ್ಕಸ್ಸು  ಈ ಮೂರೂ ಪ್ರಾಕಾರಗಳನ್ನು  ಒಂದೇ ವೇದಿಕೆಯ ಮೇಲೆ ನೋಡುವ ಸುಯೋಗ ಬಂದದ್ದು ಮಾತ್ರ ಯಕ್ಷಪ್ರಿಯರ ದೌರ್ಭಾಗ್ಯ. ಯಕ್ಷಗಾನ ಪರಂಪರೆಗೆ ಅದರ ಘನತೆ ಗೌರವಕ್ಕೆ ಧಕ್ಕೆ ಬಾರದ ಬದಲಾವಣೆಗಳು ಕಾಲಕಾಲಕ್ಕೆ ಆದರೆ ಸ್ವಾಗತಾಹ್ರವೇ ಹೌದು. ಈಗಿನ ಯಕ್ಷಗಾನ ಯಾಕೆ ರಂಜಿಸುವುದಿಲ್ಲ ಎನ್ನುವುದರ ಬಗ್ಗೆ ನಾಳೆ ಹೇಳುವೆ ......

(ಇನ್ನೂ ಇದೆ, ಮೂಲವೇದಿಕೆಯಲ್ಲಿ  ಮೂಡಿ ಬಂದಂತೆ ಇಲ್ಲಿ ಲಗತ್ತಿಸಲಾಗುವುದು)