Thursday, June 9, 2016

ಅಂಬರಕೇರಿಸಿದ ಬಿಂಬಗಳು


ಚಿತ್ರ: ಇಂಟರ್ನೆಟ್ ಕೃಪೆ
https://www.facebook.com/mevlana/photos/a.424140758184.199763.64655903184/10154136236973185/?type=3&theater

ಕಾಡಿನ
ಕೂಸುಗಳ
ಬಿಂಬಗಳು
ಅಂಬರದ
ಚಂದಿರನಂತೆ
ಬೆಳಗಲು
ಕರಿಕಲ್ಪನೆಗಳು
ಗರಿಗೆದರಿ
ಕನಸುಗಳ
ನವಿಲಾಗಿ
ನವಿರಾಗಿ
ನಲಿನಲಿದು
ನಾಳೆಯ
ನವ ನಡೆಯ
ನಾದವ
ನೂದುವ
ಕಿನ್ನರಿಯ
ಕೈಗಿತ್ತು
ನಾಭಿಯಿಂ
ನೆಗೆವ
ಓಂಕಾರದ
ಒರತೆಯನೆಬ್ಬಿಸಿ
ಮಮತೆಯ
ಮಲ್ಲಿಗೆಯ
ಮುದವಿತ್ತು
ಬತ್ತಿದ ನೆಲದಲಿ
ನಗೆಮುತ್ತುಗಳ ಬಿತ್ತಿ
ಹೆಮ್ಮರದ ಬದುಕು
ಮೊಳೆಯಲು
ಪ್ರೇಮದ ಮಳೆ
ಮಾಗುವ
ಮುಗಿಲಿಗೆ
ಮುದವಿಡುವ
ಮದ್ದು ಅರೆದಿತ್ತು

No comments:

Post a Comment