ಗದ್ದೀ_ಕಾಯ್ವುದು
ಸುರೇ೦೦೯
ಪರಶುರಾಮ ಕಥನಗಳ ನಿತ್ಯೋತ್ಸವ
ಹಾ, ಇದೆಂತದ್ ಮಹಾರಾಯ್ರೇ ಗದ್ದೀ ಕಾಯೋದ್. ಇದೊಂದು ಕಥೆನಾ? ಅಂತ್ ಕೇಳ್ಬೇಡಿ. ಇವತ್ತಿನ ಪೀಳಿಗೆಗೆ, ಅದೆಸ್ಟು ಮಂದೀಗೆ ಈ ಹಳ್ಳೀ ಮನೀ ಬಗ್ಗೇ, ಗದ್ದೀ ಕಾಯೋದ್ ಬಗ್ಗೇ, ಶ್ಯಟ್ಟೀ ಕುಟ್ಟೋದ್ ಬಗ್ಗೇ ಗೊತ್ತ್ ಹೇಳಿ! ಗೊತ್ತಿಲ್ಲಾ! ಖಂಡಿತಾ ಗೊತ್ತಿಲ್ಲಾ. ಯಾಕೆಂದ್ರೇ ಅವ್ರ ಬೆಳ್ದ ವಾತಾವರಣವೇ ಹಾಗೇ. ಪಟ್ಟಣದ ವಾತಾವರ್ಣದೊಳಗೇ ಬೆಳೆದದ್ದು. ನಾ ಹೇಳೂಕ್ ಹೋದ್ರೂ ಅಪ್ಪಾ, ನೀ ಸುಮ್ನೇ ರಗಳೇ, ಗಿಗಳೇ ಮಾಡ್ಬೇಡ. ಅಸ್ಟ್ ನಿಂಗ್ ಟೈಮ್-ಗೀಮ್ ಪಾಸ್ ಆತ್ತಿಲ್ಯಂದ್ರೇ, ವಾಕಿಂಗ್ ಹೋಗ್. ಇಲ್ಲಾ ಎಲ್ಲಾದ್ರೂ ಅಂಗ್ಡಿಯೊಳ್ಗೆ, ಯಾರಾದ್ರೂ ೫೦೦೦ ರೂಪಾಯ್ ಕೊಟ್ರೇ ಕೆಲ್ಸ್ ಮಾಡ್ ಹೋಗ್. ಸುಮ್ನೇ ನಮ್ ತಲಿ-ಗಿಲಿ ತಿನ್ನಬೇಡಾ ಅಂಬುದಾ ನನ್ನ್ ಕಿರೀ ಎಂಜಿಮಿಣಿಯರ್ ಮಗ್ಳೂ! ಹೋಯ್ ನಮ್ದ್ ೬೦ ದಾಟಿ, ಆಫೀಸ್ ಮೆಟ್ಲಿಳಿದ್ ಕೆಳ್ಗ್ ಬಂತಾ,ನಮ್ಗ್ ಬೆಲೀಯೇ ಇಲ್ಯೇ! ಕೂಲಿಯವ್ನೂ ಒಂದೇ, ಪಟ್ಟಾವಾಲಾನೂ ಒಂದೇ , ಬೇಂಕಿನ ಜನ್ರಲ್ ಮೇನೇಜರೂ ಒಂದೇ. ಕಡೇಗ್ ಬೇಂಕಿನ್ ಚೇರ್ಮೇನೂ ಒಂದೇ! ನಮ್ಗ್ ಒಂಚೂರೂ ಮರ್ಯಾದ್ವೇ ಬೇಡ್ವಾ? ಊಹೂಂ ಇಲ್ವೇ ಇಲ್ಲ. ಇದ್ ನನ್ ಕಥಿ ಅಲ್ವೇ. ಎಲ್ಲಾ ನಿವೃತ್ತ ಮಂದೀ ಕಥಿಯೂ ಹೀಂಗೆಯೇ. ಇನ್ ಕೆಲವ್ರ್ ಏನ್ ಮಾಡ್ತಾವ್ರೆ ಅಂದ್ರೆ ಬೆಳಿಗ್ಗೇ ೧೦.೩೦ ಗಂಟಿಗ್ ಮನಿ ಬಿಟ್ ಪಾರ್ಕಿಗ್ ಹೋದ್ರಂದ್ರೇ, ಮತ್ ಅವ್ರು ಬರೋದ್ ಸಂಜೆ ೫.೩೦ ಆದ್ಮೇಲೆಯೇ. ಪಾರ್ಕಿನಲ್ಲಿ ಹೋಗಿ ಅವ್ರಿವರ್ ಜೊತೆ ಪಟ್ಟಂಗಕ್ ಕುಳಿತ್ರೇ ಅವ್ರಿಗೆ ಸಮಯ ಪಾಸ್ ಆಪೋದ್ ಗೊತ್ತೇ ಅತ್ತಿಲ್ಯಂಬ್ರ್!. ಅವ್ರಿಗ್ ಈ ಅಫೀಸ್ಗೆ ಹೋಗೀ, ಹೋಗೀ ಅದೇ ಅಭ್ಯಾಸ್ ಆಯ್ತ್ ಕಾಣಿ. ಮಧ್ಯಾಹ್ನ ಈ ಸೌಥ್ ಇನ್ನೋ, ಇಲ್ಲಾ ರಾಘವೇಂದ್ರ ಕಾಫೀ ಕೋರ್ನರೋ ಇಲ್ಲ ಮನೀ ತಿಂಡಿಯೋ ಇಲ್ಲಾ ಮೈಯ್ಯಾಸ್ಗೋ, ಇಲ್ಲಾ ಎಸ್.ಎಲ್.ವೀಗೋ ಹೋಗಿ ಒಂದೆರಡ್ ಇಡ್ಲಿ, ಒಂದ್ ವಡೆ ತೆಕ್ಕೊಂಡ್ ಒಂದ್ ಗಂಟೆ ಟೈಮ್ ಪಾಸ್ ಮಾಡ್ಕೊಂಡ್, ಮತ್ ಪಾರ್ಕ್ ಒಳ್ಗ್ ನುಗ್ಗಿದವ್ರೆಂದ್ರೇ, ಪಾರ್ಕಿನ ಹೊರ್ಗ್ ಬರೋದೇ ಸಾಯಂಕಾಲ್ ೫ ಗಂಟೀ ಮೇಲೆಯೇ.
ಈ ನಮ್ ಐತಾಳ್ರೂ ಕಥೆಯೂ ಅಸ್ಟೆಯೇ. ಅವ್ರಿಗೇನೋ, ನಮ್ ಬೇಂಕಿನ್ ಜನ್ರಲ್ ಜನ್ರಲ್ ಮ್ಯಾನೇಜರ್ ಅವ್ರ್ ಬೇಂಕಿಗ್ ಹೋಯ್ ಅಸಿಟೆಂಟ್ ಜನ್ರಲ್ ಮೆನೇಜರ್ ಮಾಡಿ ಪ್ರಮೋಷನ್ ಕೊಟ್ಟಿದ್ರು ಕಾಣಿ. ಅದೂ ನಾನ್ ಅವ್ರಿಗ್ ಒಂದ್ ಮಾತ್ ಹೇಳಿದ್ಮ್ಯಾಗೆಯೇ ಹೊರ್ತು, ಇವ್ರ ದೊಡ್ಡ ಸಂಭ್ರ್ಮಕಲ್ವೇ.ನಾನ್ ಅವ್ರ ಹತ್ರ ಫೋನಲ್ಲಿ, ಹೋಯ್ ಇವ್ರ್ ನಮ್ಮವ್ರೇ ಮರಾಯ್ರೇ. ಸ್ವಲ್ಪ ನೋಡ್ಕೊಳ್ಳೀ ಅಂತ ಹೇಳಿದ್ ಮ್ಯಾಲೇ ಅವ್ರಿಗ್ ಪ್ರಮೋಷನ್ ಕೊಟ್ರೂ ಅನ್ನಿ. ಅವ್ರ್ ಅಸ್ಸಾಂನಲ್ ಇಪ್ಪೊತ್ಥಿಗ್ ಅವ್ರ್ ಮಟ್ಟ ನನ್ ಮಟ್ಟಾ ಎರ್ಡೂ ಒಂದೇ ಇತ್ತೇ. ಆವಾಗ, ಅವ್ರ್ ಹೆಣ್ಣಿನ್ ಜಾತ್ಕ ತೋರ್ಸಿ ಭವಿಷ್ಯ ಕೇಳಿದ್ ಏನ್, ಅವ್ಳಿಗ್ ಮದೀ ಯಾವಾಗ ಅಂತ ಕೇಳಿದ್ ಹೊಡ್ತಾ ಏನ್, ಅವ್ಳ್ ವಿದ್ಯಾಭ್ಯಸದ್ ಬಗ್ಗೆ ಕೇಳಿದ್ ಏನ್?, ಅವ್ರ್ ಮಗನ್ ಜಾತ್ಕಾ ತೋರ್ಸೀ ಅವ್ನ್ ಉದ್ಯೋಗ ಕೇಳಿದ್ ಏನ್ ಅದೆಲ್ಲಾ ಮರ್ತೇ ಹೋಯ್ತೇ. ಕೊನೆಗೂ ಅವ್ರಿಗ್ ಒಂದು ಬೇಂಕಿನವ್ರ್ ಎಳ್ದ್ ಚಾರ್ಜ್ ಸೀಟ್ ಕೊಟ್ರೂ ಕಾಣಿ. ಹಿಡ್ಕಣೀ. ಜನಾ ಸೀದಾ ನಮ್ಮನೀ ಬಾಗ್ಲೀಗ್ ಬರೂದಾ?. ಬಂದ್ ಹೋಯ್ ನಿಮ್ಮ ಹತ್ರಾ ಸ್ವಲ್ಪ ಮಾತೋಡೋದ್ ಇತ್, ನಮ್ ಮನೀಗ್ ಇವತ್ ಊಟಕ್ ಬರ್ಕಲ್ಲೇ ಅಂತ ನಮ್ಹೆಂಡ್ತೀ ಹೇಳ್ತಾಳ್ ಮರೇರ್ರೇ. ಬನ್ನಿ ಅಕ್ಕಾ. ನಿಮ್ಹತ್ರಾ ಸ್ವಲ್ಪ ಬ್ಯಾಂಕಿನ್ ವಿಷ್ಯ ಮಾತಾಡ್ಬೇಕ್ ಕಂಡ್ರ್ಯಾ. ಅದೆಲಾ ಇಲ್ಲಿ ಎಲ್ಲಾ ಮಾತಾಡೋ ವಿಷ್ಯ ಅಲ್ಲ. ನಾವ್ , ನೀವೇ ಇಬ್ರ್ ಕುಳ್ತ್ ಮಾತಾಡುವಾ. ಆಯ್ತಾ. ಹೋಯ್ ಮಿಸ್ ಮಾಡ್ಬೇಡಿ. ಖಂಡಿತಾ ನೀವ್ ಬರ್ಕ್ ಅಂತ ಹೇಳ್ಕೇ ಮಾಡಿ, ಜನ ಸ್ಕೂಟರ್ ತೆಕ್ಕೊಂಡ್ ಸೀದಾ ಮನೀಗ್ ಹೋಯ್ತೇ!
ಸರೀ ನಾನ್ ಹೆಂಡ್ತಿಯನ್ ಕರ್ಕೊಂಡ್,( ಬೇರವರ್ ಹೆಂಡ್ತಿ ಅಲ್ಲಾ ಅಂತ್ ಮಾಡಿ!) ಅವ್ರ್ ಮನಿಗ್ ಮಧ್ಯಾಹ್ನ ೧೨ ಗಂಟಿಗ್ ಊಟಕ್ ಕಾರ್ ತೆಕ್ಕೊಂಡ್ ಹೊರ್ಟೇ ಅನ್ನೀ. ಆ ಜನಾ ಮನಿ ಗೇಟ್ ಹತ್ರ ಬಂದ್ ಕಾಯ್ತಿತ್ತೇ!. ನಾನ್ ಹೋದದ್ದೇ ತಡ, ಸೀದಾ ನನ್ ಕಾರ್ ಬಾಗ್ಲ್ ಅವ್ರೇ ತೆಗ್ದ್, ಲಿಫ಼ಟ್ನಲ್ಲಿ ೪ನೇ ಮಹಡಿಯಲ್ಲಿರುವ ಅವ್ರ್ ಮನೀಗ್ ಕರ್ಕೊಂಡ್ ಹೋಗಿ ಜೂಸ್ ಗೀಸ್ ಕುಡ್ಸಿ, ಸೀದಾ ಕಪಾಟ್ ತೆಗ್ದ್ ಅವ್ರ್ ಜಾತ್ಕ್ ತೆಗ್ದ್ ನನ್ ಕೈಗ್ ಹಾಕೀ, ಹೋಯ್ ಉಪಾಯ್ದ್ರೇ ಈ ಜಾತ್ಕ ನೋಡಿ ಹೇಳಿ ನಾನ್ ಈ ಚಾರ್ಜ್ ಸೀಟ್ನಿಂದ ಹೊರ್ಗ್ ಬರ್ತೇನಾ ಇಲ್ಯಾ ಅಂತಾ? ದಮ್ಮಯ್ಯ ಮರಾಯ್ರೇ ಅಂತ ಹನಿ ಕಣ್ಣೀರ್ ಹಾಕಿದ್ದಾ ಆ ಜನಾ! ಸರೀ ನಾನ್ ನೋಡಿ ಹೋಯ್ ನಿಮ್ಗ್ ಏನೂ ಆಗೋದಿಲ್ಲ. ಗುರೂ ದೃಸ್ಟಿ ಇನ್ ಒಂದೂವರೆ ವರ್ಷದ್ ಮೇಲ್ ನಿಮ್ ವೃತ್ತಿ ಮನೀ ಮೇಲ್ ಬೀಳುತ್. ಆವಾಗ್ ನೀವ್ ಹೊರ್ಗ್ ಬರ್ತೀರಿ ಖಂಡಿತಾ ಅಂತ ಹೇಳಿದ್ದೆ. ಹಾಂಗೇ ಆಯ್ತೇ. ಬರೋಬ್ಬರೀ ೨ ವರ್ಷದ್ ಮ್ಯಾಲೇ ಅವ್ರನ್ನ ನಿರಪರಾಧೀ ಅಂತ ಬ್ಯಾಂಕಿನವ್ರ್ ಘೋಷಣೆ ಮಾಡಿ, ಅದ್ಕ್ ಒಂದು ಸಮಾಪ್ತೀ ಪತ್ರ ಕೊಟ್ರೇ!. ಸರಿ ಅಬ್ಬ ಅಂತ ಇವ್ರ್ ನಿಟ್ಟಿಸುರನ್ ಬಿಟ್ರ್ ಆ ಜನಾ!. ಅಂತೂ ಇಂತೂ ನನ್ ಪ್ರಮೋಷ್ನ್ನಿಗೇನೂ ಇನ್ಮೇಲೆ ತೊಂದ್ರೇ ಇಲ್ಲಾ ಅಂತ. ಇದ್ ನಂಗ್ ಅವ್ರೇನ್ ಹೇಳ್ಳಿಲ್ಲಾ ಅಂತಿಟ್ಕೊಳ್ಳೀ. ನಂಗ್ ಊರವ್ರೆಲ್ಲಾ ಗೊತ್. ನಾನ್ ಅವ್ರ್ ಬಗ್ಗೆ ಆ ಪುಟ್ಟ್ನ ಹತ್ರ ಕೇಳಿ ತಿಳ್ಕೊಂಡಿದ್ದೇ ಅನ್ನಿ. ಈ ಪುಟ್ಟ ಅವ್ರಿಗೂ ಗೊತ್ತು, ನಂಗೂ ಗೊತ್ತು!.
ಆದ್ರೇ ಈ ಐತಾಳ್ರೂ ನಾನ್ ಇದೆಲ್ಲಾ ಹೇಳಿದ್ದನ್ನೆಲ್ಲಾ ಪೂರ್ತೀ ಮರ್ತ್ ಬಿಡುದೇ ಮಹರಾಯ್ರೇ? ಈ ಜಗತ್ತೇ ಹಾಂಗೆಯೇ. ಸರಿ ನನ್ ಕತಿ ಎಂತದ್ದ್ ಅಂದ್ರೇ, ನಾನ್ ಬೆಳ್ಳಗಿದ್ದದ್ದ್ನೆಲ್ಲಾ ಹಾಲೆಂದು ತಿಳಿಯುವ ಮನುಷ್ಯ. ಅವ್ರ್ ಊಟ ಹಾಕಿದ್ರೂ ಅಂದ್ಮೇಲೆ ಅವ್ರ್ ಮನೀ ಕಕ್ಕಸ್ ಕೂಡಾ ತೊಳಿಯುವ ಜಾತಿ ನನ್ದ್. ನಂಗೆ ಮೇಲ್ ಹಾಗೂ ಕೀಳ್ ಭೇದ ಭಾವವೇ ಬರೋದಿಲ್ವೇ. ಯಾಕೆಂದರೆ ಸತ್ ಮ್ಯಾಗೆ ಎಲ್ಲರಿಗೂ ಬೇಕಾಗುವ ಜಾಗ ಬರೇ ೬ ಗುಣ ೩ ಅಡೀ ಹೊಂಡ್ವೇ ಹೊರ್ತೂ ಬೇರೇನೂ ಅಲ್ಲ. ಇಲ್ಲಾ ಅಸ್ಟೇ ಉದಗಲದ ಕುಂಟಿಯೇ (ಕುಂಟೀ ಅಂದ್ರೇ ಸತ್ತ ಮ್ಯಾಲೆ ಹೆಣವನ್ನ ಸುಡುವಂತಹ, ಕಟ್ಟಿಗೆಯಿಂದ ಜೋಡಿಸಿ ಕಟ್ಟುವಂತಹ ಒಂದು ೪ರಿಂದ ೫ ಅಡಿ ಎತ್ತರದ , ಒಂದು ದೇಹ ಹಿಡಿಯುವಂತಹ ಕುಂಟಿ) ಈಗಿನ್ ಜನ್ರಿಗ್ ಇದ್ರ್ ಹೆಸ್ರೇ ಗೊತ್ತಿಲ್ಲೆ. ಈ ಭಾಷೆಯಲ್ ಬರ್ದ್ ಕಾರಣಕ್, ನಂಗ್ ಎಸ್ಟ್ ಜನ್ ಹಿಡೀ ಶಾಪ ಹಾಕ್ತ್ರೇನೋ? ಗೊತ್ತಿಲ್ಲ!. ಅದಕ್ ಕಾರಣ ಸರೀ ಕನ್ನ್ನಡವೇ ಓದ್ಲಿಕ್ ಬಾರ್ದಿದ್ದದ್. ಈ ನಮ್ ಕರ್ನಾಟಕದ್ ಜನಾ, ಹ್ಯಾಂಗ್ ನಮ್ಮ ಕೋಟದ್ ಭಾಷೆಯನ್ನ ಓದುತ್ರೂ ಹೇಳಿ?. ನಮ್ ನಟರಾಜ್ ಉಪಾಯ್ದ್ರಿಗ್ ಮಂಡೀ , ಅವ್ರ್ ಅಜ್ಜನ ಮಂಡೀ ಹಾಳಾದ್ ಹಾಂಗೇ ಸಮಾ ಹಾಳಾಯ್ತಾ ಅಂತ ಕಾಣ್ಸುತ್ತೆ. ಅವ್ರ ಅಜ್ಜನಿಗೇನೋ ೭೦ರಲ್ಲಿ ಹಾಳಾಯ್ತೆನ್ನಿ. ಅದಕ್ ಅವ್ರಿಗ್ ವೇದಾಂತದ್ ಬಗ್ಗೇ ತಲಿ ತಿರ್ಗತ್ ಅಂತ ಈ ಮೊಮ್ಮಕ್ಳ್ ಈಗ ಹೇಳೂಕ್ ಶುರು ಮಾಡಿದ್ರು. ನಾವ್ ಕಂಡವ್ರ್ ಮಾತ್ರ ಈ ಮಾತನ್ ಹೇಳೂದಿಲ್ಲ್ವೇ. ಅದ್ ಅವ್ರಿಗೆಲ್ಲಾ ಗೊತ್ತಿಲ್ವೇ. ಈ ರಾಮಜ್ಜನಿಗೆ ಸ್ವಲ್ಪ ನಾಕಾಣೀ ಕಮಿಯೇ ಇತ್ ಅಂತ ಜನಾ ಆಡ್ಕಂಡ್ ಇರ್ತಿದ್ರ್. ಅದೇ ಮಂಡೀ ಈ ನಟ್ರಾಜ್ನಿಗೂ ಬಂತೇ? ಇದು ಒಂದು ದೊಡ್ಡ ಕ್ವೆಸ್ಚನ್ ಮಾರ್ಕ್! ಅವ್ನ್ ಮಾತ್ರ ನಾ ಸರೀ ಇದ್ದೆ ಅಂತ ತಿಳ್ಕೊಂಡಿದ್ದಾ! ತಿಳ್ಕೊಳ್ಳೀ. ಯಾರ್ ಬ್ಯಾಡಾ ಅಂದ್ರು. ಹಾಂಗಂತಾ ತಿಳ್ಕೊಂಡಿದ್ರೇ ನಮ್ಗೇನ್ ಖರ್ಚಾಗುತ್ತೇ? ಎಲ್ರಿಗೂ ಸ್ವಾತಂತ್ರ್ಯ ಈ ನಮ್ ದೇಶದಲ್ಲಿ ಇದೆ ಅಲ್ವಾ? ಹೋಯ್ ಈ ಮಾತನ್ನ ನಟ್ರಾಜ ಉಪಾಯ್ದ್ರಿಗ್ ಮಾತ್ರ ದಯವಿಟ್ ಹೇಳ್ಬೇಡಿ. ಆಯ್ತಾ. ಹಾಂಗೆಲ್ಲಾ ಹೇಳಿದ್ರೇ ಬರೀ ನಿಸ್ಠುರಾ. ಇದೆಲ್ಲಾಬರ್ದೇ ನಮ್ಗ್ಯಾಕ್ ಹೇಳಿ?. ಬರ್ದೇ ಬ್ಯಾಡ್ದಿದ್ ವ್ಯಾಪಾರಾ!. ಇನ್, ನಮ್ಮಲ್ಲಿ ಕೆಲವ್ರಿಗ್ ಬೇಕಂತ್ಲೇ ಈ ನಟ್ರಾಜ್ನಿಗ್ ಫೋನ್ ಮಾಡಿ ವಿಷ್ಯ ತಿಳ್ಸೋ ಕ್ರಮ!. ಅವ್ರಿಗ್ ಮನ್ಯಲ್ಲಿ ಸುಮ್ನೇ ಕೂತದ್ದಕ್ಕೇ ಟೈಮ್ ಪಾಸಾಗೋದೇ ಇಲ್ಲ!. ಯಾಕಂತ ಫೋನ್ ಮಾಡ್ಕ್ ಹೇಳಿ. ಕಾರಣ ಏನೂ ಅಂತ ಕೇಳಿದ್ರೇ ಅವ್ರಿಗ್ ಈ ರೀತಿ ಮಾಡ್ದಿದ್ರೇನೇ ನಿವೃತ್ತೀ ಸಮಯ್ ಪಾಸಾತ್ ಅಂತ್ರೂ ಕಾಣಿ!. ಈ ವಿಷ್ಯ ಇಲ್ಲೇ ಇರ್ಲಿ. ಹೋಯ್ ನಮ್ಹತ್ರ ಬಂದ್ರೇ, ವಿಷ್ಯ ಎಲ್ಲಿಂದ್ ಎಲ್ಲಿಗ್ ಹೋಯ್ತ್ ಕಾಣಿ. ಈ ಕತೀ ಬರೆಯುವವರೇ ಹಾಗೇ. ಓದವ್ರೆಲ್ಲಾ ಈ ಉಪಾಯ್ದ್ರಿಗೂ ಮಂಡೀ ಹಾಳಾಯ್ತೇನೋ ಅಂತ ಕಾಣ್ಸುತ್. ಇಲ್ದಿದ್ರೇ ಅವ್ರ್ ಅಣ್ಣ್ದಿಕ್ಳ್ ಇಬ್ರ್ ಇದ್ರ್. ಅವ್ರೇನೂ ಇವ್ರ್ ಹಾಂಗೇ ಬರೀತ್ರಾ? ಅಥವಾ ಜ್ಯೋತಿಷ್ಯ ಹೇಳ್ತ್ರಾ? ಅಥವಾ ಎಲ್ಲೆಂದ್ರೆ ಅಲ್ಲಿ ಹಾಡ್ ಹೇಳ್ತ್ರೇ? ಒಬ್ರಂತೂ ಎಲ್ಲೆಂದ್ರ್ ಅಲ್ಲಿ ಸಮಾ ಗೊರೀತ್ರ್.ಅವ್ರೀಗ್ ಯಾರ್ ಇದ್ರೂ, ಯಾರ್ ಇಲ್ಲಾ, ಹಾಗ್ ಮಾಡೂಕ್ ಆಗಾ ಅಂಬುದ್ ಇಲ್ವೇ ಇಲ್ಲ್ಯೇ. ! ಆಸ್ಚರ್ಯ, ಅಧೇಂಗ್ ಅವ್ರಿಗ್ ಮಾತ್ರ ನಿದ್ದೇ ಬರ್ತೋ ಆ ದೇವ್ರೊಬ್ಬನಿಗ್ ಗೊತ್. ಇದ್ ಅವ್ರ್ ಹಿಂದಿನ್ ಜನ್ಮದಲ್ಲಿ ಮಾಡಿದ್ ಪುಣ್ಯದ್ ಫಲಾ ಅನ್ನೀ. ಸುಮ್ನೇ ಈ ಸುರೇಂದ್ರನ್ ತರಾ ಬ್ಯಾಡ್ದಿದ್ದ ಮಾತನಾಡಿ ಬಾಯ್ ಕೊಳೀ ತೆಕ್ಕೊಲ್ಲುವುದ್ಕಿಂತ, ಇದ್ ಬಹಳ ಒಳ್ಳೆಯದು. ಇನ್ನೊಬ್ಬರೂ ಎಲ್ಲೆಂದ್ರ್ ಅಲ್ಲಿಗ್ ಗಂಡಾ-ಹೆಡತೀ ಜೋಡಿ , ಜೋಡಿ ಆಗಿ ಫಂಕ್ಷನ್ ಅಟೆಂಡ್ ಮಾಡುವಲ್ಲಿ ಬೆಂಗ್ಳೂರಲ್ಲಿ ಬಿಸೀ ಇರ್ತ್ರು. ಬ್ಯಾರೆ ಒಂದ್ ಪ್ಲಾಸ್ಟಿಕ್ ಬ್ಯಾಗ್ ಕೈಯಲ್ಲಿ!. ಅದೇಕೆಂದ್ರೇ ಮನೀಲ್ ಇರುವ ಮೊಮ್ಮಗ್ನಿಗ್ ಸ್ವೀಟ್ಸ್ ಗೀಟ್ಸ್ ಕೊಟ್ರೇ ಹಿಡ್ಕ್ಕೊಂಡ್ ಹಾಕ್ಲಿಕ್ಕೇ. ಯಪ್ಪೋ ಅವ್ರ್ ತಲಿಯೋ? ಅಲ್ಲಾ ಸುಮ್ನೇ ಬಿಸಾಡುವುದ್ಕಿಂತಾ ಈ ಅಭ್ಯಾಸ ಒಳ್ಳೆಯದೆನ್ನಿ! ಅದೇನೇ ಇರ್ಲಿ, ಈ ಸುರೇಂದ್ರ ಉಪಾಯ್ದ್ರ ಹಾಂಗೇ ಬೇರವ್ರ್ ತಲೀ ತಿಂತಿಲ್ಯೇ. ಅವ್ರಸ್ಟಕ್ ಅವ್ರ್ ಇರ್ತಾರೆ, ಅವಲ್ಪ ಅಲ್ಲಿ ವಿಷ್ಯ ಹೆಕ್ತ್ರು, ಕಾರ್ ತೆಕ್ಕೊಂಡ್, ಡ್ರೈವರ್ ಇಟ್ಕೊಂಡ್ ಜುಮ್ಮ್ ಅಂತ ಎಲ್ಲ್ ಕಡಿಗ್ ಹೋತ್ರೇ!. ಆದ್ರೇ ಈ ಸುರೇಂದ್ರ ಉಪಾಯ್ದ್ರ ತರಾ ಸುಮ್ ಸುಮ್ನೇ ನಮ್ ತಲಲೀ ಮಾತ್ರ ತಿನ್ತಿಲ್ಯೇ. ಆದ್ರೆ, ಒಂದ್ ವಿಢ್ಯ ನಿಮ್ಗೆಲ್ಲಾ ಹೇಳ್ಬೇಕ್. ಅದೇನೆಂದ್ರೇ ಈ ಸುರೇಂದ್ರ ಉಪಾಧ್ಯಾಯರ್ ತರಾ ಇಲ್ದಿದ್ ವಿದ್ಯ್ ಇಲ್ಯೇ. ಇವ್ರ್ ಎಂತದ್ ಮರಾಯ್ರೇ, ಹೋಯ್ ಇವ್ರಿಗ್ ಲಾಯ್ಕ್ ಕುಣೀಲಿಕ್ ಬರತ್ ಅಂದ್ರೇ ಸಾಕ್, ಅಲ್ಲೇ ಕುಣ್ಕೆ ಹಾಕಿ ತೋರಿಸ್ತ್ರೇ. ಹಾಡ್ ಚೆನ್ನಾಗೀ ಹೇಳ್ತ್ರ್ ಅಂದ್ರೇ ಸಾಕ್, ಅವ್ರ್ ಹೇಳೀ ನಿಲ್ಸೋದೊಳ್ಗೇ, ಕಾಳಿಂಗ್ ನಾವ್ಡ್ರ್ ಪದಾ, ಅದೂ ೨ ಗಂಟೀ ರಾತ್ರೀ ಮ್ಯಾಲ್ ಹೇಳುವಂತಹ ಏರ್ ಪಿಚ್ನಲ್ಲಿ“ ನೀಲಾ ಗಗನಾದೊಳೂ ಮೇಘಗಳೂ, ಕಂಡಾಗಲೇ ಕುಣಿಯುತ, ನವಿಲೂ ಕುಣಿಯುತಿದೆ, ನವಿಲು ಕುಣಿಯುತಿದೆ ನೋಡೇ.... ನೋಓಓಓಓಓಡೇಏಏಏಏ” ಅಂತ ಗಟ್ಟಿಯಾಗೀ ಗೆಂಡಿ ಕಿತ್ ಕೂಗ್ತ್ರ್ ಕಾಣಿ!. ಅವ್ರಿಗ್ ಯಾರಾದ್ರೂ ಇವ್ರ್ ಒಳ್ಳೇ ಪದ್ ಹೇಳ್ತ್ರೂ ಅಂದ್ರೇ ಸಾಕ್, ತೆಕ್ಕೊಣ್ಣೀ, ಬ್ಯಾಡ್ರಪ್ಪೋ ಬ್ಯಾಡ! - “ವಿದ್ಯಾ ರತ್ನಂ ಸರಸಿಜ ನಿತ್ಯಂ, ವ್ಯಾಸ ರತ್ನಂ ತುರಂಗೋ, ವಾಂಛಾ ರತ್ನಂ ಪರಮ ಪದವೀ, ಭೋಗ ರತ್ನಂ ವಸಂತೋಓಓಓಓ”
ಅಂಭೋಓಓಓ ರತ್ನಂ ಸರಸಿಜವಿತ್ತಂ ಜ್ನಾನರತ್ನಂ ತುರಂಗೋಓಓ, ಭೂರ್ಭ ರತ್ನಂ ಕನಕ ಶಿಖರೀ ಭೂಪ ರತ್ನಂ ವಿವೇಕಹಾಆಆಆಆಆ” ಅಂತ ಅಪ್ಪ ಹೇಳಿದ್ ಹಾಗೇ ಅಲ್ಲೇ ಒರಳೀ ಕೀಳ್ತ್ರ್ ಕಾಣಿ. ಮೊನ್ನೇ ಮೊನ್ನೇ, ಇವ್ರ್ ಚಿಕ್ಕಿ ಮಗ ಮಂನ್ಯಾತ (ಅವ್ನ್ ಈ ಕೂಟ ಮಹಾ ಜಗತ್ತಿನ್ ಈಗಿನ ಅಧ್ಯಕ್ಷ ಕಾಣಿ), ಅವ್ರ್ ತಮ್ಮನ್ ಮನೀ ಉಪನಯನ್ದಾಗೆ ಇವ್ರ ಎರಡನೇ ಪಂಕ್ತಿಯೊಳ್ಗೇ “ ಶ್ರೀ ವನಿತೆಯರಸನೆ, ವಿಮಲ ರಾಜೀವ ಲೋಚನೇ, ಜಗಕತಿ ಪಾವನನೆ , ಸನಕಾದೀ ಸಜ್ಜನನೇ ನಿಕರಧಾತಾರಾ
ರಾವಣಾಸುರ ಮಥನ ಶ್ರವಣಸುಧಾವಿನೂತನ ಕಥನ ಕಾರಣ
ಕಾವು ದಾನವ ವೀರಗದುಗಿನ ವೀರ ನಾರಾಯಣಾಆಆಆಆ” ಅಂತ ಊಟಕ್ ಕೂತ್ಕೊಂಡಾವಾಗ, ಚೂರ್ಣಿಕ್ ಹೇಳಿದ್ರೇ. ಅದೂ ಯಾಕ್ ಹೇಳಿದ್ರಂದ್ರೇ, ಬೀಜೇಪೀ ಲೀಡರ್ ರಾಮ್ಚಂದ್ರೇ ಗೌಡ್ರ್ ಆ ಪಂಕ್ತಿಯಲ್ ಕೂತಿದ್ರಂತ ಹೇಳಿದ್ರ್. ಅದಕ್ ಆ ಪುಣ್ಯಾತ್ಮಾ ಹೋ ಸುರೇಂದ್ರಾ, ಅದೇನ್ ಒರ್ಳೀ ಕೀಳ್ತಿದ್ದ್ಯಲ್ಲೋ ಅಂತ ಎಲ್ರ್ ಎದ್ರಿನಲ್ಲಿ ಹೇಳೂದಾ ಮಹಾರಾಯ್ರೇ? ಪಾಪ, ಒಂದ್ ಬದೀಗೆ, ಶ್ರೀ ರಾಮ್ಚಂದ್ರೇ ಗೌಡ್ರ್ , ಬೀಜೇಪೀ ಮುಖ್ಯಸ್ಥ್ರು ನಿಮ್ಮ ಸ್ವರ ಅಂದ್ರೆ ಕಂಚಿನ್ ಕಂಠ್ವೇ. ಬಹಳ ಚಂದ್ ಇತ್ ಅಂದದ್ ಅವ್ನಿಗ್ ಗೊತ್ತೇ ಇಲ್ಲ. ನಂಗಂತೂ ಅವ್ನಿಗೊಂದ್ ಸಮಾ ಬಾರ್ಸ್ಬೇಕಂಬಸ್ಟ್ ಸಿಟ್ ನೆತ್ತೀ ವರ್ಗೆ ಬಂತೇ. ಆದ್ರೇ ಅಲ್ಲೇ ಸ್ವಲ್ಪ ತಡ್ಕೊಂಡೇ. ಇರ್ಲಿ, ಈ ಪುಣ್ಯಾತ್ಮನಿಗಂತೂ ಹಾಡೂದಕ್ಕಂತೂ ಬರೋಲ್ಲ, ಇವ್ನಿಗ್ ಹೊಗಳೂಕ್ ಏನಪ್ಪಾ ತೊಂದ್ರೇ ಅಂತ ಮುಖದ್ ಮ್ಯಾಲ್ ಹೊಡ್ದ್ ಹೇಳ್ವಾ ಅನ್ಸ್ತೂ. ಆದ್ರೇ ಅವ್ನ್ ನಂಗೊಂದ್ ರಾಮೋಜೀ ರೇಶ್ಮೆ ವಸ್ತ್ರ ಉಡ್ಲಿಕ್ ಕೊಟ್ಟಿದ್ನೇ. ಅದ್ಕೆ ಸ್ವಲ್ಪ ತಿಕ ಮುಚ್ಕೊಂಡ್ ಸುಮ್ನೇ ಹಲ್ ಕಿರ್ದೇ ಅನ್ನಿ. ಇನ ಕೆಲವ್ರದ್ ಬರೀ ಬರ್ಡ್ ಜಂಬ್ವೇ. ಅವ್ರಿಗ್ ಅಂತೂ ಹೇಳ್ಳಿಕ್ ಬರೋಲ್ಲ ಹೇಳೋರಿಗೂ ಬಿಡೋಲ್ಲ!.ಆದ್ರೇ ಈ ಮನುಷ್ಯ, ಅಂದ್ರೇ ನನ್ನ ಚಿಕ್ಕಿ ಮಗ ಹಾಂಗಲ್ವೇ. ಬಹಳ ಒಳ್ಳೆಯವನೇ. ಹೃದಯದಲ್ಲಿ ಕಲ್ಮಷವಿಲ್ಲದ ವ್ಯಕ್ತಿ. ಅವ್ನಿಗ್ ಏನೆಂದ್ರೇ ಸ್ವಲ್ಪ ಹೊಗಳಿಕ್ ಬೇಕ್ ಅಸ್ಟೇ. ಅವ್ರ್ ಅಪ್ನಿಗೂ ಹಾಂಗೆಯೇ. ಮತ್ತೇ, ಈ ಮೈಯ್ರೀಗ್ ಮೂರ್ ಚಿನ್ನಾದಂತಹ ಮಕ್ಳಿದ್ರ್. ಇಬ್ರ್ ಗಂಡ್ ಮಕ್ಳ್, ಒಬ್ಳ್ ಹೆಣ್ ಹುಡ್ಗೀ. ದೊಡ್ ಮಗಾ ಬಹಳ ಅಂದ್ರೇ ಬಹಳ ಸಾಧು. ಒಳ್ಳೇ ಮಾರ್ಕೆಟಿಂಗ್ ವ್ಯಕ್ತೀ. ಜೆಂಟಲ್ಮೇನ್. ಅವ್ನ್ ನೋಡಿದ್ರೇ ಸಾಕ್, ಅವ್ನಿಗ್ ಜನಾ ಡೆಪಾಸಿಟ್ ಬಿದ್ ಬಿದ್ ಕೊಡ್ತ್ರೇ. ಅದ್ಕೇ ಅವ್ನೆಲ್ಲಿಯಾದ್ರೂ ಬ್ಯಾಂಕಿನಲ್ಲಿ ಕೆಲ್ಸ ಗಿಲ್ಸ ಹುಡ್ಕೀ ಮಾಡಿದ್ರೇ, ಆ ಬೇಂಕಿನ್ ಮೇನೇಜರಿಗ್ ಬಹಳ ಸುಖ!. ಕೂತಲ್ ಕೋಟಿ ಕೋಟಿ ಡೆಪಾಸಿಟ್ ಬ್ಯಾಂಕಿಗ್ ಬರುವ್ದ್ರಲ್ಲಿ ಸಂದೇಹವೇ ಇಲ್ಲ. ಇನ್ ಹೆಣ್ಣ್ ಹುಡ್ಗೀ ೫ ಅಡಿ ೬ ಇಂಚ್ ಉದ್ದ ಇದ್ಲೇ. ಆದ್ರೇ ನೋಡೋದುಕ್ ಬಹಳ ಸುಂದ್ರೀ. ಮತ್ತೇ ಅವ್ಳ್ ಗುಣವೂ ಅಸ್ಟೇ. ಬಹಳ ಅಂದ್ರೇ ಬಹಳ ಒಳ್ಳೇದ್. ಇನ್ ಕೊನೇ ಮಗ ಶ್ರೀರಾಮ , ಆಹಾ ಎಸ್ಟ್ ಮುದ್. ಮೈಯ್ರಿಗ್ ೫೦ ವರ್ಷಾ ಆದ್ ಮೇಲೆ ಹುಟ್ಟಿದ್ ಈ ಮಗ, ಬರೇ ನಗಾಡಿಯೇ ಜನ್ರನ್ ಗೆಲ್ವಂತಹ ಶಕ್ತಿ ಕೊಟ್ಟಿದ್ದಾನೆ. ಸುಮ್ನೇ ಹೇಳೋದಲ್ಲ.
ನೋಡಿ ವಿಶ್ಯ ಎಲ್ಲಿಂದ ಎಲ್ಲಿಗ್ ಹೋಯ್ತ್ ಕಾಣಿ? ಈ ಉಪಾಯ್ದ್ರಿಗ್ ಕಥೇ ಬರ್ಲಿಕ್ ಈ ನಟ್ರಾಜ್ ಹೇಳಿ ಅವ್ನೀಗ ಅನ್ಸ್ಬಹುದ್, ನಾನ್ ಇವ್ರಿಗೆ ಯಾಕಪ್ಪಾ ಹೇಳಿದೇ ಅಂತ ಅನ್ಸಬಹುದ್ ಕಾಣಿ. ಈ ಮಂಜುನಾಥ ಮೈಯ್ನ್ ಬಗ್ಗೇ ಬರೀಲಿಕ್ ತುಂಬಾ ವಿಷ್ಯಗಳುಂಟೇ. ಈ ಬಗ್ಗೆ ಅವ ಹ್ಯಾಗಿದ್ದವ ಹೇಂಗ್ ಆದ ಅನ್ನುವುದ್ ಹೆಚ್ಚಿನವ್ರಿಗ್ ಗೊತ್ತಿಲ್ಲ್ಯೇ. ಅದನ್ ಸಮಯ ಬಂದ್ರೇ ನಾನೇ ನಿಮ್ಗೆ ತಿಳ್ಸ್ತೀನಿ. ಸ್ವಲ್ಪ ತಾಳ್ಮೆಯಿಂದ ಕೂಡ್ರೀ. ಅವ್ನ ಹತ್ರಾ ಬೆಳ್ಳೀ ಲೋಟ, ಗ್ಯಾಸ್ (೪ ಬರ್ನರ್ ಇರುವ) ಒಲೀ, ರೇಷ್ಮೆ ಪಂಚೇ, ದ್ವಾಸಿ ಹಾಕೂದ್ ಹಂಚ್ ಇದೆಲ್ಲಾ ಗಿಟ್ಸ್ಕಂಡ್ ಮ್ಯಾಲೆ ಅವ್ನ್ ವಿಚಾರದ ಬಗ್ಗೇ ನಿಮ್ಗೆ ಇಸ್ಟ್ ಮಾತ್ರ ಇದುವರೆಗೆ ತಿಳಿಸಿದ್ ಸಾಕಲ್ವೇ. ಇನ್ಮೇಲೆ ಅವ್ನ್ ನಂಗ್ ಏನ್ ಮತ್ ಕೊಡ್ತಾ ಅಂತ ಕಂಡ್ ನಿಮ್ಗೇ ಅವ್ನ ಬಗ್ಗೆ ಇನ್ನಸ್ಟ್ ವಿಚಾರ ಮುಂದ್ ತಿಳ್ಸ್ಲಿಕ್ ಇದ್ದೀನಿ. ಆಯ್ತಾ. ಈಗ ಅವನ್ ವಿಚಾರ ಇಲ್ಲಿಗೇ ಕೈ ಬಿಡ್ವಾ. ಅಲ್ಲಿಯವರ್ಗೂ, ಸ್ವಲ್ಪ ಶಾಂತಿಯಿಂದ ಕೂಡ್ರೀ ಮರಾಯ್ರೇ!. ಕೂಡ್ರಿ.

ಈಗ ನಿಧಾನಕ್ಕ್ ಈ ಐತಾಳ್ರ್ ವಿಚಾರಕ್ ಬರ್ವಾ. ಈ ಜನೀಗ್ ಪ್ರಮೋಷನ್ ಸಿಕ್ಕಿ ಕೊನೇಗೂ ಡೆಪುಟಿಯವ್ರಿಗೂ ಹೋದ್ರ್. ಆದ್ರೆ ಒಂದ್ ಕೃತಜ್ನತೆ ಎಂಬ ಶಬ್ದವೇ ಬ್ಯಾಡ್ವೇ ಮರಾಯ್ರೇ. ಅದಿರ್ಲೀ ಅವ್ರ್ ಮಗಳ್ ಮದ್ವೀಗೂ ನಿಮಂತ್ರಣ (ಆಮಂತ್ರಣ ಯಾಕೆಂದರೆ ಈ ಶಬ್ದ ಕೆಲವರಿಗೆ ತಿಳಿಯದೇ ಇರಬಹುದು.) ಇಲ್ಲಾ. ಇನ್ ಇವ್ರ್ ಓರಿಯನ್ ಮಾಲ್ ಹತ್ರಾ, ಮನಿ ಕಟ್ಟೀ ಗ್ರಹ ಪ್ರವೇಷಾ ಮಾಡಿದ್ರೇ! ಅದ್ಕೂ ನಂಗ್ ಆಮಂತ್ರಣ ಇಲ್ಯೇ!.ಆಸ್ಚರ್ಯ! ಹೇಂಗಿದ್ದವ್ರ್ ಹೇಂಗ್ ಆದ್ರ್ ಕಾಣಿ. ಅವ್ರಿಗ್ ಬುಹುಷ್ಯ ಮರ್ತೇ ಹೋಯ್ತಾ ಅನ್ಸುತ್ತೆ. ಎಲ್ರೂ ಹೋಗೋದ್ ಒಂದೇ ಜಾಗಕ್ಕೆ. ಯಾಕ್ ನಾವ್ ಇರುವರೆಗೆ ನಿಸ್ಠುರ್ ಕಟ್ಕಂಕೂ ಅನ್ನೂದ್ ಅವ್ರ ತಲಿಯಲ್ಲಿಲ್ಯೇ?! ಆದ್ರೆ ಇವರ್ ಕೊಕ್ಕೇ ಬುಧ್ಧಿ ನಂಗ್ ಸಮಾ ಅರ್ಥ್ ಆತ್. ಯಾಕೆಂದ್ರೇ ನಮ್ ಅಣ್ಣನೂ ಅವ್ರ್ ಬೇಂಕಿನಲ್ಲೇ ಕೆಲ್ಸ್ ಮಾಡಿ ನಿವೃತ್ತರಾಗಿರುವುದರಿಂದಾ, ಈ ಐತಾಳ್ರ್ ಬುದ್ಧಿಯೂ ನಂಗ್ ಸಾಪ್ ಅರ್ಥಾತ್. ಇರ್ಲಿ ಬಿಡಿ ಈಗ ಅವ್ರ್ ವಿಷ್ಯ. ನಮ್ ಜೀವನದಲ್ಲಿ ಈ ತರ ಎಸ್ಟ್ ಕಲೀ ಬೇಕೋ, ಮತ್ ಎಸ್ಟ್ ಬಿಡ್ಬೇಕೋ ಏನೋ, ಗೊತ್ತಿಲ್ಲ್ಯೇ!. ಆದ್ರೇ ಒಂದ್ ಮಾತ್ ನನ್ ಮಗ್ಳ್ ಅತ್ತೆ ಹೇಳ್ತಿದ್ರು. ಹೋಯ್, ರಿಟಾಯರ್ಡ್ ಆದ್ಮೇಲೆ ಎಲ್ರೂ ಒಂದೇ ಹಾಲಿನ್ ಕ್ಯೂನಲ್ಲಿ ನಿಲ್ಬೇಕ್. ಜನರಲ್ ಮೆನೇಜರಿಗ್ ಸ್ಪೆಸಲ್ ಕ್ಯೂ ಇಲ್ವೇ. ಅವನ್ ಮಾತ್ರ ನಮ್ಗಿಂತ ಕ್ಯೂನಲ್ಲಿ ಮುಂದ್ ಅಂಬ್ ಹಾಗಿಲ್ಲೇ ಕಾಣೀ ಅಂದ್ರು. ಈ ಮಾತ್ ಮಾತ್ರ ಅಕ್ಷರ ಸಹ ಸತ್ಯ!. ಇದ್ ಐತಾಳ್ರಿಗ್ ಯಾವಾಗ್ ಮಂಡಿಯೊಳ್ಗ್ ನುಗ್ಗುತ್ತೋ ಗೊತ್ತಿಲ್ಲೆ!. ಬಿಡಿ ಅವ್ರ್ ವಿಷ್ಯಕ್ಕ್ ಒಂದಿಸ್ಟ್ ಬೆಂಕೀ ಹಾಕ!
ಈಗ ನಾನ್ ಹೀಡಿದ ವಿಷ್ಯಕ್ಕೆ ಬರ್ವಾ. ಓ ಈ ಉಪಾಯ್ದ್ರ್ ಏನ್ ಬರ್ಲಿಕ್ ಹೋದ್ರೋ, ಎಲ್ಲಿಗ್ ನಮ್ಮನ್ ತೆಕೊಂಡ್ ಹೋದ್ರೋ ಅಂತ ಸುಮ್ ಸುಮ್ನೇ ಬಯ್ಬೇಡಿ. ನಂಗಿನ್ನೂ ಮಂಡಿ ಹಾಳಾಗ್ಲಿಲ್ಲೆ. ಮಂಡಿ ಹಾಳಾದ್ರೆ ಬರಿಯುವುದ್ ಬಂದ್! ಇದೇನೂ ಬಂದ್ ಗಿಂದ್ ಅನ್ತಾರಲ್ಲಾ, ಇವ್ರೇನ್ ನಮ್ ನಾಡಿನಲ್ಲಿ ಹುಟ್ಟಿದವ್ರಲ್ವೇ? ಅಂತ ನಿಮ್ಗೇ ಅನ್ನಿಸಿರ್ಬಹುದು.
ಹೌದ್. “ನಾನ್ ಹುಟ್ಟಿದ್ ಪಾರಂಪಳ್ಳೀ, ಬೆಳ್ದದ್ದೂ ಪಾರಂಪಳ್ಳೀ, ವಿದ್ಯಾಭ್ಯಾಸ ಮಾತ್ರ ಬೆಂಗ್ಳೂರೂ” ಅದ್ರಲ್ಲೂ ನೇಷನಲ್ ಕಾಲೇಜು, ಆಮೇಲೆ , ಸೆಂಟ್ರಲ್ ಕಾಲೇಜ್, ಕೆಲ್ಸಾ ಮಾಡಿದ್ದು ದೇನಾ ಬ್ಯಾಂಕೂ”||
ತಿರ್ಗಿದ್ದೆಲ್ಲಾ ನೋರ್ತ್ ಇಂಡಿಯಾ! ಇಂಡಿಯಾ! ಇಂಡಿಯಾ| ಆದ್ರೇ
ಕೊನೆಗೂ ಸೆಟ್ಲ್ ಆದದ್ದೂ ಬೆಂಗ್ಳೂರೂ. ಅದೂ ದೇನಾ ಬ್ಯಾಂಕ್ ಕಾಲೊನಿಯಲ್ಲೀಯೇ”
ಹೋಯ್ ನನ್ ಪದ ಬರೆಯುವ ಚಳ್ಕಾ ಹಾಗೂ ಝಳ್ಕಾ ನಿಮ್ಗೆ ತೋರಿಸಿದ್ನಸ್ಟೇ.!
ಈಗ ನಿಜ ವಸ್ತೂಗ್ ಬರ್ವಾ. ಗದ್ದೀ ಕಾಯೋ ವಿಷ್ಯಕ್ಕೆ. ಕಾಣಿ ನಾವ್ ಸಣ್ಣಕ್ ಇರ್ವಾಗ, ಗದ್ದಿಯಲ್ಲಿ, ಅದೂ ಅಗಿಯಡಿ ಗದ್ದಿಯಲ್ಲಿ ಗಂಟೀ ಗಿಂಟೀ ಬರ್ಬಾರ್ದೆಂದ್ ,ತೆಂಗಿನ್ ಮರ್ದ್ ಮಡ್ಲ್ನಿಂದ ಮಾಡಿದ್ ಹಳ್ಳೀ ಮನಿಯಲ್ಲಿ ಮಧ್ಯಾಹ್ನ ಊಟ ಮಾಡಿದ್ಮೇಲೀ ಇರ್ತಿದ್ವಿ. ಅಲ್ಲಿ ಮಾಯನ್ ಕಾಯಿ ಹೋಳ್. ಅದೂ ಶ್ಯಟ್ಟಿ ಕುಟ್ಟಿ ತಾಳ್ಸಿದಂತಹ ಕಶೀ ಮಾವಿನಕಾಯಿ ಕತ್ತರಿಸಿ, ಮೆಣ್ಸಿನ್ ಕಾಯಿ ಮತ್ತು ಉಪ್ಪು ಹಾಕಿ ಮಾಡಿದಂತಹ ಕೊಚ್ಚೂಟಿ, ಚಕ್ಕುಲೀ, ಕೋಡ್ಬಳೇ ಎಲ್ಲಾ ತರ್ತಿತ್ ಮತ್ ತಿನ್ತಿತ್.! ಎಲ್ಲಾದ್ರೂ ದನ ಗಿನ ಬಂದ್ರೇ ಕೋಲ್ ಹಿಡ್ಕಂಡ್ ಹೊಳೀಗ್ ಹಾರ್ಸ್ತಿತ್. ಕೆಲವ್ ಬಾರಿ ಆ ದನಿನ್ ಬಾಲ್ ಹಿಡ್ಕಂಡ್ ಹೊಳೀಯೊಳ್ಗೆ ಅದ್ರ್ ಸಂಗ್ಡಾ ಈಜಕಂಡ್ ಆಚಿ ದಡಕ್ಕೂ ಹೋದದ್ದುಂಟೇ! ಇನ್ ಇಸ್ಪೀಟ್ ಆಟ ಆಡ್ತಿದ್ವೀ. ಅದ್ರಲ್ಲೂ ಕತ್ತೇ ಆಟಾ, ಎಳ್ಗತ್ತೆ ಆಟ, ದಾಡ್ ಫೀಡ್ ಆಟ ಹಾಗೆಯೇ ಮೂರೆಳೆ ಆಟ ಹೀಗೆ ತರ ತರದ್ ಆಟ ಆಡ್ತಿತ್. ಎಲ್ಲಾ ಜಾತೀ ಜನ್ಗಳೂ ಈ ಹಳ್ಳೀ ಮನೀಗ್ ಬರ್ತಿದ್ರ್. ಇದ್ಕ್ ಶೂದ್ರ್ ಮಕ್ಳೂ, ಬ್ರಾಂಬ್ರ್ ಮಕ್ಳಂತ್ ಭೇದ್ ಭಾವ್ ಇಲ್ಲ್ಯೇ. ಕೊನೇಗ್ ಸಾಯಂಕಾಲ ಆಯ್ತೆಂದ್ರೇ ಚಿಣ್ಣೀ ದಾಂಡ್ ಹಿಡ್ದ್ ಗುಂಪ್ ಮಾಡಿ ಆಟ್ ಆಡ್ತಿದ್ರ್. ಅದ್ರಲ್ಲೀ ಮತ್ ಗೋಲಿ ಆಟದಲ್ಲ್ ಮಾತ್ರ ನನ್ನನ್ ಸೋಲ್ಸಿಕ್ ಯಾವ್ ಮಗ್ನಿಂದ್ಲೂ ಸಾದ್ಯವಿಲ್ಯೇ. ಗೋಲಿ ಆಟದಲ್ಲಂತೂ ದೂರ್ದಿಂದ ಬೇರೆಯವರ್ ಗೋಲಿಗ್ ಹೊಡೆಯುವ ಆ ಝಾಪ್ ಇತ್ತಲ್ಲಾ ಅದ್ ಯಾರ ಹತ್ರೂ ಇರ್ಲಿಲ್ಲೆ. ಚಿಣ್ಣೀ ಕೋಲ್ ಆಟದಲ್ಲೂ ಹಾಂಗೆ. ಒಂದ್ಸಲಿ ಗುರಿ ಇಟ್ ಒಂದ್ ಕೋಳೀ ಕಾಲ್ ಮುರ್ದ್ದುದಕ್ ಆದ ಫಚೀತೀ ಬ್ಯಾಡ್ವೇ. ನಾನ್ ಮಾಸ್ಟ್ರ್ ಮಗ ಅಲ್ವಾ. ಅದಕ್ಕೇ ಶೂದ್ರ್ ಮಕ್ಳ್ ನಂಗ್ ಬಯ್ಲಿಲ್ಲೇ. ಆದ್ರೇ ಶ್ರೀಧರ್ನಿಗ್ ಮಾತ್ರ ನಮ್ ಅಪ್ಪನೆದ್ರ್ ಸಮಾ ಬಯ್ದ್ರ್. ಈಗ ಈ ವ್ಯಕ್ತಿ ಶ್ರೀಧರ ಸೋಮಯಾಜಿಯಾಗಿ, ಬಿಸ್ನೆಸ್ ಮಾಡ್ತಿದ್ದೂ ಒಬ್ಬ ಗಣ್ಯ ವ್ಯಕ್ತಿಯಾಗಿ ಸಮಾಜ ಸೇವೆಯನ್ನೂ ಮಾಡ್ತಾರೆಂದ್ರೆ ನಂಗೇ ಬಹಳ ಹೆಮ್ಮೆ ಅನ್ನಿಸುತ್ತೇ. ಇರ್ಲಿ ಈಗ ಮತ್ತೊಂದ್ ವಿಷ್ಯಕ್ಕ್ ಬರುವಾ. ಅದೂ ಗದ್ದೀ ಕಾಯೋದೇ. ಅದ್ ಹೇಂಗ್ ಅಂದ್ರೇ , ಈ ಗದ್ದೀ ಕಾಯೋದ್, ಭತ್ತ ಹಣ್ಣಾದಮೇಲೆ, ಕೊಯ್ತೇವಲ್ಲಾ. ಅದ್ ಒಂದಿವ್ಸಾ ಗದ್ದಿಯಲ್ ಹಾಂಗೇ ಇರ್ತಿತ್. ಮರುದಿನ ಅದನ್ನ ಮನೀ ಅಂಗಳಕ್ ಹೊತ್ಕಂಡ್ ಹೋಗಿ ಮಂಚಕ್ ಜಪ್ಪಿ ಭತ್ತ ಬೇರೆ , ಹುಲ್ ಬೇರೆ ಮಾಡ್ತಿದ್ರ್. ಈ ಒಂದ್ ರಾತ್ರಿ ಕಳ್ರಿಗೋಸ್ಕರ ಗದ್ದಿಯಲ್ ಲಾಟಾನ್ ದೀಪ, ಚಾಪೆ, , ಹೊದ್ಕಂಬಕ್ ಒಂದ್ ವಸ್ತ್ರಾ ಹಾಗೂ ಕೈಲ್ಲೊಂದ್ ಕೋಲ್ ಮತ್ ಇಸ್ಪೀಟ್ ಪ್ಯಾಕ್ ಹಿಡ್ಕೊಂಡ್ ಹೋಗ್ತಿತ್. ಆವಾಗ್ ಅಕ್ಕ ಪಕ್ಕ ಮನೀ ಜನ್ರೂ ಬರ್ತಿದ್ರ್. ನಮ್ಜೊತೆ ಆಟ ಆಡ್ಲಿಕ್ಕೆ ಮತ್ ರಾತ್ರಿ ೧೨ ಗಂಟೀಗ್ ಸಮಾ ಖಾರ ಹಾಕಿ ತೆಂಗಿನ ಎಣ್ಣೇ ಹಾಕಿ , ಈರುಳ್ಳೀ ಹಾಕಿ ಮಾಡುವ ಮುಂಡಕ್ಕೀ ಉಪ್ಕರಿ ತಿಂಬೂದಕ್ಕೂ ಬರ್ತಿದ್ರ್. ಒಟ್ತಾರೇ ಗಮ್ಮತ್ತೇ ಗಮ್ಮತ್. ಒಂದ್ಸರಿ ಏನಾಯ್ತೆಂದ್ರೇ ನಾನೂ, ರಾಘವೇಂದ್ರಣ್ಣಯ್ಯನೂ, ಮತ್ ನಮ್ ಅಪ್ಪ ಸದೀ ಮಾಸ್ಟ್ರೂ ಒಟ್ಟಿಗೆ ಅರಾಲ್ ಗದ್ದಿ ಕಾಯುದಕ್ ಹೋಯ್ತೇ. ಅದೂ ಗುಡ್ಡೀ ಮ್ಯಾಲೆ, ಸುಮಾರು ೩ ಕಿಲೋಮೀಟರ್ ದೂರ, ಬೊಬಾಯೀ ಕೊರಾತಿ ಮನೀ ಹತ್ರ ಇರ್ತಿತ್. ರಾತ್ರಿ ನಾವ್ ಒಂದು ಭೂತ್ ಬಂಗಲೆಯೊಳಗ್ ನಿದ್ರೆ ಮಾಡ್ತಿತ್. ಅಪ್ಪೈಯ್ಯ ಇದ್ರ ಅದ್ಕೇ ನಮ್ಗ್ ತೊಂದ್ರಿ ಇಲ್ಲ್ಯೆ. ಆದ್ರೆ ಒಂದ್ಸರಿ ರಾತ್ರಿ ೧ ಗಂಟೀಗ್ ಅಪ್ಪೈಯ್ಯ ಗದ್ದಿ ಬದಿ ತಿರ್ಗ್ಲಿಕ್ ಹೋದ್ರ್. ನಮ್ಗ್ ಗೊತ್ತಿಲ್ಲೇ. ನಮ್ಗ್ ಎಚ್ರ ಹ್ಯಾಂಗೋ ಆಯ್ತ್ ಕಾಣಿ! ಎದ್ದವ್ರೇ ಅಪ್ಪೈಯ್ಯ ಅಪ್ಪೈಯ್ಯಾ ಅಂದ್ರೇ ಅಪ್ಪೈಯ್ಯ ನಾ ಕಾಣೇ! ನಮ್ಗೆ ಕಚ್ಚಿಯಲ್ಲೇ ಉಚ್ಚಿ ಬರ್ಲಿಕ್ ಶುರುವಾಯ್ತೂ. ಕೊನೇಗ್ ನಾನ್ ಅಣ್ಣೈಯ್ನಿಗ್ ಹೇಳ್ದೇ ಹೋ ಬಹುಷ್ಯ, ಅಪ್ಪೈಯ್ಯ ಮನೀಗ್ ಹೋಗಿರ್ಬೇಕ್. ಮನೀಯಲ್ ಒಂದ್ ಎಮ್ಮೇ ಕರು ಹಾಕೋದಿತ್. ಅದ್ಕ್ ಹೆಚ್ಚ್ನಂಷ ಹೊಟ್ಟೀ ನೋವ್ ಬಂದಿರ್ಬೇಕ್. ಅದ್ಕೇ ನಾವ್ ಕೂಡಾ ಮನೀಗ್ ಹೋಗೋಣ ಅಂತ ಹೇಳಿ ಲಾಟಾನ್ ಹಿಡ್ಕಂಡ್ ಸೀದಾ ಮನೀಗ್ ಬಂತೇ! ಮನೀಗ್ ಬಂದ್ ಅಪ್ಪೈಯ್ಯ ಅಂತ ಕೂಗಿದ್ರ ಅಪ್ಪೈಯ್ಯ ಕಾಣೇ!. ಆವಾಗ್ ನಮ್ಗೆ ಹೆದ್ರಿಕೆ ಆಯ್ತೆನ್ನಿ. ಆದ್ರೆ ಅದ್ ನಿದ್ದೆ ಬರ್ಲಿಕ್ ಮೊದ್ಲ್ ಮಾತ್ರಾ!. ಆಮೇಲ್ ಎನಾಯ್ಯ್ತೋ ನಮ್ಗೇ ಗೊತ್ತಿಲ್ಯೇ. ನಿದ್ರೇ ಥಟ್ಟ್ನೇ ಬಂತ್. ೮ ಗಂಟೀಗ್ ಎದ್ದಾವಾಗ್ ಕೇಳ್ತೇವೆ ಅಪ್ಪೈಯ್ಯನ್ ಸ್ವರ!. ಈ ಹಡೀ ಮಕ್ಳ್ ನನ್ ಬಿಟ್ ಹಾಂಗೇ ಬರೂದಾ? ನನ್ ಒಂದ್ ಮಾತ್ ಕೇಳಿದ್ರಾ? ಅಂದದಕ್ಕೆ ನಾನ್ ಹೇಳಿದೆ, ಅಪ್ಪೈಯ್ಯ ಅಪ್ಪೈಯ್ಯಾ ಅಂತ ಕೂಗಿದ್ರೇ ನೀವ್ ಯಾಕ್ ಉತ್ರಾ ಕೊಡ್ಲಿಲ್ಲೇ?ಹೇಳಿ ಅಂದೇ. ಅದಕ್ಕ್ ಅಪ್ಪೈಯ್ಯಾ, ಅಲ್ಲಾ ಮಕ್ಳೇ ನಾನ್ ಬಯಲ್ ಹತ್ರ ಇದ್ದೇ. ನಾನ್ ಉತ್ರ ಕೊಟ್ರೇ ಆ ಕದೀಲಿಕ್ಕ ಬಂಡ್ ಕಳ್ನಿಗ್ ಗೊತ್ತಾಗೋದಿಲ್ವಾ ಅಂತ ಅಂದ್ರೂ. ಅದೂ ಸರೀ ಅಂತ ನಂಮ್ಗೂ ಅನ್ಸ್ತನ್ನಿ!. ಆದ್ರೇ ಏನ್ ಮಾಡ್ವಾ. ಆದದ್ ಆಯ್ತಪ್ಪಾ. ಇನ್ಮೇಲ್ ಹೀಂಗ್ ಮಾಡ್ಬೇಡಿ ಅಂದ್ರ್. ನಿಜಾಂಷ ಏನೆಂದ್ರೇ ಅಪ್ಪೈಯ್ಯನಿಗೂ ಹೆದ್ರಿಕೆ ಆಯ್ತೆನ್ನಿ!! ಅದ್ ಗುಟ್ಟ್. ಇಸ್ಟೇ ಮರಾಯ್ರೇ ನನ್ ಕತಿ. ಇಲ್ಲೀಗ್ ಮುಗ್ಸ್ತೇ ಆಯ್ತಾ? ಧನ್ಯವಾದ್!

ಬರೆದವ್ರೂ ಪಾರಂಪಳ್ಳೀ ಸುರೇಂದ್ರ ಉಪಾಧ್ಯ
೧೨-೦೪-೨೦೧೬
೧೨-೦೪-೨೦೧೬
No comments:
Post a Comment