Tuesday, June 7, 2016

ಜೂನ್ ೨೫ರಂದು ಶಿವಮೊಗ್ಗದಲ್ಲಿ ಮತ್ತೊಂದು ಯಕ್ಷಸಾಹಸ



ಅಭ್ಯುದಯ (ರಿ) ಮತ್ತು ಮಂಟಪ ಕುಟುಂಬದವರ ಜಂಟಿ ಸಂಯೋಜನೆಯಲ್ಲಿ ಶಿವಮೊಗ್ಗದಲ್ಲಿ ಮತ್ತೊಂದು ಉಚಿತ ಪ್ರವೇಶದ ಅಪರೂಪದ ಆಟ ಜೂನ್ ೨೫ ಸಂಜೆಗೆ.

ಈ ಬಾರಿಯ ವಿಶೇಷವೆಂದರೆ ಸಂಪ್ರದಾಯಬದ್ಧವಾಗಿ ಪೂರ್ಣ ಪ್ರಮಾಣದಲ್ಲಿ ಪ್ರಸಂಗ ಸಾಹಿತ್ಯದ ಎಲ್ಲಾ ಪದ್ಯಗಳಿಗೂ ನ್ಯಾಯ ಕೊಟ್ಟು ಪ್ರದರ್ಶನವಿಟ್ಟಿರುವುದು.

ಶ್ರೀ ದೇವಿದಾಸ ವಿರಚಿತ ಬಬ್ರುವಾಹನ ಕಾಳಗದ ಪ್ರಸಂಗವಿರುತ್ತದೆ. ಕುವೆಂಪು ರಂಗಮಂದಿರದಲ್ಲಿ ಸಂಜೆ ನಾಲ್ಕು ಗಂಟೆಗೆ ಪ್ರಾರಂಭವಗುವ ಆಟವು ೪-೫ ಗಂಟೆಗಳ ಕಾಲ ಸಾಗುವ ಸಾಧ್ಯತೆ ಇದೆ.

ಅನಧಿಕೃತ ವರದಿಯ ಪ್ರಕಾರ ಪಾತ್ರವರ್ಗ ಈ ರೀತಿ ಇದೆ.

ಹಿಮ್ಮೇಳ:

ಭಾಗವತರು: ಸರ್ವೇಶ್ವರ ಹೆಗಡೆ, ರಾಮಕೃಷ್ಣ ಹಿಲ್ಲೂರು
ಮದ್ದಲೆ: ಅನಂತಪದ್ಮನಾಭ ಫಾಠಕ್, ದೇವದಾಸ ರಾವ್
ಚೆಂಡೆ: ಶ್ರೀನಿವಾಸ ಪ್ರಭು

ಮುಮ್ಮೆಳ:

ಬಾಲಗೋಪಾಲ: ಗುರುರಾಜ ಐತಾಳ
ಪೀಠಿಕೆ ಸ್ತ್ರೀವೇಷ: ಮಂಟಪ ಸಹೋದರಿಯರಾದ ಮಾಧುರಿ ಮತ್ತು ಪ್ರಮದಾ

ಕಥಾನಕದಲ್ಲಿ:

ಅರ್ಜುನ: ಐರೋಡಿ ಗೋವಿಂದಪ್ಪ
ಚಿತ್ರಾಂಗದೆ: ಮಂಟಪ ಪ್ರಭಾಕರ ಉಪಾಧ್ಯ
ಬಬ್ರುವಾಹನ: ಆಲೂರು ನಾಗರಾಜ
ಉಲೂಪಿ: ಬೇಗಾರು ಶಿವಕುಮಾರ್
ಮಂತ್ರಿ: ಕೃಷ್ಣಮೂರ್ತಿ ಉರಾಳ
ಪ್ರದ್ಯುಮ್ನ: ಮಹಾಬಲ ನಾಯಕ್
ವೃಷಕೇತು: ಉಪ್ಪುಂದ ಸುಧಾಕರ
ಮಹಾಶೇಷ: ಬೆಳೆಯೂರು ಸಂಜಯ
ಕೃಷ್ಣ: ಮನೋಜ್ ಭಟ್
ಹಾಸ್ಯ: ಲಕ್ಷ್ಮಣ ಹೊಸಂಗಡಿ

ವೇಷ ಭೂಷಣ ಮತ್ತು ಪ್ರಸಾಧನ ಸಹಕಾರ: ಉರಾಳ ಬಳಗ, ಗೋವಿಂದ ಉರಾಳ, ರಾಜಶೇಖರ ಹಂದೆ

ಕಾಲ ಬದಲಾದಂತೆ ಯಕ್ಷಗಾನ ಪ್ರಸಂಗದ ಪದ್ಯಗಳನ್ನು ರಂಜನೆ ಮತ್ತು ಸಂಯೋಜನೆಗೆ ಅನುಕೂಲವಾಗುವಂತೆ ಮೊಟಕುಗೊಳಿಸುತ್ತಾ ಬಂದಿರುವುದರಲ್ಲಿ ಏಳುಬೀಳುಗಳಿವೆ. ಅದೇ ರೀತಿಿ ಇಡೀ ಪ್ರಸಂಗವನ್ನು ಸಾಹಿತ್ಯಕ್ಕೆ ೧೦೦ ಪ್ರತಿಶತ: ನ್ಯಾಯಕೊಟ್ಟು ಆಡಿಸುವುದರಲ್ಲಿ ಕಲಾ ಚೌಕಟ್ಟು ರಂಗ ಪ್ರಸ್ತುತಿ ಮತ್ತು ಪ್ರಸಂಗ ಕಥನದ  ಕುರಿತಾಗಿ ಹೆಚ್ಚಿನ ನ್ಯಾಯ ಸಿಗುವುದು ಖಂಡಿತವಾದರೂ ಅವಸರದ ಈ ಯುಗದಲ್ಲಿ ರಸ ಮತ್ತು ರಂಜನೆಯ ಮೇಲೆ ಯಾವ ರೀತಿಯ ಪರಿಣಾಮವಿರುತ್ತದೆ ಎಂಬುದು ಕುತೂಹಲಕಾರಿಯಾದ ಅಂಶವಾಗಿದೆ. ಈ ಕುತೂಹಲವೇ ಪ್ರಜ್ನಾವಂತ ಪ್ರೇಕ್ಷಕರನ್ನು ಈ ಕಾರ್ಯಕ್ರಮಕ್ಕೆ ಹೆಚ್ಚಿನಮಟ್ಟದಲ್ಲಿ ಸೆಳೆಯಲಿದೆ.

No comments:

Post a Comment