Tuesday, April 12, 2016

ಪರಶುರಾಮನ್ ಕಥನಗಳ ನಿತ್ಯೋತ್ಸವ - ಸುರೇ೦೦೮ ಹುಚ್ ಹೊಳ್ರ್

Original Post:  https://www.facebook.com/permalink.php?story_fbid=1763648600523809&id=1705466946341975

ಸುರೇ೦೦೮
ಹುಚ್ ಹೊಳ್ರ್
ಪರಶುರಾಮನ್ ಕಥನಗಳ ನಿತ್ಯೋತ್ಸವ
ಎಸ್ಟ್ ಬಾರೀ ನಾಗನ್ ಬನ್ವನ್ನ ಬದ್ಲಾಯ್ಸಿದ್ರೋ ನಂಗೇ ಗೊತ್ತಿಲ್ಲ! ಒಂದ್ ಸಾರಿ ಅವರಪ್ಪನ ಕಾಲ್ದಲ್ಲಿ ದರ್ಶಿನ ಮಾಡ್ಸಿದಾಗ ಹೀಗಂತ್ ಬಂತ್. 
“ಸಮಸ್ತ ಬ್ರಹ್ಮ ಕುಟುಂಬ ನನ್ನನ್ನ ಆಹ್ವಾನಿಸಿದ್ದೀರಿ. ಇದಕ್ಕೇನೋ ನಿಮ್ಗೆಲ್ಲಾ ಕಸ್ಟ್ ಇರ್ಬೇಕಂತ ಅರ್ಥ್ವಾಯ್ತ್. ಈ ಕುಟುಂಬದ ಹಿರಿಯನಾದ ನೀನು ನನ್ನಲ್ಲಿ ಏನೊಂದೂ ಸಂಕೋಚನೆಯಿಲ್ದೇ ಕೇಳ್ಬಹುದು.” ಅಂತ ಪಾತ್ರಿಗಳ್ ತಮ್ಮ ವಾಕ್ಯ್ವನ್ನ ಅಲ್ಲೇ ಕೈದ್ ಮಾಡಿದ್ರ್.
ಅದ್ಕ್ ಹೊಳ್ರ್ ಹೇಳಿದ್ರು. ಮತ್ತೇನಿಲ್ಲೆ, ನನ್ನ ಮಗ್ನಿಗ್ ಇನ್ನೂ ಮಗು ಆಗಿಲ್ಲೆ ಅದ್ಕೇ ನಾನ್ ಬೇಡ್ಕಂಬುದ್ ಏನೆಂದ್ರೆ, ಅವ್ನಿಗೊಂದ್ ವಂಷದ್ ಕುಡಿ ಕೊಡ್ಸ್ಬೇಕ್ ಅಂತ. ದೇವ್ರ್ ನನ್ನ್ ಕ್ಸಮಿಸ್ಬೇಕ್ ಅಂತ ಹೊಳ್ರು ತಟ್ ಅಂತ ಅಡ್ಡ್ ಬಿದ್ರ್ ಕಾಣಿ.
ಬಿದ್ದವ್ರ್ ಎದ್ ಮ್ಯಾಗೆ ಸಿಕ್ಕಿದ್ ೮ ಶ್ರಂಗಾರ್ ಹೂವಿನ ಎಸ್ಳ್. ಭಕ್ತಾ ಎಸ್ಟ್ ಬಂತ್ ಅಂತ್ ಲೆಕ್ಕಾ ಸರೀ ಮಾಡಿ ಹೇಳ್ ಅಂತ ಪಾತ್ರಿಗಳ್ ಮತ್ ಹೇಳಿದ್ರ್. 
ಅಲ್ಲೇ ಇದ್ದ್ ನಂಗ್ ಅನ್ಸಿತ್, ಅದ್ರಲ್ ಲೆಕ್ಕ ಮಾಡೀ ಹೇಳೂದಕ್ ಏನ್ ೭೭ ಎಸ್ಳ್ ಕೊಟ್ರಾ? ಕೊಟ್ಟದ್ ಬರೇ ಎಂಟ್. ಸುಮ್ನೆ ದೃಸ್ಟಿ ಹಾಂಗ್ ಬೀಳ್ಸಿದ್ರ್ ಗೊತ್ತಾತ್. ಈ ಪಾತ್ರಿಗಳ್ ಲೆಕ್ಕ ನನ್ ತಲೀಗ್ ಹೊಳೀಲಿಲ್ಲೆ ಅಂತ್ ಮಾಡಿ.
ಓ, ೮ ಎಸ್ಳ್ ಬಂತ್ ಕಾಣ್ರಿ ಅಂತ್ ಈ ಹೊಳ್ರ್ ಪ್ರತಿಯಾಗಿ ಉತ್ರ ಕೊಟ್ರ್.
ಭಲೇ, ನೀ ಎಣಿಸಿದ್ ಕಾರ್ಯ ಆಗುತ್, ಹಿಡೀ ಪ್ರಸಾದ ಅಂತ ಹೇಳಿದ್ರ್.
ಅದ್ರಲ್ ೮ ಬಂದ್ರೇ ಹೇಂಗ್ ಎಣ್ಸಿದ್ ಕೆಲ್ಸಾ ಆಗುತ್ತೋ ನಂಗ್ ಒಂದ್ಚೂರೂ ಅರ್ಥವಾಗ್ಲಿಲ್ಲ ಅಂತ್ ಮಾಡಿ.
ತಟ್ಟನೇ ಭಕ್ತ್ರಾದ ಹೊಳ್ರ್ ಎರ್ಡೂ ಕೈ ಚಾಚಿ ಬೇಡ್ಕಂಬ್ ಹಾಗ್ ಪಾತ್ರಿಗಳ್ ಮುಂದ್ ಹಿಡಿದ್ರ್ ಕಾಣಿ. ಆದ್ರೇ ನನ್ ಬಾಯಿ ಕೇಳ್ಬೇಕೋ, ಈಗ್ತಾನೆ ನೀವ್ ೮ ಎಸ್ಳ್ ಪ್ರಸಾದ್ ಕೊಟ್ಟಿದ್ರಿಯಲ್ಲ ಪಾತ್ರಿಗಳೇ , ಮತ್ಯಾಕ್ ಪ್ರಸಾದ್ ಹೇಳೀ ಅಂತ ಬಹಳ ಸಲೀಸಾಗಿ ಹೇಳ್ದೆ.ಅಲ್ಲಿದ್ದವರಿಗೆಲ್ಲಾ ಇವ್ನ ದೊಡ್ಡ ಅಧಿಕ ಪ್ರಸಂಗೀ ಅಂತ ಅನ್ಸಿತ್ತೇನೋ? ನಾನೇನ್ ತಲಿಬಿಸಿ ಮಾಡ್ಲಿಲ್ಲೆ ಅಂತಿಟ್ಕೊಳ್ಳೀ. ಈ ಸಲೀಸ್ ಹ್ಯಾಂಗ್ ಬಂತ್ ಅಂದ್ರೆ, ನಾನ್ ಅವ್ರೂ ಪ್ಯಾಟಿಯೊಳ್ಗೆ ಕಾಪಿ, ತಿಂಡಿ ಹೊತ್ ಹೋಪ್ ಹೊತ್ತಿಗ್ ದಿನಾ ಕುಡಿತಿದ್ವೀ. ಅದ್ಕೇ ಇಸ್ಟೊಂದ್ ಸಲೀಸ್. ಅದ್ ಊರವ್ರಿಗ್ ಏನ್ ಗೊತ್? ಬದ್ನೀಕಾಯಿ ಅಂತ ತೆಪ್ಗಿದ್ದೆ ಅನ್ನೀ.
ಆದ್ರೂ ಇದ್ ಮಹಾ ಪ್ರಸಾದ ಭಕ್ತಾ ಅಂತ ಪಾತ್ರಿಗಳ್ ನನ್ ಬಾಯ್ ಮುಚ್ಚ್ಸಿ, ಹೊಳ್ರಿಗ್ ಪ್ರಸಾದ ಕೊಟ್ಟೇ ಬಿಟ್ರ್ ಕಾಣಿ.
ಸರಿ, ಆ ಮ್ಯಾಲ್ ಊಟ ಗೀಟ್ ಎಲ್ರಿಗೂ ಆಯ್ತು. ಎಲ್ರೂ ಕಾಫಿ ಕುಡ್ದು,ಅವ್ರರವ್ರ್ ಮನೀಗ್ ಹೋದ್ರ್.
ಮರ್ ದಿವ್ಸ್ ಎಲ್ರಿಗೂ ಸಂತೋಷವೇ ಸಂತೋಷ. ಮನೀಗೊಂದ್ ಕುಡೀ ಬತ್ತ್ ಅಂತ. ಆದ್ರೇ ಈ ದರ್ಷನ್ ಮಾಡ್ಸೀ ನಾಕ್ ವರ್ಷಾ ಆಯ್ತ್. ಒಂದ್ ಕುಡಿ ಗಿಡಿ ಇದುವರ್ಗೂ ಅವ್ರ ಮನೀಲ್ಲೆ ಕಾಣ್ಸಿಲ್ಲೆ. ಆದ್ರೆ ಈ ಹೊಳ್ರ್ ಮಾತ್ರ ಇನ್ನೂ ಆಸಿಯೊಳ್ಗೇ ಇದ್ರ್ ಕಾಣಿ. ಮತ್ತ್ ಆಣಿಗುಡ್ಡಿಗ್ ಹೋಗಿ ಅಡಿಗಳ್ ಹತ್ರ ಇನ್ನೊಮ್ಮೆ ಪ್ರಶ್ನೆ ಕೇಳಿದ್ರ್. ಹೋಯ್ ನನ್ ಮಗನ್ ಜಾತಕ ಇನ್ನೊಮ್ಮೆ ನೋಡಿ ಹೇಳಿ, ಮಗು ಆಪುಕ್ ಏನ್ ತೊಂದ್ರೇ ಇದ್ಯಾಅಂತ.
ಆಣೆಗುಡ್ಡೆ ಅಡಿಗಳ್, ಕವಡಿಕೆ ಕವ್ಚಿ ನೋಡಿದ್ರ್. ೭ ಬಂತ್. ತುಲಾ ಲಗ್ನ ಬಂತ್. ಹೋಯ್ ಪಂಚಮದಲ್ಲಿ ರಾಹು ಕೂತಿತ್ ಕಾಣಿ. ನಿಮ್ಮನಿ ನಾಗನ್ ಪಸ್ಚಿಮಕ್ ಮುಖ ಹಾಕುವ್ ಹಾಂಗಿರ್ಬೇಕ್. ಅದ್ಕ್ಕೊಂದ್ ನಾಗನ್ ಕಲಶ ಆಗ್ಬೇಕ್. ಈಗ ಅದ್ ಪೂರ್ವಕ್ ಇತ್ ಅಂತ ಕಾಣ್ಸುತ್ತೆ ಅಂದ್ರ್. ಅದಕ್ ಹೊಳ್ರ್ ಹೌದ್ ಮಹಾರಾಯ್ರೇ ಅಂತ್ ಹೇಳಿದ್ರ್. 
ಸರಿ, ಹೊಳ್ರ್ ಮನೀಗ್ ಬಂದ್ ನಾಗನ್ ಕಲ್ ಕಿತ್ ಹಾಕ್ಲಿಕ್ ಮತ್ತೊಂದ್ ದರ್ಷನ್ ಮಾಡ್ಸ್ಲಿಕ್ ಮುಹೂರ್ತ್ ಕಂಡ್ರ್. ಮುಂದಿನ್ ಭಾನ್ವಾರ್ ಮಾಡ್ಸೂದ್ ಅಂತ ಆಯ್ತು. ಮತ್ತೆ ದರ್ಶಿನ ಪಾತ್ರಿನ್ ಕರ್ದ್, ದರ್ಷನವನ್ನ ಇಟ್ರ್ ಕಾಣಿ. ನೂರ್ ಜನ್ರಿಗ್ ಊಟ ಹಾಕೂದ್ ಅಂತ ಆಯ್ತ್.
ಭಾನ್ವಾರ, ಸರಿ ಮತ್ತೊಮ್ಮೆ ದರ್ಷನ್ ಪಾತ್ರಿಗಳ್ ಹೂ ಮತ್ ನೀರನ್ ತೆಕೊಂಡ್ ಮುಖಕ್ಕೆಲ್ಲಾ ಹಚ್ಕೊಂಡ್, 
“ಭಕ್ತಾ ಮತ್ತೊಮ್ಮೆ ನೀ ನನ್ನ ಕರ್ಸಿದ್ದಿಯಾ. ಇದಕ್ ಕಾರಣ್ ಏನೂ ಅಂತ ನಂಗ್ ಹೊಳೀತ್. ನನ್ ಮುಖ ಪಸ್ಚಿಮಕ್ ಹಾಕ್ಬೇಕಂತ ನಿನ್ ಮನ್ಸಿನಲ್ ಇದೆ. ಹೌದೋ, ಅಲ್ವೋ ಹೇಳು? ಅಂತ ಹೊಳ್ರನ್ನೇ ಎಲ್ರ್ ಎದ್ರಿಗೂ ಕೇಳಿದ್ರು.
ಹೊಳ್ರ್, ಹೌದ್ ಅಂತ ಆಸ್ಚರ್ಯಚಿಕಿತರಾದ್ರ್. ಆದ್ರೇ ಪ್ಯಾಟಿಯಲ್ ಆಣೆಗುಡ್ಡೀ ಅಡಿಗಳ್ ಕವ್ಡ್ಕಿ ಶಾಸ್ತ್ರದಲ್ಲಿ ಹೇಳಿದ್ನ ನಾನ್ ಪಾತ್ರಿಗಳ್ಗೆ ತಿಳಿಸಿದೇ ಅಂತ ನಮ್ ಹೊಳ್ರಿಗ್ ನಾ ಹೇಳಿರ್ಲಿಲ್ಲ. ನಾನ್ ಹೊಳ್ರಿಗ್ ಹೇಳಿಕ್ ಒಂದ್ ಕಾರಣವೂ ಇತ್. ಅವ್ರ್ ನನ್ನ್ ಕರ್ಕಂದ್ ಆಣಿಗುಡ್ಡಿಗ್ ಪ್ರಶ್ನೆ ಕೇಳೂಕ್ ಹೋಗಿದ್ರ್. ಹಾಮ್ಗ್ ಆಪ್ಕೋಯಿ ನಂಗ್ ಈ ಸಮಾಚಾರ ಗೊತ್ತಿತ್.ಅಸ್ಟೇ.
ಸರಿ. ಇನ್ ೧೫ ದಿವ್ಸ ಬಿಟ್, ನಾಗನ್ ಕಲ್ಲ್ ಎಲ್ಲಾ ಕಿತ್ಸಿ, ಅದನ್ ಪಸ್ಚಿಮಕ್ಕೆ ತಿರ್ಗ್ಸಿ, ಮತ್ ಹೊಸಾ ಬನ ಮಾಡಿ ಇನ್ನೊಂದ್ ಊಟ ಹಾಕ್ಸಿದ್ರ್ ಕಾಣಿ. ಒಟ್ಟಾರ್ ಈ ಹೊಳ್ರ್ ದರ್ಷನ, ನಾಗನ್ ಕಲ್, ಬಾವಿ, ಗುಡೀ ಮತ್ ಮಾಡ್ ಹೀಂಗೆ ಎಸ್ಟ್ ದುಡ್ ಖರ್ಚ್ ಮಾಡಿದ್ರೋ ಗೊತ್ತಿಲ್ಲೆ. ಇದ್ ಅವ್ರ್ ಅಪ್ಪನ್ ಕಾಲ್ದಿಂದಲೂ ಈ ಅಭ್ಯಾಸ್ ಇತ್. ಮತ್ತೇ ಈ ಅಭ್ಯಾಸ ಹೊಳ್ರ ೪ ಅಣ್ಣಂದಿರ್ಗೂ ಇಲ್ಲೆ. ಅದ್ಯಾಕ್ ಈ ಹೊಳ್ರಿಗ್ ಈ ಅಭ್ಯಾಸ್ ಅಂಟ್ಕೊಂಡಿತ್ತೋ ನಂಗಂತೂ ಗೊತ್ತಿಲ್ಲೆ.
ಇದೆಲ್ಲಾ ಆಗಿ ಎರ್ಡ್ ತಿಂಗ್ಳ್ ಕಳೀತ್. ಮತ್ ಹೊಳ್ರಿಗ್ ಮಂಡ್ಯಲ್ ಹುಳ ಕೊರೀಲಿಕ್ ಶುರ್ವಾಯ್ತ್ ಕಾಣಿ. ಮತ್ ಕೊಕ್ಕರ್ಣೇ ಆಡಿಗಳ್ ಮನ್ಗೆ ಮಟ ಮಟ ಮಧ್ಯಾಹ್ನ ಪ್ರಶ್ನೆ ಕೇಳೂಕ್ ನನ್ ಕರ್ಕೊಂಡ್ ಹೊರ್ಟ್ರ್ ಕಾಣಿ. ಸಂಜೆ ೪ ಗಂಟಿಗ್ ಅಡಿಗಳ್ ೧೦೮ ಕವ್ಡಿಕ್ ತೆಕ್ಕೊಂಡ್, ಒಂದ್ ಡಬ್ಬೀಲ್ ಕುಲ್ಕಿ, ಚಾಪಿ ಮ್ಯಾಲ್ ಹಾಕಿ ೩ ಭಾಗ ಮಾಡಿದ್ರ್. ಅದ್ರಲ್ ೩ ನೇ ಭಾಗ ತೆಕ್ಕೊಂಡ್, ಕೊನೇಗ್ ೧೦ ಕವ್ಡಿಗಳ್ನ್ ಲೆಕ್ಕ ಹಾಕಿ ಹೋಯ್ ಮಕರ ಬಂತ್ ಕಾಣಿ. ಅಂದ್ರೆ ಮಕ್ರಕ್ ೮ ರಲ್ಲಿ, ಅಂದ್ರೇ ಸಿಂಹದಲ್ಲಿ ರಾಹು ಮತ್ ಗುರು ಕೂತಿದ್ದ. ಇನ್ ಈ ಸಿಂಹದಿಂದ ೪ನೇ ರಾಶಿಯಲ್ಲಿ ಶನಿ ಕುಳ್ತಿರ್ವ. ಅಂದ್ರೇ ನಿಮ್ ಮನಿ ಮಧ್ಯ ಬಂದ್, ಈಶ್ವರ್ನಿಗೂ, ನಿಮ್ಮನಿ ಹಿಂದ್ ಇರುವ ಜಟಕ್ನಿಗೂ ನೇರ್ ದೃಸ್ಟಿ ಹೋಯ್ತ್ ಕಾಣಿ. ಇದಕ್ ನೀವ್ ಏನ್ ಮಾಡ್ಬೇಕಂದ್ರೇ, ಜಟಕ್ನಿಗ್ ಒಂದ್ ನೆಲೆ ಕೊಡ್ಸ್ಬೇಕ್. ಅವ್ನಿಗ್ ಒಂದ್ ಮಾಡ್ ಹಾಕ್ಸ್ಬೇಕ್, ಒಂದ್ ಸಾವಿರ್ ಜನ್ರಿಗ್ ಊಟ ಹಾಕ್ಸ್ಬೇಕ್ ಅಂತ ದೊಡ್ಡ ಪಟ್ಟ್ಯನ್ನೇ ಕೊಟ್ರ್. ಅಡಿಗಳ್ಗೆ ೫೦೦ ರೂಪಾಯ್ ಕೊಟ್ ನಮ್ಸ್ಕಾರ ಮಾಡಿ, ಈ ಹೊಳ್ರ್ ಅಲ್ಲಿಂದ್ ಜಾಗ ಖಾಲಿ ಮಾಡಿದ್ರ್.
ಮನೀಗ್ ಬಂದ್, ಮಕ್ಳ ಹತ್ರ , ಮಕ್ಳೇ ನಾನ್ ಒಂದ್ ಲಕ್ಷ ಹಾಕ್ತೇ. ಹೋ ನೀನ್ ಒಂದ್ ಲಕ್ಷ ಕೊಡ್ಕ್ ಅಂತ ದೊಡ್ಡ್ ಮಗ್ನಿಗ್ ಹೇಳಿದ್ರ್. ಇನ್ ಸಣ್ಣ್ ಮಗ್ನಿಗೂ ಒಂದ್ ಲಕ್ಶ ಹಾಕ್ಲಿಕ್ ಹೇಳಿದ್ರ್. ಮತ್ತುಳ್ದದ್ದನ್ನ ಊರಿನವ್ರ ಹತ್ರ ವಂತಿಕೆ ಎತ್ವಾ? ಅಂತ ಕೆಲ್ಸಕ್ ಕೈ ಹಾಕಿಯೇ ಬಿಟ್ರ್!. ಓ, ಮರ್ತೇ ಹೋಯ್ತ್. ಮತ್ ಒಂದ್ ದರ್ಶನ ಮಾಡ್ಸ್ಕ್ ಮಾರಾಯ ಅಂತ ದರ್ಷನ್ ಪಾತ್ರೀಗ್ ಏಪ್ರಿಲ್ ೮ಕ್ ಬರ್ಲಿಕ್ ಹೇಳಿದ್ರ್. ೮ನೇ ತಾರೀಕ್ ಧಿಡೀರ್ ಅಂತ ಬಂತ್. ದರ್ಶನ್ ಪಾತ್ರಿಗಳ್ ಮತ್ ಹೊಳ್ರ್ ಮನೀಗ್ ಬಂದ್ರ್. ಬೆಳಿಗ್ಗೆ ೬ ಗಂಟಿಗ್ ತಣ್ಣೀರ್ ಸ್ನಾನ ಮಾಡಿ, ಕೆಂಪ್ ಪಟ್ಟೆ ಉಟ್ಟ್,ಕೂದಲ್ ಬಿಚ್ಚಿ, ಹೂ ಮತ್ ನೀರನ್ನ ತುಂಗ್ರ ಹತ್ರ ಹಾಕ್ಸ್ಕೊಂಡ್ ಕುಣ್ದ್ರೂ ಕಾಣಿ.ಕುಣ್ದ್ರೂ ಕಾಣಿ. ಅದ್ನ ಕಾಂಬೂಕ್ ಬಹಳ್ ಚಂದ. ಇದ್ ಯಾಕ್ ಹೇಳ್ದೇ ಅಂದ್ರೇ, ಇಲ್ಲಿ ಪಾತ್ರಿಗಳ್ ಫೀಸ್ ಕೂಡಾ ಜಾಸ್ತಿ. ಅವ್ರ್ ೧೦,೦೦೦.೦೦ ರೂಪಾಯಿಗ್ ಸೆಟ್ಲ್ ಮಾಡ್ಸ್ಕೊಂಡಿದ್ರ್. ಅದ್ಕೇ ದರ್ಷನದಲ್ಲಿ ವೆರೈಟೀ ವೆರೈಟೀ ಕುಣ್ತಾ ಇತ್! ಇಲ್ಲಿ ಯಾರ ದರ್ಷನವನ್ನಾ ಖಂಡ್ನೆಯನ್ನ ಮಾಡೋದಿಲ್ಲ. ಇದ್ ನಮ್ಮ ದಕ್ಷಿಣಕನ್ನಡದಲ್ಲಿ ನಡೆಯುತ್ತಿರುವ ರೀತಿಯೇ ಹೀಗೆ. ಅವ್ರಿಗೂ ಒಂದ್ ಅರ್ಧ್ ನಿಮ್ಶ ಅತವಾ ೧ ನಿಮ್ಷ್ ದೇವ್ರ್ ಮೈಮೇಲ್ ಬತ್ತಿತ್ ಅಂತ ಹೇಳ್ತಿದ್ರ್. ಕಂಡವ್ರ್ಯಾರೂ ಇಲ್ಲ ಮತ್ ಈ ಮಾತನ್ನ್ ಬೇರವ್ರಿಗ್ ಹೇಳಿದ್ರೂ ನಂಬುವಂತಿಲ್ಲೆ ಅಂತಿಟ್ಕೊಳ್ಳೀ. 
ಸರಿ ಕುಣ್ದ್ ಆದ್ ಮ್ಯಾಲೆ, ಹೊಳ್ರಿಗ್ ಪಾತ್ರಿಗಳ್ ಹಾಂ ಈಗ ಹೇಳ್ , ನನ್ನನ್ ಕರ್ಸಿಕೊಂಡದ್ ಉದ್ದೇಶ?
ಹೊಳ್ರ್, ಬಗ್ಕೊಂಡ್, ದೇವ್ರೇ ನಾನೊಂದ್ ಜಟ್ಕನೀಗ್ ಮಾಡ್ ಹಾಕ್ಸ್ಬೇಕಂತ್ ಮಾಡಿದ್ದೆ. ಅದಕ್ ನೀವ್ ನಮ್ಗೆ ಅಪ್ಪಣೆ ಕೊಡ್ಸ್ಬೇಕ್ ಅಂತ ಹೇಳಿದ್ರ್.
ಪಾತ್ರಿಗಳ್, ನಿನ್ನಂತಾ ಭಕ್ತ ನಂಗ್ ಸಿಕ್ಕಿರೋದ್ ನನ್ ಪುಣ್ಯ! ನಿನ್ನಿಂದ್ ನಾನ್ ಬೆಳೀತಿದ್ದೀನಿ. ಆದ್ರಿಂದ ನೀನ್ ಎಣಿಸ್ದ್ ಕಾರ್ಯಕ್ ಕೈ ಹಾಕ್ ಎಲ್ಲಾ ಸರೀ ಆತ್ ಕಾಣ್ . ಮತ್ತೇ ಇದೇ ತಿಂಗ್ಳ್ 2೮ಕ್ಕೆ ಈ ಕೆಲ್ಸ್ ಮುಗ್ಸೀ ಸಾವಿರ ಜನ್ರಿಗ್ ಪ್ರಸಾದ ಹಂಚ್ ಅಂತ ಹೇಳಿ, ಹೊಳ್ರಿಗ್ ಹಿಡೀ ಪ್ರಸಾದ ಅಂತ ಹೇಳಿ, ನೀಡಿದಂತಹ ಕೈಗ್ ಒಂದ್ ಮುಸ್ಟಿ ಸ್ರಂಗಾರ್ ಹೂವ್ ಹಾಕಿದ್ರ್. ಮತ್ ಹೂ ನೀರ್ ಹಾಕ್ಸೊಂಡ್, ದರ್ಷನವನ್ನ ಇರ್ಸಿಕೊಂಡ್ರ್. ಕೊನೆಗ್ ನಾನ್ ಪಾತ್ರಿಗಳೂ ಸೇರಿ ಪ್ಯಾಟಿ ಕಡೆಗೆ ಹೊರ್ಟ್ವಿ. ದಾರಿಯಲ್ ಹೋಯ್ ನಾನ್ ಸರೀ ವಾಕ್ಯ ಕೊಟ್ಟೆ ಅಲ್ವಾ ಅಂತಾ ನನ್ನ ಕೇಳಿದ್ರ್. ಅದಕ್ ನಾನ್ ಹೇಳ್ದೇ, ನಿಮ್ಮ ದಕ್ಷಿಣೆ ಕೂಡಾ ಹಾಂಗೇ ಇತ್ತ್ ಅಲ್ವಾ? ನಮ್ಹೊಳ್ರಂತ ಭಕ್ತ್ರೂ ಇರೂವರ್ಗೆ, ನಿಮ್ಮಂತಹ ಪಾತ್ರಿಗಳಿಗೇನೂ ತೊಂದ್ರೆ ಇಲ್ಯೇ ಅಂತ ಹೇಳಿ ಉಪಾಯ್ದ್ರ್ ಅಂಗಡಿಯೊಳ್ಗೆ ಮಸಾಲೆ ದೋಸೆ, ಬಿಸೀ ಚಾಯ್ ತೆಕೊಂಡ್ವೀ. 
ಇಸ್ಟೆಲ್ಲಾ ನಿಮ್ಗ್ ನಾನ್ ಯಾಕ್ ಹೇಳ್ತಿದ್ದೇ ಅಂದ್ರೇ, ನಮ್ ಜನಗಳ್ ಎಸ್ಟೇ ಕಲ್ತಿರ್ಲಿ, ಕೆಲವೊಂದು ಮೂಢ ನಂಬಿಕೆಗಳಿಗೆ ಎಳ್ಳು ನೀರನ್ನ ಹಾಕಲೇ ಬೇಕ್. ಯಾಕೆಂದ್ರೇ, ಈ ದರ್ಶನ ಮಾಡುವ ಕೆಲವೊಂದು ಪಾತ್ರಿಗಳ ಚರಿತ್ರೇ ಏನೂ ಸುಖವಿಲ್ಲ.ಎಸ್ಟೊಂದು ಜನ ಅಡ್ಡ ಹಾದಿ ಹಿಡಿದವರೂ ಇದ್ದಾರೆ. ಊರಿನ ಎಲ್ಲಾ ಕಡೆಯಲ್ಲಿಯೂ ಸಾಲವೇ ಸಾಲ ಮಾಡಿಕೋಂಡವರನ್ನೂ ನಾನು ನೋಡಿದ್ದೇನೆ! ಇದೇ ಪಾತ್ರಿಗಳ್, ಸುಮಾರ್ ಜನ್ರಿಗ್ ದುಡ್ ಹಾಂಟ್ ಹಾಕಿದ್ ವಿಶ್ಯಾ ಈ ಹೊಳ್ರಿಗ್ ಗೊತ್ತೇ ಇಲ್ಲೆ. ಅಸ್ಟೇಕೆ, ಇವ್ರ್ ತಂಗೀ ಮಗ್ನೇ ಅವ್ರಿಗ್ ಜಾಮೀನ್ ಹಾಕಿ ಸಿಕ್ಕಿ ಕೊಂಡಿರ್ವ ವಿಚಾರ್ವೂ ಗೊತ್ತಿಲ್ಲೆ. ಎಸ್ಟು ಭೋಳ ಈ ನಮ್ಮ ಹೊಳೃ? ಇನ್ ನನ್ ಕಣ್ಮುಂದೇ ೩ ಬಾರಿ ನಾಗನ್ ಬನ ಬದ್ಲಾಯ್ಸಿದ್ರ್. ಬನದಲ್ಲಿ ಹುಗಿದಿಟ್ಟ ನಾಗನ್ ಕಲ್ಲನ್ನ ಮೂರ್ ಬಾರಿ ತಿರ್ಗಿಸಿದ್ರ್. ಇಸ್ಟರವರೆಗೆ ಸುಮಾರು ೪೦೦ ಮಂದಿ ಊಟ ಮಾಡಿ ಹೋದ್ರ್. ಈಗ ೧೦೦೦ ಜನ್ರಿಗ್ ಸಂತರ್ಪಣೆ ಇಟ್ಕೊಂಡಿದ್ರ್. ಈ ಜ್ಯೋತಿಷಿಗಳಿಗ್, ಪಾತ್ರಿಗಳ್ಖಿಗ್ ಇಸ್ಟರ್ವರೆಗೆ ಮೂವತ್ ಸಾವಿರ ಖರ್ಚನ್ನ ಮಾಡಿದ್ರ್. ಈ ಜಟ್ಕಾ ದೈವಕ್ ಮಾಡ್ ಹಾಕ್ಸ್ಲಿಕ್ ಕಡಿಮೇ ಅಂದ್ರೇ ೭ ಲಕ್ಷ ರೂಪಾಯಿ ಬೇಕ್. ಇವ್ರಿಗ್ ಏನಾದ್ರೂ ಕೆಲ್ಸ್ ಇತ್ತೇ? ಇವರ್ ಬರೇ ಬ್ಯಾಂಕಿನಲ್ಲಿಟ್ಟ ರೂ.೧೦ ಲಕ್ಷದ ಬಡ್ಡೀ ದುಡ್ಡಲ್ ಜೀವ್ನೋಪಾಯ ಮಾಡ್ತಿದ್ರ್. ಇವರಿಗ್, ಅಂದ್ರೇ, ಈ ಹೊಳ್ರಿಗ್ ಮಂಡೀ ಯಾಕ್ ಸರಿ ಇಲ್ಲೆ ಮಹಾರಾಯ್ರೇ? ಇವ್ರ್ ಸರೀ ಆಪುದ್ ಯಾವಾಗ? ಎಸ್ಟ್ ಬಾರಿ ಇದೇ ತರಹ ದರ್ಷನ ಮಾಡ್ಸ್ತಾನೇ ಇರ್ತ್ರು? ಈ ಹೊಳ್ರೇನೂ ೩೦ ರ ಹರೆಯದ ಯುವಕ್ರೇನೂ ಅಲ್ಲ. ಇವ್ರೂ ಇಂದೋ ನಾಳೆಯೋ ಅನ್ನುವ ಹಾಗೆ ೮೫ ವರ್ಷದ ಮುದುಕ. ನಂಗೇ ಆಸ್ಚರ್ಯ ಆಯ್ತು. ಈ ಮಕ್ಳಿಗೂ ಯಾಕ್ ಬುಧ್ಧಿ ಬರೋಲ್ಲ!. ಅವ್ರ ದೊಡ್ಡ್ ಮಗ ಮೇಸ್ಟ್ರ್ ಬೇರೆ. ಸಣ್ ಮಗ ಯೂನಿವರ್ಸಿಟಿಯಲ್ಲಿ ದೊಡ್ಡ ಪ್ರೊಫೆಸರ್ ಬೇರೆ. ಇಸ್ಟೆಲ್ಲಾ ಇದ್ದೂ ಇವ್ರ್ ಕೂಡಾ ಅಪ್ಪನ್ನೇ ಹಿಂಬಾಲ್ಸ್ಲಿಕ್ ಕಾರಣ ಏನೂ ಅಂತ ನನ್ಗಿನ್ನೂ ಅರ್ಥವಾಗ್ತಿಲ್ಲಿಯೇ. ಈ ವಿಚಾರ ನಾನ್ ಏಕೆ ಇಸ್ಟೊಂದ್ ಯೋಚಿಸ್ತೇನೆಂತ್ ನೀವ್ ಯೋಚಿಸುತ್ತಿದ್ದೀರೋ. ಆ ಗುಟ್ ನಿಮ್ಗ್ ಹೇಳಿದ್ರೆ ಈ ಕಥೆ ಗುಟ್ ರಟ್ಟಾದ್ ಹಾಗ್ ಆಯ್ಲಿಲ್ಲ್ವಾ? ಒಟ್ಟಾರಿ ನನ್ನ ಮಂಡಿಯೊಳ್ಗ್ ಈ ವಿಚಾರ ಓಡ್ತಾನೇ ಇತ್ತ್. ಇನ್ನೂ ಓಡ್ತಾನೇ ಇದೆ!.
ಹಾಗಾದರೆ ಇಂತಹ ಜೀವನಕ್ಕೆ ಕೊನೆ ಎಂದು? ಈ ಮೂಢ ನಂಬಿಕೆಯನ್ನ ಇನ್ನೂ ನಮ್ಮ ಸಮಾಜದಲ್ಲಿ ನಡೆಯುತ್ತಿದೆಯಲ್ವಾ? ಅದಕ್ಕೆ ಅಂತ್ಯ ಎಂದು? ನೀವಾದ್ರೂ ಸ್ವಲ್ಪ ಬೆಳಕನ್ನ ಚೆಲ್ಲುವಿರಾ? ಇದೆಲ್ಲಾ ಸರಿಯೋ ತಪ್ಪೋ ನೀವೇ ಯೋಚಿಸಿ!.
ಬರೆದವರು
ಪಾರಂಪಳ್ಳೀ ಸುರೇಂದ್ರ ಉಪಾಧ್ಯರು
ಹವ್ಯಾಸಿ ಜ್ಯೋತಿಷಿಗಳು.
೧೧-೦೩-೨೦೧೪

No comments:

Post a Comment