Monday, June 13, 2016

ಏಕವ್ಯಕ್ತಿ ಯಕ್ಷಗಾನಯಾನದ ಸುತ್ತ ವಿದ್ವಾನ್ ಗಣಪತಿ ಭಟ್ಟರೊಂದಿಗೆ ಸಂವಾದ

ಏಕವ್ಯಕ್ತಿ ಯಕ್ಷಗಾನಯಾನದ ಸುತ್ತ ವಿದ್ವಾನ್ ಗಣಪತಿ ಭಟ್ಟರೊಂದಿಗೆ ಸಂವಾದ


ಮಂಟಪ ಪ್ರಭಾಕರ ಉಪಾಧ್ಯರ ಸುತ್ತ ಶತಾವಧಾನಿ ಡಾ. ಗಣೇಶರು ಪರಿಕಲ್ಪಿಸಿ, ಸಾಹಿತ್ಯ ರಚಿಸಿ ನಿರ್ದೇಶಿಸಿದ ಏಕವ್ಯಕ್ತಿ ಯಕ್ಷಗಾನವು ಒಂದು ಸ್ತ್ರೀವೇಷವನ್ನು ಆಧರಿಸಿಕೊಂಡು ಯಕ್ಷಗಾನದ ಶಾಸ್ತ್ರೀಯ ಅಂಶಗಳನ್ನು ಎತ್ತಿಹಿಡಿದು ಯಕ್ಷಗಾನಕ್ಕೆ ಯಕ್ಷಗಾನದ ಒಳಗೆ, ಹೆಚ್ಚಾಗಿ ಯಕ್ಷಗಾನದ ಹೊರಗೆ ಇನ್ನೂ ಹೆಚ್ಚಿನ ಶಾಸ್ತ್ರೀಯ ಮಾನ್ಯತೆ ಕೊಡಿಸುವತ್ತ ಅಭೂತಪೂರ್ವ ಯಶಸ್ಸನ್ನು ಕಂಡಿರುವುದು ಪ್ರಜ್ನಾವಂತ ಪ್ರೇಕ್ಷಕರಲ್ಲಿ ಈವಾಗಲೇ ಮನೆಮಾತಾಗಿದೆ.

ಡಾ. ಗಣೇಶರ ಪ್ರಯತ್ನಕ್ಕೆ ನ್ಯಾಯ ಒದಗಿಸುವತ್ತ ಏಕವ್ಯಕ್ತಿ ತಂಡದ ಎಲ್ಲರ ಪರಿಶ್ರಮ ಮತ್ತು ಕಾಣಿಕೆ ಸಾಕಷ್ಟು ಸೇರಿದೆ. ಡಾ. ಗಣೇಶರ ಏಕವ್ಯಕ್ತಿ ಯಕ್ಷಗಾನದ ಸೃಷ್ಟಿಗೆ ಮೂಲ ಸ್ಫೂರ್ತಿಯಾದ ಮಂಟಪರ ಅನುಭವ, ಅಭಿವ್ಯಕ್ತಿ ಕುರಿತು ಸಾಕಷ್ಟು ವಿಚಾರ ಮತ್ತು ಸಂವಾದಗಳು ಈವಾಗಲೇ ಬಂದುಹೋಗಿವೆ.  

ಏಕವ್ಯಕ್ತಿ ಯಕ್ಷಗಾನದ ಹಿಮ್ಮೇಳದಲ್ಲಿ ಭಾಗವತರಾಗಿ ನ್ಯಾಯ ಒದಗಿಸಿದ ವಿದ್ವಾನ್ ಗಣಪತಿ ಭಟ್ಟರು ಕರ್ನಾಟಕೀ ಶಾಸ್ತ್ರೀಯ ಹಾಡುಗಾರಿಕೆಯಲ್ಲಿ ಪರಿಣತರು. ಶಾಸ್ತ್ರೀಯ ನೆಲೆಗಟ್ಟಿನ ಆಧಾರದಲ್ಲಿ ಅವರು ಸಮೂಹ ಯಕ್ಷಗಾನದ ಭಾಗವತಿಗೆಯಲ್ಲಿ ಏಕವ್ಯಕ್ತಿ ಯಕ್ಷಗಾನದ ಅನುಭವದ ಮೊದಲೇ ಸಂಗೀತದ ಸಾಮರ್ಥ್ಯ ಮತ್ತು ಚೆಲುವನ್ನು ಮೂಡಿಸಿದವರು. ಅವರ ಶಾಸ್ತ್ರೀಯ ಗಾಯನದ ಸಾಮರ್ಥ್ಯವೇ ಅವರನ್ನು ಏಕವ್ಯಕ್ತಿ ಯಕ್ಷಗಾನಕ್ಕೆ ಎಳೆದು ತಂದಿತು.

ಗಣೇಶರಂತಹ ಮೇರು ಪ್ರತಿಭೆಯ ಪ್ರಾಮಾಣಿಕ ಪ್ರಯತ್ನಕ್ಕೆ ನ್ಯಾಯ ಒದಗಿಸುತ್ತಾ ಹಿನ್ನಲೆ ಗಾಯನದ ವಿಭಾಗದಲ್ಲಿ ಜಯಶೀಲರಾಗಿ ತಮ್ಮ ಗಾಯನದ ಮೂಲಕ ಪ್ರೇಕ್ಷಕರನ್ನು ಮುಟ್ಟಿ ರಂಜಿಸಿ ಮೆಚ್ಚಿಸಿದವರು ವಿದ್ವಾನ್ ಗಣಪತಿ ಭಟ್ಟರು. ಈ ಯಶಸ್ಸಿನ ಹಿಂದೆ ಮತ್ತು ಮುಂದೆ ಅವರ ತಪಸ್ಸು, ಅಭಿವ್ಯಕ್ತಿ ಮತ್ತು ಅನುಭವಗಳ ಸುತ್ತ ಒಂದು ದೃಶ್ಯ ಸಂವಾದ, ನಾಲ್ಕು ಭಾಗಗಳಲ್ಲಿ!

ಭಾಗ ೧:

ಭಾಗ ೨:

ಭಾಗ ೩:

ಭಾಗ ೪:

ಏಕವ್ಯಕ್ತಿ ಯಕ್ಷಗಾನದ ಹಿನ್ನಲೆ ಗಾಯನದ ಕೆಲವು ತುಣುಕುಗಳಿಗೆ ಕೆಳಗಿನ ಕೊಂಡಿಯನ್ನು ಒತ್ತಿ!
ಏಕವ್ಯಕ್ತಿ ಯಕ್ಷಗಾನದ ಹಿನ್ನಲೆ ಗಾಯನದ ಕೆಲವು ತುಣುಕುಗಳು

No comments:

Post a Comment