Sunday, June 5, 2016

ನಿಮ್ಮ ಸಹಾಯ ಇರಲಿ! -ಯಕ್ಷಗಾನದ ಸುತ್ತ ಪ್ರೇಕ್ಷಕನ ಧನಾತ್ಮಕ ಪ್ರಭಾವ ಹೆಚ್ಚಿಸುವತ್ತ ಒಂದು ಸಮೀಕ್ಷೆ!!


ಸಮೀಕ್ಷೆಗಾಗಿ, ಈ ಕೊಂಡಿಯನ್ನು ಒತ್ತಿರಿ.
https://docs.google.com/forms/d/1nt95v-omf0_tpv-q1Qgkez9wv_IJ827xCYHptRmI2oc/viewform

ಅಭೂತಪೂರ್ವ ಕಲೆಯಾದ ಯಕ್ಷಗಾನ ನಮ್ಮ ಬದುಕಿನ ಸೌಭಾಗ್ಯಗಳಲ್ಲೊಂದು. ಈ ಕಲೆಯ ಉಳಿವು ಬೆಳೆವಿಗೆ ಎಲ್ಲಾ ರೀತಿಯ ಹಕ್ಕುದಾರರು ಸಲ್ಲುತ್ತಿದ್ದಾರೆ. ನಮ್ಮ ಬದುಕಿನ ಬದಲಾವಣೆಯ ವಿದ್ಯಮಾನಗಳ ಸುತ್ತ ಯಕ್ಷಗಾನ ಪ್ರಪಂಚವೂ ಬದಲಾಗುತ್ತಿದೆ. ಈ ಬದಲಾವಣೆಯ ವಿದ್ಯಮಾನಗಳಲ್ಲಿ, ಕಾಳನ್ನು ಉಳಿಸಿ ಜೊಳ್ಳನ್ನು ಹಾರಿಸಿ ಕಲೆಯ, ಕಲಾಭಿವ್ಯಕ್ತಿಯ ಮತ್ತು ಕಲಾರಸಗ್ರಾಹಣವನ್ನು ಇನ್ನಷ್ಟು ಶ್ರೀಮಂತಗೊಳಿಸುವತ್ತ ಪ್ರೇಕ್ಷಕನ ಪಾತ್ರವೂ ಹಿರಿದು.

ಅಂತರ್ಜಾಲದಲ್ಲಿ ಸೇರಿರುವ ಯಕ್ಷಗಾನ ಅಭಿಮಾನಿ ಪ್ರೇಕ್ಷಕವರ್ಗದವರ ಧ್ವನಿಯನ್ನು ವಸ್ತುನಿಷ್ಟವಾಗಿ ಬಿತ್ತುವ ಮೂಲಕ ಸಮಗ್ರ ಯಕ್ಷಗಾನದ ವಿದ್ಯಮಾನಗಳಲ್ಲಿ ಪ್ರೇಕ್ಷಕನ ಸಾಧ್ಯತೆ ಬಾಧ್ಯತೆಯನ್ನು ಹೆಚ್ಚಿಸುವತ್ತ ಇದೊಂದು ಪ್ರಾಮಾಣಿಕ ಪ್ರಯತ್ನ!

ದಯವಿಟ್ಟು ಆಶಾವಾದದಿಂದ, ಧನಾತ್ಮಕವಾಗಿ ರಚನಾತ್ಮಕವಾಗಿ ಸ್ಪಂದಿಸಿ ಈ ಪ್ರಯತ್ನವನ್ನು ಯಕ್ಷಗಾನಕ್ಕಾಗಿ ಒಂದು ಅಭೂತಪೂರ್ವ ಪ್ರೇಕ್ಷಕನ ಕೊಡುಗೆಯಾಗಿ ಪರಿವರ್ತಿಸುವತ್ತ ನಿಮ್ಮ ಕಾಣಿಕೆಗೆ ಕೃತಜ್ನತೆಯ ನಮನಗಳು!

ಒಬ್ಬರು ಒಂದೇ ಬಾರಿ ಸಮೀಕ್ಷೆಗೆ ಉತ್ತರಿಸುವತ್ತ ನಿಮ್ಮ ಗೂಗಲ್ ಲಾಗಿನ್ ಬೇಕಾಗುತ್ತದೆ. ನಿಮ್ಮ ಗುರುತು ಸಂಪೂರ್ಣವಾಗಿ ಗೋಪ್ಯವಾಗಿ ಇರುವುದರಿಂದ ಯಾವುದೇ ಅಳುಕು ಮತ್ತು ಹಂಗಿಲ್ಲದೇ, ವಸ್ತುನಿಷ್ಟವಾಗಿ, ನಿಮ್ಮ ಆತ್ಮಸಾಕ್ಷಿಗೆ ಸಲ್ಲುವಂತೆ ಉತ್ತರಿಸುತ್ತೀರಿ ಎಂದು ನಂಬಿಕೆ.

ನಿಮ್ಮ ಉತ್ತರಗಳನ್ನು ಸಂಪಾದಿಸಲು ಸ್ವಲ್ಪ ಕಾಲ ಅವಕಾಶವಿರುತ್ತದೆ.

ಕನಿಷ್ಟ ಒಂದು ಸಾವಿರ ಮಂದಿಯಾದರೂ ಭಾಗವಹಿಸಲಿ ಎಂಬ ಪ್ರಾರ್ಥನೆ. ಸಮೀಕ್ಷೆಯ ಉತ್ತರಗಳನ್ನು ಸಂಪೂರ್ಣವಾಗಿ ಹಂತಹಂತವಾಗಿ ಬಿತ್ತರಿಸಿ ಅವುಗಳನ್ನು ಪರಿಶೀಲಿಸಿ ಪಾಠಗಳನ್ನು ಸಾರಲಾಗುವುದು!

ಸಮೀಕ್ಷೆಯಲ್ಲಿ ಭಾಗವಹಿಸುವವರಿಗೆ ಸಮೀಕ್ಷೆಯ ಸಾರಾಂಶವನ್ನು ನೋಡುವ ಅವಕಾಶವೂ ಇರುತ್ತದೆ.

ಸಮೀಕ್ಷೆಗಾಗಿ, ಈ ಕೊಂಡಿಯನ್ನು ಒತ್ತಿರಿ.
https://docs.google.com/forms/d/1nt95v-omf0_tpv-q1Qgkez9wv_IJ827xCYHptRmI2oc/viewform

ನಮನಗಳೊಂದಿಗೆ,
ನಟರಾಜ ಉಪಾಧ್ಯ

No comments:

Post a Comment