Original post at: https://www.facebook.com/permalink.php?story_fbid=1764642477091088&id=1705466946341975
ನಾವೆಲ್ಲಾ ಬೆಳಿಗ್ಗೆ, ಬೆಳಿಗ್ಗೆ ೫ ಗಂಟೆಗೇ ಚನ್ನಮ್ಮನ ಕೆರೆ ಅಚ್ಚುಕಟ್ಟು ಪಾರ್ಕಿನಲ್ಲಿ, ಒಂದು ಗಂಟೆ ಜಿಮ್ ಮತ್ತು ವಾಕ್ ಮಾಡಲು, ನಾವೊಂದು ೬ ಜನಾ ರಿಟಾಯರ್ಸೀಗಳು ಅಲ್ಲಿ ದಿನಾಲೂ ಸೇರ್ತೇವೆ. ಅಲ್ಲೇ ಹಾಕಿದಂತಹ ಬೆಂಚ್ ಮೇಲೆ ಒಂದ್ ಗಂಟೇ ವಾಕ್ ಮತ್ತು ಜಿಮ್ ಆದ್ಮೇಲೆ, ನಾವ್ಗಳು ಕುಳಿತ್ಕೊಳ್ತಿದ್ವೀ. ಹಾಂಗೆ ಕುಳಿತ್ಕೊಂಡವರಿಗೇ, ನಮ್ಮ ಕಿವಿಗಳೆಲ್ಲಾ ಪಕ್ಕದ್ ಬೆಂಚಿನ ಮೇಲೆ ಕುಳಿತಿದ್ದ ಇಬ್ಬರು ಹೆಂಗಸರು ಮಾತನಾಡುವುದರ ಕಡೆ ಹೋಯ್ತ್ ಕಾಣಿ!.
ಒಬ್ಬಳು ಹೇಳ್ತಿದ್ಲೂ:- “ ಅಲ್ಲಾ ನಮ್ಮ ಎದಿರುಗಡೆ ಮನೆಯವರ ಮಗನಿಗೆ ಮೊನ್ನೆ ಮೊನ್ನೆ ಮದುವೆ ಆಯ್ತು ಮಹಾರಾಯ್ತೀಯಾ. ಆ ಹೆಣ್ ಎಂತಾ ಘಾಟಿ ಗೊತ್ತಾ? ಬಂದ ಹತ್ತೇ ದಿವ್ಸಕ್ಕೆ ಆ ಕಂಜೂಸ್ ಬಡ್ಡೀ ಮಗನನ್ನ ಗರ್ಕ್ ಅಂತ ತನ್ ಕಡೆಗೆ ತಿರ್ಸ್ಕೊಂತೇ!. ಛಳಿ ಅಂತಿಲ್ಲಾ, ಬೇಸಿಗೆ ಅಂತಿಲ್ಲಾ, ಅವ್ರು ಮನೆಯಲ್ಲಿರುವವರ್ಗೇ ಏಸೀ ನಡಿತಾನೇ ಇರುತ್ತೇ!. ಅದೂ ಬೆಳಿಗ್ಗೆ ೧೦ ಗಂಟೀ ವರ್ಗೂ. ಅಂದ್ರೆ, ಅದ್ ಏಳುವುದೇ ೧೦ ಗಂಟೀ ಅಂತ್ ಆಯ್ತು. ಅಲ್ಲಾ ಹಾಂಗ್ ಎದ್ರೇ, ಕಾಫ಼ಿ ಮಾಡ್ವೋರ್ ಯಾರ್? ತೀಡೀ ಮಾಡೋರ್ ಯಾರ್? ನಂಗಂತೂ ಅರ್ಥ್ವೇ ಆಗ್ತಾ ಇಲ್ಲ ಮಹಾರಾಯ್ತೀಯಾ. ಹಾಂಗಾರೆ ಆ ಹೆಣ್ಣಿಗ್ ಚಳಿ ಗಿಳಿ ಆತ್ತಿಲ್ಲ್ಯಾ ? ಭಾಪ್ರೇ ಬಾಪ್. ಅವ್ರ್ ಕಡೆಯವರ್ ಒಂದ್ ೫ ಜನಾ ಗಂಡ್ಸ್ರ್ ಮತ್ತ್ ಇಬ್ರ್ ಹೆಂಗ್ಸ್ರೂ ಮೊನ್ನೆ ಬಂದ್, ಇಡೀ ಮನೀ ನೋಡ್ತಿದ್ರು!. ನೋಡಿದ್ ಮೇಲೆ, ಈ ನಮ್ಮ ಮನಿಗ್ ವಾಸ್ತು ದೋಷ ಉಂಟು. ಅಡ್ಗೇ ಮನೆ ಆಗ್ನೇಯದಲ್ಲಿರ್ಕ್, ಅದ್ ಕುಬೇರ್ನ್ ಮೂಲೆಯಲ್ಲಿದೆ ಕಾಣಿ. ದಕ್ಷಿಣ ಏರ್ ಇದ್ದ್, ಉತ್ತ್ರಾ ತಗ್ಗಿರ್ಕ್, ಅದ್ ನಿಮ್ಮನಿಯಲ್ಲಿಲ್ಲಾ ಅಂತ ಒಂದೆರಡು-ಮೂರ್ ಪೋಯಿಂಟ್ಸ್ ಹೇಳ್ತಾ ಹೋದ್ರ್ ಕಾಣಿ. ನಾವ್ ನಮ್ಮನೀ ಬಾಲ್ಕನಿಯಲ್ಲಿ ಕುಳಿತಿರೋದ್ರಿಂದಾ, ಇದೆಲ್ಲಾ ನಮ್ಗೂ ಕೇಳ್ಸ್ತಿತ್. ಈ ಮನಿಯಲ್ಲಿ ನಮ್ಮ ಹೆಣ್ಣ್ ಇರ್ಲಿಕ್ ಬಹಳ ಕಸ್ಟ ಆಗುತ್ತೇ! ಅವ್ಳಿಗ್ ಶಾಂತಿ ಇರ್ಲಿಕ್ ಇಲ್ಲಾ ಅಂತ ಆ ಹೆಣ್ಣಿನ್ ಮನೀಯವ್ರ್ ಹೇಳುದಾ ಮಹಾರಾಯ್ತಿಯಾ? ಅಬ್ಬಾ ಅವ್ರ್ ಧೈರ್ಯಾ ಕಾಣಿ!. ಹೆಚ್ಚಿನಂಶ್ ಅವ್ರ್ ಕೋಟ್ಯಾಧೀಶ್ರ್ ಇರ್ಬೇಕಂತ್ ನಗನ್ಸಿತ್. ಅದ್ಕೇ ಏನ್ ಮಾಡ್ವಾ ಅಂದ್ರೆ, ನೀವ್ ಅರ್ಧ, ನಾವ್ ಅರ್ಧಾ ಹಣಾ ಹಾಕ್ವಾ. ಈ ಮನಿಯನ್ ಅಳ್ದ್, ಬೇರೆ ಕಟ್ಟಿಸ್ವಾ, ಅಂತ ಹೇಳಿದ್ರ್. ಇದಕ್ಕೇನಂತ್ರೀ? ಅಂತ ಕೇಳುವುದೇ? ಅದ್ಕ್, ನನ್ನ ಮಿತ್ರೆ ಸಂಧ್ಯಾ ಹೇಳಿದ್ಲ್, ನಮ್ಮ ಮನೇಲೀ ಅಡ್ಗೇ ಮನೇಗ್ ಮಾತ್ರ ವಾಸ್ತು ಇಲ್ಲ. ಆದ್ರೆ ನಾವ್ ಇದ್ರಲ್ಲೇ ದೊಡ್ಡದ್ ಆಯ್ತುಕಾಣಿ! ಹಾಂಗೂ ನಿಮ್ಮಸ್ಟ್ ದೊಡ್ಡವ್ರ್ ಅಲ್ದೇ ಇದ್ರೂ , ಸಮಾಜಕ್ಕೊಂದ್ ದೊಡ್ಡವ್ರೂ ಆಯ್ತೆನ್ನುದಾ ಆ ಹೆಂಗ್ಸೂ!. ನಿಮ್ಮ ಹೆಣ್ಣಿಗ್ ಬೇಕಾದ್ರೇ ಬೇರೆ ಮನೆ ಕಟ್ಟಿ ಕೊಡೀನೇ , ಅದ್ ಈ ಮನಿಯಲ್ಲಿರ್ಬೇಕಾದ್ ಅಗತ್ಯವಿಲ್ಲಾ ಅನ್ನುವುದಾ ಆ ಹೆಂಗ್ಸ್!? ಅಬ್ಬ ಅವ್ಳ ಧೈರ್ಯವೇ!. ಈ ನನ್ನ ಮಿತ್ರೆ ಇದ್ದಾಳಲ್ಲಾ, ಸಂಧ್ಯಾರಾಣಿ, ಅವ್ಳ್ ಮಗ ಮದ್ವೇಗಿಂತಾ ಮುಂಚೇ , ಅಪ್ಪಾ ಪೇಪರ್ ಮಾರಿದ್ ದುಡ್ಡನ್ನ ಇವ್ನ್ ಜೇಬಿಗ್ ಹಾಕೊಂತಿದ್ದ್ನೇ! ಆತ ಒಂದು ಚಾಯ್ ಗೀಯ್ ಕುಡೀತ್ತಿರ್ಲಿಲ್ಲೇ. ಕೆಲ್ಸುಕ್ಕೂ ಹಾಗೆಯೇ, ಗಾಡಿ ಇದ್ರೂ, ಪೆಟ್ರೋಲ್ ಖರ್ಚಾತ್ ಅಂತಾ, ಬಸ್ನಲ್ಲೇ ಮಾನ್ಯತಾ ಟೆಕ್ಪಾರ್ಕಿಗ್ ಹೋಗ್ತಿದ್ನೇ! ಒಂದ್ ಹೋಟ್ಲೀಗ್ ಹೋಗ್ತಿರ್ಲಿಲ್ಲ್ಯೇ. ಅದೇ ಈಗ ಕಾಣ್ಕ್, ಹೆಂಡ್ತೀನ್ ಕರ್ಕೊಂಡ್, ಕೂರ್ಸ್ಕಂಡ್ ಹೋಪುದ್ ಸ್ಟೈಲ್ ಏನ್, ಕಣ್ಣಿಗೊಂದ್ ಕೂಲಿಂಗ್ ಗ್ಲಾಸ್ ಹಾಕಿ, ಮಿಲಿಟರೀ ಶೂ ಧರ್ಸ್ಕೊಂಡ್, ತಲೀಗೊಂದ್ ಹೆಲ್ಮೆಟ್ ಹಾಕ್ಕೊಂಡ್, ಕಿವಿಗೊಂದ್ ಫೋನ್ ಸುರ್ಕೊಂಡ್ ಸರ್ರ್ ಅಂತ ಮೋಟೋರ್ ಬೈಕ್ನಲ್ಲಿ ಹೋಪೂ ಝಾಪ್ ಏನ್? , ಅಬ್ಬೀಗಂತೂ ಜೋರ್ ಮಾಡೂಕ್ ಶುರು ಮಾಡಿದ್ನೇ. ಮನೀಗ್ ಲೇಟ್ ಬರೂದ್ ಏನ್! ಒಳ್ಳೇ ಡ್ರೆಸ್ ಮಾಡೂದ್ ಏನ್? ಅಬ್ಬಾ ! ಕಾಣ್ಕ್ ಅವ್ನ ಸ್ಟೈಲೇ, ಸ್ಟೈಲ್!. ಇದೆಲ್ಲಾ ಈ ಉಪಾಯ್ದ್ರೇ ಮಾಡಿರುವುದೆನ್ನಿ(ಇದನ್ನೆಲ್ಲಾ ಅಲ್ಲೇ ಪಕ್ಕದ್ ಬೆಂಚ್ಮೇಲೆ ನಾವೆಲ್ಲ್ ಕೇಳ್ತಿದ್ದೇವೆ ಎಂಬ ಪ್ರಿಜ್ನಾನವೂ ಅವ್ರಿಗಿಲ್ಲಾ, ಹೋಗ್ಲೀ). ಹುಡ್ಗೀ ಕುಂಡ್ಲೀ ಮತ್ ಹುಡ್ಗನ್ ಕುಂಡ್ಲೀ ಜೊತೀ ಮೇಚ್ ಮಾಡಿ ಕೋಟ್ಟವ್ರೇ ಈ ನಮ್ಮ ಉಪಾಯ್ದ್ರು. ಅದೇನೋ ೩೬ ಕ್ ೨೩ ಪೋಯಿಂಟ್ಸ್ ಬರುತ್ ಅಂಬ್ರ್! ಆದ್ರೆ ಅವ್ರ್ ಮಾತ್ರಾ, ಜಾತ್ಕ ಹೇಳ್ಸ್ಕಂಡದ್ದೆಕ್ಕೆ, ಇವ್ರಿಗ್ ಹೊದೂಕ್ ಒಂದ್ ಕಂಬ್ಳಿ ಕೊಟ್ರ್ ಅಂತ್ ಮಾಡಿ. ಈ ಬ್ಯಾಸ್ಗಿಯಲ್ ಅದ್ ಕೆಲ್ಸ್ಕ್ ಬರ್ತದಾ? ಇರ್ಲಿ ಬಿಡಿ. ಈಗ ಮೊನ್ನೆ ಮೊನ್ನೇ ಆ ಹೆಣ್ಣಿನ್ ಕಡೆಯವ್ರು, ಹೇಳ್ತಿದ್ರ್:- ಅವ್ರ್ ರಾಜಾಜೀ ನಗ್ರದೊಳ್ಗೇ, ಒಂದ್ ಆ ಹೆಣ್ಣೀನ್ ಹೆಸ್ರಿನ ಮನಿ ಇವ್ನಿಗ್ ಕೊಡ್ತಾರಂತೇ ಅಂತ ಹೇಳಿ ತನ್ನ ಕಥಿಯನ್ನ್ ಅಲ್ಲೇ ನಿಲ್ಸಿದ್ಲೂ ಅನ್ನಿ.
ಸರಿ ಮೊತ್ತೊಬ್ಬಳ್ ಕತೀ ಶುರುವಾಯ್ತ್ ಕಾಣಿ!. ಅವ್ಳ್ ಇದ್ದವ್ಳ್ ಹೇಳಿದ್ಲೂ, ಅಯ್ಯೋ, ನನ್ನ ಸಂಬಂಧಿಕ್ರ್ ಕತೀ ನೀನ್ ಏನ್ ಕೇಳ್ತಿಯೋ? ಆ ಹೆಣ್ ಎಂಬೀಬಿಸ್ ಡಿಗ್ರೀ ಮಾಡ್ಕೊಂಡಿತ್. ಅವ್ಳಿಗ್ ಏನ್ ರೋಗ್ ಬಡೀತೋ ಎನೋ ಗೊತ್ತಿಲ್ಲೆ, ರಿಕ್ಷಾ ಡ್ರೈವರ್ ಜೊತೆ ಓಡೀ ಹೋದ್ಲಂತೇ ಮ್ಹಾರಾಯ್ತೀಯಾ!, ಅದೇನೋ ನಮ್ಜಾತಿ ಅಲ್ವಂತೇ,ಅಡ್ಡ್ ಜಾತೀಯಂತೇ! ಆ ಜಾತಿಯವ್ರ್ ಜೊತೆಯಲ್ಲಿ ಅವ್ಳ್ ಓಡಿಹೋಗಿ ಅಲ್ಲೆಲ್ಲೋ ಮದುವೆ ಕೂಡಾ ಮಾಡ್ಕಂಡ್ಲಂತೇ!. ಇದಾಗಿ ೫ ವರ್ಷ ಆಯ್ತ್ ಕಾಣಿ. ನಮ್ಮನಿಯವ್ರ್ ಹತ್ರ ಅವ್ಳ್ ೩ ವರ್ಷದ್ ಮಗಳ್ ಜಾತ್ಕಾ ಬಂತ್ ಕಾಣಿ. ನಮ್ಮನಿಯವ್ರಿಗೇನ್ ಗೊತ್? ಇವ್ರ್ ಇದ್ದದ್ ಇದ್ದ್ ಹಾಂಗೇ ಎಲ್ಲಾ ಹೇಳಿದ್ರ್. ಅವ್ಳಿಗ್ “ನಿಂಗೇ ಪಿತೃ ಶ್ರಾಪ ಉಂಟೆಂದ್ ಹೇಳಿ, ಗಯಾಕ್ ಹೋಗಿ, ವಿಷ್ಣು ಪಾದದ್ ಮೇಲೆ ಪಿಂಡ ಇಟ್ ಬರ್ಲಿಕ್ ಹೇಳಿದ್ರ್. ಆದ್ರೆ ಒಂದ್ ಮಾತ್, ನಿನ್ ಗಂಡಾ ಎಲ್ಲಿಯಾದ್ರೂ ಬೇರಿ ಜಾತಿ ಗೀತಿ ಆಗಿದ್ರೇ, ನಂಗ್ ಗೊತ್ತಿಲ್ಲಾ!. ಅದ್ನ ಹೇಂಗ್ ಮಾಡ್ತೀಯೋ ನೀನ್ ಕಾಣ್. ಅದ್ಕೇ ಅವ್ಳ್ ಬಿಕ್ಕಿ ಬಿಕ್ಕಿ ಹೇಳಿದ್ಲ್ ಅಂತೇ. ಅಯ್ಯೋ ನಾನು ಮತ್ ಅವ್ರೂ ಬೇರಿ ಆಗಿ ೨ ವರ್ಷಾ ಆಯ್ತೂ ಅಂತಾ. ಈಗ್ ನಂಗೆರಡು ಹೆಣ್ಮಕ್ಳೂ ಇದ್ರ್. ನಾನ್ ಏನ್ ಮಾಡ್ಬೇಕೋ ಅಂತ ನಂಗೊತ್ತಿಲ್ಲೇ ಅಂತ ಹೇಳ್ತಿದ್ಲೂ ಅಂತ ನಮ್ಮ್ ಯಜ್ಮಾನ್ರೂ ನಂಗ್ ಹೇಳಿದ್ರು. ಆಮೇಲ್ ಏನ್ ಆಯ್ತೆಂತ ನನ್ ಕೇಳ್ಬೇಡಿ. ಈ ಮಕ್ಳಿಗ್ ಅದೇನೋ ಗಾದಿ ಮಾತ್ ಹೇಳ್ತಾರಲ್ಲ, ಗಂಡ್ಸೀಗ್ ಮೀಸಿ ಬಪ್ ಹೊತ್ತಿಗ್, ಹೆಂಗ್ಸೀಗ್ ಮುಟ್ ಆಗಿ ೧೮ ವರ್ಷಾ ಹಿಡಿಯೋಕ್ ಹೊತ್ತೀಗೆ, ದೇಶ ಕಾಣ್ಸೋದಿಲ್ವಂತೇ. ಹಾಂಗೇ ಆಯ್ತ್ ಕಾಣಿ ಅಂತಾ ತನ್ ಮಾತನ್ನ ಅಲ್ಲೇ ನಿಲ್ಸಿದ್ಲ್. ಹೋಯ್ ಅಲ್ಲೀಗ್ ಆವತ್ತಿನ ನಮ್ಮ್ ಬೆಳಿಗ್ಗಿನ ವಾಕಿಂಗ್ ಸಮ್ಯಾ ಮುಗೀತ್ ಕಾಣಿ. ನಾವ್ ಎಸ್ ಎಲ್ ವೀ ಕಡೇ ಇಡ್ಲಿ ವಡಾ ತಿನ್ಲಿಕ್ ಹೊರ್ಟ್ವೀ!. ಆದ್ರೇ ಅಲ್ ನನ್ ಸ್ನೇಹಿತಾ ಕಾಶಿ ಸಿಕ್ದಾ ಕಾಣಿ. ನಾನ್ ಎಣ್ಸ್ಕೊಂಡೇ, ಹೋ ಇವತ್ ಇವ್ನ್ ಬೇರೆ ರೀಲ್ ಬಿಡ್ಲಿಕ್ ಶುರು ಮಾಡ್ತಾನೆ. ಇನ್ ನಾವ್ಗಳು ಮನೀಗ್ ಹೋಪೊತ್ಥಿಗ್ ಮಧ್ಯಾಹ್ನ೧ ಗಂಟೀ ಗ್ಯಾರಂಟೀ ಅಂತ ಎಣಿಸಿ ಅವ್ನಿಗೂ ಸೇರಿ ಇಡ್ಲಿ ವಡಾ ಆರ್ಡರ್ ಮಾಡಿದೆ ಅನ್ನಿ.
ತಿಂಡೀ ನಾವೆಲ್ಲಾ ತಿಂದ್ ಆದ್ ಮೇಲೆ ಬೈ ಟೂ ಕಾಫಿ ಆರ್ಡರ್ ಮಾಡಿ ಅದನ್ನೂ ಪೂರ್ಣಗೊಳಿಸಿ, ಅಲ್ಲೇ ಇದ್ದಂತಹ ಬೀ.ಡೀ. ಯೇ ಪಾರ್ಕಿನತ್ತ ಕಾಲನ್ನ ಹಾಕಿತು. ಅಲ್ಲೊಂದು ಮರದ್ ಅಡಿ, ತಂದಂತಹ ಬಟ್ಟೇ ಹಾಸಿ, ಅದ್ರ್ ಮೇಲೆ ಇಸ್ಪೀಟ್ ಪ್ಯಾಕನ್ನ ಬಿಚ್ಚಿ ಎಲೆಯನ್ನ ಮೇಲೆ ಕೆಳ್ಗೆ ಕಲಿಸ್ಲಿಕ್ ಶುರು ಮಾಡ್ತ್ ಕಾಣಿ. ಅಸ್ಟ್ರಲ್ಲಿ ನಮ್ಮ ಕಾಶಿಯ ಕಥೆ ಶುರುವಾಯ್ತು ಕಾಣಿ. ಹ್ವಾ ಸುರೇಂದ್ರ ನಿಂಗ್ ಈ ವಿಷ್ಯ ಗೊತ್ತಾನಾ? ಅಂದ ಕಾಶಿ.
ಅದಕ್ ನಾ ಹೇಳ್ದೇ, ಅಲ್ಲ್ವಾ ಮಹಾರಾಯಾ ನೀ ಹೇಳ್ದ್ರೇ ತಾನೇ ನಂಗ್ ಗೊತ್ತಾಗೋದೂ ಅಂತಾ?
ಅಲ್ವೋ ಆ ಏಕ್ಸಿಸ್ ಬ್ಯಾಂಕಿನ್ ಚೇರ್ಮೇನ್ ಕಾರಂತ್ರ್ ಮಗ್ಳ್ದ್ ನಾಳೆ ಮದುವೆ ಅಂದ್ರೇ ಇವತ್ ಮುರ್ದ್ ಬಿತ್ತಂತ್ ಕಾಣ್ ಮಾರಾಯಾ! ಅದೂ ನಮ್ ಗುರೂ ನರ್ಸಿಂಹನ್ ಕಲ್ಯಾಣ್ ಮಂಟ್ಪ್ದೊಳ್ಗೇನೇ. ಬೀಗರ್ ಎದ್ರೇ ಈ ಹೇಸಿಗೇ ಕೆಲ್ಸಾ ನಡ್ದ್ ಹೋಯ್ತ್ ಕಾಣ್!. ಹಾಂಗಾರ್ ಅಸ್ಟ್ ದೊಡ್ಡ್ ಪೋಸ್ಟ್ನಲ್ ಇದ್ದ್ ಆ ಪ್ರಾಣೀಗ್ ಅಸ್ಟು ಗೊತ್ತಾಗೋದಿಲ್ವಾ ಮಾರಾಯ? ಅಂದ.
ನಾನ್ ಏನ್ ಹೇಳ್ತೀಯೋ, ಆ ಹೆಣ್ಣನ್ ಕೊಡೋದ್ ನಮ್ಮ್ ಸಂಬಂಧದಲ್ಲೇ ಮಹಾರಾಯ!. ಏನಾಯ್ತೋ? ಬೇಗ್ ಬೊಗ್ಳೋ ಅಂದೇ ಕ್ಯೂರಿಯಾಸಿಟಿ ತಡ್ಲಿಕ್ ಆಗ್ದೇ.
ಕಾಶೀ ಹೇಳ್ದ, ಅಲ್ಲೋ ಮಹಾರಾಯ ಆ ಹೆಣ್ಣ್ ಇಸ್ಟ್ ದಿವ್ಸಾ ಏನ್ ಮಾಡ್ತಿತ್ತೋ?. ಅದ್ಕ್ ಕಲೀಯೊಪ್ಪತ್ಥಿಗೇ ಲವ್ ಇತ್ತಂಬ್ರ್ ಮಹಾರಾಯಾ? ಅಂದಾ. ನಾನ್ ಅವ್ನ್ ಮಾತ್ ಕೇಳಿದ್ನೋ ಇಲ್ವೋ , ಸೀದ್ ಸ್ಕೋಟರ್ ತೆಕ್ಕೊಂಡ್ ಗುರು ನರ್ಸಿಂಹನ್ ಛತ್ರಕ್ ಹೋದೇ ಕಾಣಿ. ಅಲ್ಲ್ ಎಲ್ಲಾ ಜನ್ರ್ ಎಲ್ಲಾ ಸೇರ್ಕೊಂಡಿದ್ರ್. ಹ್ಯಾಂಗಿದ್ರೂ ಆವತ್ತಿನ್ ರಾತ್ರಿ ಒಂದು ಗೆಟ್ ಟುಗೆದರ್ ನಮ್ಮ ಕಾರಂತ್ರ್ ಕಡೆಯಿಂದ್ ಇತ್ ಅನ್ಮಾಡಿ!. ನಾನ್ ಸೀದಾ ಹೆಣ್ಣೀನ್ ಕೋಣಿಯೊಳ್ಗೇ ಹೋದೆ. ಅಲ್ಲಿ ಕಾರಂತ್ರೂ, ಕಾರಂತ್ರ್ ಹೆಂಡ್ತಿಯೂ, ಅವ್ರ್ ಸ್ವಲ್ಪ ಆತ್ಮೀಯ ನೆಂಟ್ರೂ ಎಲ್ಲಾ ಮುತ್ಗೆ ಹಾಕ್ಕೊಂಡಿದ್ರು. ನಾನ್ ಅವ್ರನೆಲ್ಲಾ ತಳ್ಕೊಂಡ್ ಸೀದಾ ಒಳ್ಗೇನೇ ನುಗ್ಗಿದೇ. ನನ್ ನೋಡಿ ಕಾರಂತ್ರ್ ಅಯ್ಯೋ ಮಹಾರಾಯ್ರೇ ನನ್ ಮಗ್ಳ್ ಹೀಂಗ್ ಮಾಡಿದ್ಲೂ ಅಂತ ಗೋಳ್ ಅಂತ್ ಕೂಗಿದ್ರು. ಆದ್ರೆ ಅವ್ರ್ ಅತ್ತದ್ದು ಕಣ್ ಒರ್ಸೋ ವಿದ್ಯೇ ಅಂತ್ ಆಮೇಲ್ ಗೊತ್ತಾಯ್ತ್ ಬಿಡಿ.
ನಾ ಕೇಳ್ದೇ ಯಾಕ್ ಕಾರಂತ್ರೇ ಹೀಂಗ್ ಮಾಡಿದ್ರೀ/ ಬರೀ ಹೇಸ್ಗೆ ಆಯ್ತಲ್ಲೇ ಅಂದೆ.
ಅದಕ್ಕ್ ಅವ್ರೂ ತಮ್ ಧ್ವನಿ ಸೇರ್ಸೀ ಹೌದ್ ಮಹಾರಾಯ್ರೇ, ಈ ರೀತಿ ಮಾಡ್ತಾಳೆಂದ್ ನಂಗೂ ಗೊತ್ತಿರ್ಲಿಲ್ಲೇ ಅಂದ್ರ್.
ಯಾವ್ದುಕ್ಕೂ ಸುಮ್ನಿರಿಯೇ. ಆದ್ ಆಗಿ ಹೋಯ್ತ್ ಅಂದೇ.
ಅಯ್ಯೋ, ನನ್ ೬೦೦೦೦.೦೦ ರೂಪಾಯಿ ಛತ್ರಕ್ ಕಟ್ಟಿರೋದ್ ವೇಸ್ಟ್ ಆಯ್ತಲ್ಲೇ ಮಹಾರಾಯ್ರೇ. ಯಂತಾ ಮಾಡೋದೂ ಅಂತ ಗೊಳ್ಳೆಂದ್ ಅತ್ರ್ ನೋಡಿ. ಅದನ್ ನೋಡಿ, ನಾನ್ ಹೋಯ್ ಅದನ್ನ್ ನಿಮ್ಗೆ ಆ ಹಂದೇರ್ ಹತ್ರ ಮಾತಾಡಿ ನಿಮ್ಗ್ ವಾಪಾಸ್ ಬರ್ವ್ ಹಾಂಗ್ ಮಾಡ್ಸ್ತನೇ. ಈಗ ನೀವ್ ಸುಮ್ಕಿರಿ ಅಂದೆ . ಅವ್ರೂ ಸುಮ್ಕಿದ್ರ್. ಸರಿ ಎಲ್ಲ್ರನ್ನ ಕಳ್ಸಿ ನಾನ್ ಕೂಡಾ ಮನಿಯಒಳ್ಗೆ ಕಾಲಿಟ್ ಹೆಂಡ್ತೀಗ್ ಎಲ್ಲಾ ವಿವರ್ಸಿದೆ. ಅದಕ್ ನನ್ ಹೆಂಡ್ತೀ ಹೇಳಿದ್ಲ್, ಅಯ್ಯೋ ಆ ಬೇವರ್ಸೀಗ್ ಕಾಲೇಜ್ನಲ್ಲೇ ಯಾವ್ದೋ ಹುಡ್ಗನ್ ಜೊತೇ ಲವ್ ಉಂಟಂತೇ ಮಹಾರಾಯ್ರೇ. ಅದ್ಯಾಕ್ ನಾಳೆ ಮದ್ವೇ ಅಂದ್ರೇ ಇವತ್ ಬ್ಯಾಡಾ ಅಂತ್ ಹೇಳಿದ್ಲೋ ಗೊತ್ತಿಲ್ಯೇ. ಒಟ್ಟಾರೆ ಬರೀ ಹೇಸಿಕೆ ಆಯ್ತಸ್ಟೇ. ಬಿಡಿ ಬಿಡಿ. ಆ ಯಪ್ಪ್ನ. ಮೊದ್ಲಿನ್ ಹೆಂಡ್ತೀ ಆ ಹೇರ್ಳೆಯವರ್ ಮಗ್ಳಂತೇ. ಅವ್ಳ್ ಸತ್ ಹೋದ್ ಮೇಲೆ, ಅದ್ಯಾವ್ದೋ ಮೇಡ್ರಾಸ್ನಲ್ಲಿ ಒಂದ್ ಮುಂಡಿಯನ್ನ ಕಟ್ಕೊಂಡ್ರಂತೇ. ಅವ್ಳನ್ಕಟ್ಕಂಡ್ ಮೇಲಿಯೇ ,ಈ ನಿಮ್ ಕಾರಂತ್ರೂ ದೊಡ್ಡ್ ಪೋಸ್ಟೀಗ್ ಹೋದ್ರಂತೇ ಕಾಣಿ! “ಯಥಾ ರಾಜಾ ತಥಾ ಪ್ರಜಾ” ಅಂತ ನನ್ ಹೆಂಡ್ತೀ ತನ್ಗ್ ಗೊತ್ತಿರುವ ಒಂದು ಗಾದೀ ಮಾತನ್ ಕೂಡಾ ಹೇಳಿದ್ಲ್ ಅನ್ನಿ!. ಈಗ ಮದ್ವೇ ಬ್ಯಾಡಾ ಅಂತ್ ಹೇಳ್ತಲ್ಲಾ!. ಆ ವಡು ಹುಡ್ಗೀ, ಮೊದ್ಲಿನ್ ಹೆಂಡ್ತೀ ಮಗ್ಳಂತೇ ಅಂತೆ ಕಾಣಿ. ಹೀಗಂತ್ ಹೇಳಿದ್ದ್ ನಂಗ್ ಆ ಭಟ್ಟನ್ ಹೆಂಡ್ತಿಯೇ. ಅಧೇಂಗ್ ಭಟ್ಟನ್ ಹೆಂಡ್ತೀಗ್ ಈ ಸಮಾಚಾರವೆಲ್ಲಾ ಗೊತ್ತಿತೋ, ನಂಗೊತ್ತಿಲ್ಲೇ? ಬೇರೆ ವಿಷ್ಯಾ ನನ್ನನ್ ಕೇಳ್ಬೇಡಿ. ನಾನ್ ತಿಳ್ಕೊಂಡೇ, ಕಾಂಬುಕ್ ಮಿಣ್ಣಕ್ ಇದ್ಲ್ ನನ್ ಹೆಂಡ್ತೀ. ಆದ್ರೇ ಅವ್ಳಿಗ್ ಗೊತ್ತಿರೋ ವಿಷ್ಯಾ ನಂಗ್ ಗೊತ್ತಿಲ್ಲ್ಯೇ. ನನ್ಕಿಂತ್ ಹೆಚ್ಚಿಗ್ ಎಲ್ಲಾ ಗೊತ್ತಿತ್! ಅಂತ ಮನ್ದೊಳ್ಗೇ ಅವ್ಳನ್ನ್ ಹೊಗ್ಳಿಕೊಂಡೇ ಅನ್ನೀ. ಸರೀ ಬೆಳ್ಗಾಯ್ತು. ಮತ್ ನಮ್ಮ್ ವಾಕಿಂಗ್ ಚೆನ್ನಮ್ಮನ್ ಕೆರೇ ಪಾರ್ಕಿನತ್ತ ಮರುದಿವ್ಸಾ ಬೆಳಿಗ್ ೫ ಗಂಟೀಗ್ ಶುರುವಾಯ್ತ್ ಕಾಣಿ!. ೧ ಗಂಟೀ ಆದ್ ಮೇಲೆ ಯಥಾ ಪ್ರಕಾರ ಆ ಕಲ್ಬೇಂಚ್ ಮೇಲೆ ಕುಳಿತ್ ನಮ್ಮ ತಲೆ ಹರ್ಟೇ ಮಾತ್ಕತೇ ಶುರುವಾಯ್ತೆನ್ನಿ!. ಇವತ್ತೇನಪ್ಪಾ ಅಂತಾ ಇರ್ವಾವಾಗಾ, ಆ ನಮ್ ಪ್ರಸಾದ್ ಒಂದ್ ಬೋಂಬ್ ಇಟ್ಟಾ ಕಾಣೀ ಮಹಾರಾಯ್ರೇ! ಅದೆಂತ ಅಂತ ಕೇಳ್ತ್ರೀ? ಈಗ ಹೇಳ್ತೀನಿ ನೋಡಿ.
ಏ ಉಪಾಧ್ಯಾ, ಆ ಶ್ರೀಧರ್ ರಾವ್ ಇದ್ನಾಲ್ಲಾ, ಅವ್ನ್ ಅಣ್ಣನ್ ಮಗಾ ಹೆಚ್.ಡಿ.ಎಫ಼.ಸೀ ಬ್ಯಾಂಕ್ನಲ್ಲಿ ವೈಸ್ ಪ್ರಸಿಡೆಂಟ್ ಕಾಣೋ. ಅವ್ನಿಗೊಂದ್ ಹೆಣ್ ಗೊತ್ತಾಯ್ತ್. ಸರೀ ಮೊನ್ನೆ ಆಗಸ್ಟ್ ೧೫ ಕ್ ಮದ್ವೇ ಮಾಡಿದ್ರಂತೇ. ಬ್ಯಾಡಾ ಫಜೀತಿ. ಮದ್ವೇ ಮನೀನಲ್ಲೇ ದೊಡ್ಡ್ ಗಲಾಟೆ ಎದ್ ಹೋಯ್ತ್. ಅವ್ರ್ ಕಡೇ ಪೂರೋಹಿತ್ರ್ ಇಬ್ರ್ ಊಟ ಗೀಟ್ ಮಾಡ್ದೇನೇ ಮದೀ ಮಂಟ್ಪಾ ಬಿಟ್ ಹೊರ್ಟೇ ಹೋದ್ರಂಬ್ರ್. ಅದೂ ಹೋಗ್ಬೇಕಾದ್ ಮುಂಚೇ ಅವ್ರ್ ಶಾಪಾ ಹಾಕೀ ಹೋದ್ರಂತೇ ಕಾಣೋ!. ಅವ್ನ ಹೇಳಿದ್ ತರಾ ನೋಡಿದ್ರೇ, ನಾನ್ ತಿಳ್ಕೊಂಡೇ ಹಂಗಾದ್ರೇ ಈ ಮದ್ವೇ ಸಕ್ಸಸ್ ಆಗೋದೇ ಇಲ್ಲಾ ಅಂತಾ! ಇದ್ ನನ್ನಪ್ಪ್ ಹೇಳಿದ್ ಮಾತ್. ಮದ್ವೇ ಮನೀನಲ್ಲಿ ಗಲಾಟೇ ಆಗೋದೇ, ವಾಲ್ಗದವ್ರ್ ಜೊತೇನಲ್ಲಿ, ಆಡುಗೆಯವ್ರ್ ಜೊತೇನಾಲ್ಲಿ, ಶ್ರಿಂಗಾರ್ ಮಾಡುವವರ್ ಜೊತೇನಲ್ಲೀ ಹೀಗೆ ನಡೆಯುತ್ತೆ ಮತ್ತು ನಡೆಯಲು ಸಾಧ್ಯವೂ ಉಂಟು. ಕಾರಣ ಇದನ್ನೆಳ್ಲಾ ಮೊದ್ಲೇ ಮಾತನಾಡಿ ಇಡ್ಬೇಕಂತೇ. ಮದ್ವೇ ಆದ್ ಮೇಲೆ ಅಥ್ವಾ, ಮದ್ವೇ ಮಂಟ್ಪಾದೊಳ್ಗೇ ಮಾತನಾಡ್ಲೇ ಬಾರ್ದು ಅಂತ ನಮ್ಮಪ್ಪ ನಂಗ್ ಹೇಳ್ತಿದ್ರು.!. ಈ ತರಾ ಜಗ್ಳಾ, ಗಿಗಳಾ ಮಾಡಿದ್ರೂ ಅನ್ನಿ, ಆ ಮದಿ ಅಸ್ಟಕ್ಕಸ್ಟೇ. ಮುಂದೆ ಅದ್ ಬರ್ಕತ್ ಬರ್ಲಿಕ್ಕಿಲ್ಲಾ ಅಂತ ನಮ್ ಅಪ್ಪ್ ಸದೀ ಮಾಸ್ಟ್ರೂ ಹೇಳ್ತಿದ್ದದ್ ಜ್ನಾಪ್ಕಾ. ಈ ಗಲಾಟೀ ಯಾಕ್ ಆಯ್ತೋ ಮಾರಾಯಾ ಅಂತ ಪ್ರಸಾದನ್ ಕೇಳ್ದೇ. ಅದಕ್ ಅವ್ನ್ ಹೀಂಗ್ ಹೇಳ್ದಾ ಕಾಣೀ. ಅದೇನೋ ನಿಮ್ಕಡೇ ಉಡುಪಿಯವ್ರಿಗೆಲ್ಲಾ ಹುಡ್ಗೀಗ್ ಮದ್ವೆಯಲ್ಲಿ ಎರ್ಡ್ ಕರಿಮಣೆ ಶಾಸ್ತ್ರ್ವಂತೇ. ನಿಮ್ ಕ್ವಾಟ್ದವ್ರಿಗ್ ಒಂದೇ ಕರಿಮಣಿ ಅಂತೆ ಕಾಣೋ. ಅದ್ ಹೌದೂ ಅಂದೇ ನಾನು. ಅದೇನೋ ಹೆಣ್ಣಿನ್ ಕಡೀ ಅವ್ರ್ ಇನ್ನೊಂದ್ ಕರಿಮಣೆ ತರ್ಲಿಲ್ಲಾ ಅಂತ ಹೇಳಿ, ನಿಮ್ಮ ಕರಿಮಣೆಯನ್ನೇ ವಾಪಾಸ್ ಕೊಡ್ತೇನೆಂತ್ ಹೇಳಿ ನಿಮ್ಮ ಕಡೇ ಒಬ್ಬ ಪುರೋಹಿತನ ಕೈಯಲ್ಲಿ ತೆಗ್ದ್ಕೊಂಡ್ ಹೋದ್ರಂತೇ. ಹಾಂಗ್ ಆ ಕರ್ಮಿಣೆಯನ್ನ ಹೆಣ್ಣಿನ್ ಕಡೇ ಪೂರೋಹಿತ್ರಿಗ್ ಕೊಡ್ವಾಗ , ನಿಮ್ ಕಡೇ ಪುರೋಹಿತ್ರು ಒಂದ್ ಶರತ್ತನ್ನ ಹಾಕಿದ್ರಂತೇ. ಅದೇನೆಂದ್ರೇ, ಅವ್ರು ಮತ್ತೇ ಈ ಕರ್ಮಿಣೆಯನ್ನ, ವಾಪಾಸ್ಆ ಪೂರೋಹಿತ್ರಿಗೇ ಕೊಡ್ಬೇಕಂತ್ ಹೇಳಿದ್ರಂತೇ ಮಾರಾಯಾ! ಆದ್ರೆ ಅವ್ರ್ ಹೇಳಿದ್ ಹಾಂಗ್ ಅವ್ರ್ ಕೊಡ್ಲಿಲ್ಲೇ. ಆ ತೆಕೊಂಡ್ ಹೋದ್ ಕರೀಮಣೆಯನ್ನ್ ಈ ಶ್ರೀಧರ್ ರಾವ್ ಅಣ್ಣನಿಗ್ ಕೊಟ್ರಂತೇ. ಸರಿ ಅಸ್ಟಕ್ಕೇ ದೊಡ್ಡ ಕಾಳ್ಗವೇ ಆಯ್ತೂ ಅಂತ ಹೇಳಿದ್ರು ಕಾಣೋ. ಆ ಸ್ರೀಧರ್ ರಾವ್ ಅಣ್ಣನ ಅಳಿಯನಂತೂ ಕಾಣ್ಕಂಬ್ರ್. ಅವ್ರಿಗೆ ಹೊಡೀಲಿಕ್ಕೇ ಹೋದ್ರಂತೋ?
ಈಗ ಏನ್ ಆಯ್ತೋ? ಮದ್ವೇ ಆಯ್ತೋ ಇಲ್ವೋ?
ಅದ್ಕ್ಕೆ ಪ್ರಸಾದ್ ಹೇಳ್ದಾ, ಅಯ್ಯೋ ಮದ್ವೇನೂ ಆಯ್ತು. ಮದ್ವೇ ಆದ್ ೩ ತಿಂಗ್ಳಿಗ್ ಡೈವೋರ್ಸ್ ಕೂಡಾ ನಡೀತಂತೋ! ಆ ಹುಡ್ಗೀಗ್ ಯಾವ್ದೋ ಹಂಗ್ಳೂರ್ ಕಡೇ ಮದ್ವೇ ಕೂಡಾ ಅಯ್ತಂತೇ ಮಾರಾಯ ಅಂದಾ!. ಅವ್ಳೀಗ್ ಒಂದು ೧ ತಿಂಗ್ಳ್ ಹೆಣ್ಮಗೂ ಕೂಡಾ ಆಯ್ತೆಂತ್ ಮೊನ್ನೆ ಮೊನ್ನೆ ಹೇಳ್ದ ಕಣೋ ಅಂತ ಹೇಳಿ ತನ್ನ ಕಥೆಯನ್ನ ಮುಗಿಸ್ದಾ ಅನ್ನಿ.
ನಾನ್ ತಿಳ್ಕೊಂಡೇ ಅಯ್ಯೋ ಈ ಪ್ರಪಂಚವೇ? ಎಂತೆಂತಾ ಕಥೀ ನಡೀತಿರ್ತದೆ ಈ ಕಲಿಯುಗದಲ್ಲೀ ಅಂತ ಮತ್ತೆ ಇಡ್ಲೀ ,ವಡಾ ತಿನ್ಲಿಕ್ ಇವತ್ ಮೈಯಾಸಿಗ್ ಹೊಟ್ವೀ ಕಂಡ್ರ್ಯಾ.
ಬರೆದವರು ಪಾರಂಪಳ್ಳೀ ಸುರೇಂದ್ರ ಉಪಾಧ್ಯರು
ಹವ್ಯಾಸೀ ಜ್ಯೋತಿಷ್ಯಗಾರರೂ, ರೇಕೀ ಮಾಸ್ಟರ್ ಕೂಡಾ. ೧೪-೦೪-೨೦೧೬
No comments:
Post a Comment